ಮೋದಿ ಪ್ರಾಮಾಣಿಕತೆ ಪ್ರಶ್ನಿಸುವ ರಾಹುಲ್, ತಮ್ಮ ಅವಧಿಯ ಕೇಂದ್ರ ಸರ್ಕಾರದ ಹಗರಣಗಳ ಬಗ್ಗೆ ಉತ್ತರ ಕೊಡಲಿ

ರಾಜ್ಯ

ರಾಹುಲ್ ಗಾಂಧಿಯವರು ಬೆದರಿಸಿ ಗೂಂಡಾಗಿರಿ ಮೂಲಕ‌ ಚುನಾವಣಾ ಬಾಂಡ್ ಗಳ ಹಣ ಸಂಗ್ರಹಿಸಿದ್ದಾರೆ ಎಂದು ಹೇಳುವ ರಾಹುಲ್ ಗಾಂಧಿ‌ ಅವರು ಮನಮೋಹನ್ ಸಿಂಗ್ ಅವರ ಕಾಲದಲ್ಲಿ‌ ನಡೆದ 13 ಲಕ್ಷ ಕೋಟಿ ಹಣದ ಬಗ್ಗೆ ಮೊದಲು ಹೇಳಲಿ ಎಂದು ವಿಧಾನ ಪರಿಷತ್ ಸದಸ್ಯ ಒತ್ತಾಯಿಸಿದರು.
ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.

 

 

 

ಭಯೋತ್ಪಾದನೆಯು ಗೂಂಡಾಗಿರಿ ಇದ್ದಿದ್ದು, ಕಾಂಗ್ರೆಸ ನಲ್ಲಿ, ಮೋದಿಯವರು ಬಂದ‌ ಮೇಲೆ ಭಯೋತ್ಪಾದನೆ ನಿರ್ಮೂಲನೆ ಆಗುತ್ತಿದೆ. ಭಯೋತ್ಪಾದನೆಯನ್ನು ಕಾಂಗ್ರೆಸ್ ಪೋಷಿಸುತ್ತಿದೆ. ಕರ್ನಾಟಕ ಸರ್ಕಾರದ ಮೈ ಬ್ರದರ್ ಪಾಲಿಸಿಯೇ ಬೆಂಗಳೂರಿನ‌ ರಾಮೇಶ್ವರಂ ಸ್ಪೋಟಕ್ಕೆ ಕಾರಣವಾಗಿದೆ.
ಮೋದಿಯವರು ಬಂದ‌ ಮೇಲೆ ಎಲ್ಲೆಲ್ಲಿಂದ ಎಷ್ಟು ಹಣ ಬಂತು ಎಂದು ಪಾರದರ್ಶಕತೆ ಇದೆ. ಆದರೆ ನಿಮ್ಮ ಆಡಳಿತದಲ್ಲಿ‌ಎಷ್ಟು ಹಣ ಎಲ್ಲಿಂದ ಬಂತು ಎಂದು ಮೊದಲು ಹೇಳಿ, ದೇಶದಲ್ಲಿ 692 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಪರಿಹಾರ ಕೊಟ್ಟಿದ್ದಿರಾ ಎಂದು ಉತ್ತರ ಹೇಳಿ,ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಳಿ ತಪ್ಪಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರ ಮೇಲೆ‌ಏನು ಕ್ರಮ ತೆಗೆದುಕೊಂಡಿದ್ದಿರಾ? ಕಾನೂನು ಸುಸುವ್ಯಸ್ಥೆ ವಿಧಾನ ಸೌಧದ ಮೆಟ್ಟಿಲ ಮೇಲೆ ಹಳಿ ತಪ್ಪಿದೆ. ಬರ ಪರಿಹಾರದ ಹಣ ಕೊಟ್ಟಿಲ್ಲ ಎಂದು ಸುಪ್ರೀಂ ಕೋರ್ಟಿಗೆ ರಿಟ್ ಹಾಕಿದ್ದಾರೆ. ಯಡಿಯೂರಪ್ಪ‌ ಸರ್ಕಾರ ಇದ್ದಾಗ ಎನ್ ಡಿ ಆರ್ ಎಫ್ ನಿಯಮ‌ ಮೀರಿ‌ ಪರಿಹಾರ ಕೊಟ್ಟಿದ್ದರು. ನೀವು ಯಾಕೆ ಕೊಟ್ಟಿಲ್ಲ. ಇದಕ್ಕೆ ನೀವು ಕ್ರಮ ತೆಗೆದುಕೊಳ್ತಿರಾ? ವಿದ್ಯಾರ್ಥಿ ವೇತ‌ನ, ರೈತರಿಗೆ ಪರಿಹಾರ ಕೊಟ್ಟಿಲ್ಲ. ರಸ್ತೆ ಕಾಮಗಾರಿ‌ ನಡೆದಿಲ್ಲ ಇದಕ್ಕೆಲ್ಲಾ ರಾಹುಲ್ ಗಾಂಧಿ ಉತ್ತರ ಕೊಡಬೇಕು. ಈ‌ ಸರ್ಕಾರ ಜನ ವಿರೋಧಿ‌ ಸರ್ಕಾರದ ಬಗ್ಗೆ .ಮಾತಾಡಬೇಕು. ಬಿಜೆಪಿ‌ ಸರ್ಕಾರದ ಬಗ್ಗೆ ಇಡೀ ಜಗತ್ತೆ ಮೆಚ್ಚಿದೆ. ಬೇರೆ ಬೇರೆ ಆಯಾಮಗಳಲ್ಲಿ ಯುವ‌ಜನೆತೆಗ ಉದ್ಯೋಗ ಸೃಷ್ಠಿಗೆ ಸಂಕಲ್ಪ ಪತ್ರದಲ್ಲಿ ಹೇಳಿದೆ. ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಜಿಲ್ಲಾಧ್ಯಕ್ಷ ಮುರುಳಿ, ವಕ್ತಾರರಾದ ನಾಗರಾಜ್ ಬೇದ್ರೆ, ನಗರಾಧ್ಯಕ್ಷ ಚಾಲುಕ್ಯ ನವೀನ್, ಮಾಧ್ಯಮ ಸಂಚಾಲಕ ದಗ್ಗೆ ಶಿವಪ್ರಕಾಶ್,  ಛಲವಾದಿ ತಿಪ್ಪೇಸ್ವಾಮಿ,  ಮಾಧ್ಯಮ ಸಹ ಪ್ರಮುಖ್ ಯಶವಂತ್, ಜಿಲ್ಲಾ ಕಚೇರಿ‌ ಕಾರ್ಯದರ್ಶಿ ಶಂಭು ಇದ್ದರು.

Leave a Reply

Your email address will not be published. Required fields are marked *