ಸರ್ವಾಧಿಕಾರ ಮತ್ತು ಸಂವಿಧಾನದ ರಕ್ಷಣೆ ನಡುವಿನ ಹೋರಾಟ: ಬಿಎನ್ ಚಂದ್ರಪ್ಪ

ರಾಜ್ಯ

ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಸರ್ವಾಧಿಕಾರ ನಡೆಸುತ್ತಿರುವ ಬಿಜೆಪಿ‌ ಸರ್ಕಾರವನ್ನು ಇದೀಗ ಬದಲಾಯಿಸಿ‌ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಎಐಸಿಸಿ ಕಾರ್ಯದರ್ಶಿ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ರಾಜ್ಯದಲ್ಲಿ ಕೊಟ್ಟ ಮಾತಿನಂತೆ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ನೀಡಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಆಡಳಿತ ನಡೆಸಲು, ಸರಿಯಾದ ಕೆಲಸ ಮಾಡಲು ಬಿಡುತ್ತಿಲ್ಲ. ಆದ್ದರಿಂದ ಬದಲಾವಣೆಯ ಸಮಯ ಬಂದಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಚಂದ್ರಪ್ಪ ಅವರನ್ನು ಗೆಲ್ಲಿಸಬೇಕಿದೆ ಎಂದರು. ಅಭ್ಯರ್ಥಿ ಚಂದ್ರಪ್ಪ ಮಾತಾಡಿ, ಸರ್ವಾಧಿಕಾರ ಮತ್ತು ಸಂವಿಧಾನ ರಕ್ಷಣೆ ನಡುವಿನ ಚುನಾವಣೆ ಇದಾಗಿದೆ. ಮಿತ್ರ ಪಕ್ಷಗಳು ಸಂವಿಧಾನ ರಕ್ಷಣೆ ಮಾಡುವಲ್ಲಿ ನಾವು ಬದ್ದರಾಗಿದ್ದೇವೆ. ಕೇಂದ್ರದ ಮಾಜಿ ಸಚಿವರೊಬ್ಬರು ಪದೇ ಪದೇ ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿದೂ, ಅದರ ಬಗ್ಗೆ ಮೋದಿ ಚಕಾರವೆತ್ತಲಿಲ್ಲ. ಯಾವುದೇ ಸ್ಪಷ್ಟತೆಯನ್ನು ಸಂವಿಧಾನದ ಬಗ್ಗೆ ಮಾತಾಡಲಿಲ್ಲ. ಜನರು ಕಂಗಾಲಾಗಿದ್ದಾರೆ.ಮೋದಿ ಅವರು ಯಾವುದೇ ಒಂದು‌ ಕುಟುಂಬಕ್ಕೆ ಸಹಾಯ ಮಾಡಿದ್ದಾರೆಂದು ಬಿಜೆಪಿ‌ ಅಥವ ಕುಮಾರಸ್ವಾಮಿ ಹೇಳಬೇಕು. ಬಿಜೆಪಿ‌ ಜನರ ಭಾವನೆಗಳನ್ನು ಕೆರಳಿಸಿ‌ ಚುನಾವಣೆ ಗೆದ್ದಿದ್ದಾರೆ. ಅವರಿಗೆ ಗೊತ್ತಿದೆ,ಅಭಿವೃದ್ದಿ ಮಾಡಿ‌ನಾವು ಗೆಲ್ಲುವುದಿಲ್ಲ ಎಂದು ಗೊತ್ತಿದೆ
‌ನಾವು ಸೋತರೂ, ಅಭಿವೃದ್ದಿ ಬಗ್ಗೆ ಚಿಂತನೆ ಮಾಡುತ್ತೇವೆ. ಜನತೆ ಆತಂಕದಲ್ಲಿದ್ದಾರೆ. ಜನತೆ ಇಂದು‌ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಂದು‌ ದೇಶದಲ್ಲಿ ಆಶ್ಚರ್ಯಕರ ಫಲಿತಾಂಶ ಬರುತ್ತದೆ. ಜಾತ್ಯಾತೀತ ತತ್ವ ಸಂವಿಧಾನದ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತವ‌ನ್ನು ಕೊಡಿ ಎಂದು‌ ಮನವಿ‌ ಮಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಪೀರ್ ಮಾತಾಡಿ, ನೆಮ್ಮದಿಯಿಂದ ದೇಶದ ಜನತೆ ಬದುಕಬೇಕೆಂದು ಇಂದು‌ ಮಿತ್ರ ಪಕ್ಷಗಳೆಲ್ಲಾ ಸೇರಿ I N D I A ಒಕ್ಕೂಟ ಮಾಡಿಕೊಂಡಿದ್ದೇವೆ. ನಾವೂ ಕೂಡ ಎಲ್ಲೆಡೆ ಪ್ರಚಾರ ಮಾಡಿದ್ದು, ಮಿತ್ರ ಪಕ್ಷಗಳು ಕೂಡಾ ಅವರದ್ದೇ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ದೇಶದಲ್ಲಿ ಒಳ್ಳೆಯ ವಾತಾವರಣ ಮೂಡಬೇಕು ಎಂಬ ಕಾರಣಕ್ಕೆ ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡುತ್ತಿದ್ದೇವೆ ಎಂದರು. ಇದೇ ಸಮಯದಲ್ಲಿ ಮಾತಾಡಿದ ಆಮ್ ಆದ್ಮಿ ಪಕ್ಷ ಜಿಲ್ಲಾಧ್ಯಕ್ಷ ಜಗದೀಶ್,ಸಂವಿಧಾನ ಬದಲು ಮಾಡುತ್ತೇವೆ ಎಂದು ಹೇಳುತ್ತಿರುವ ಬಿಜೆಪಿ ಅವರನ್ನು ರೈತರು ತಮ್ಮ ಊರುಗಳ‌ ಒಳಗೆ ಬಿಟ್ಟುಕೊಳ್ಳಬೇಡಿ, ಧರ್ಮದ ಹೆಸರು ಹೇಳಿಕೊಂಡು ಚುನಾವಣೆ ಮಾಡುವ ಬಿಜೆಪಿ ಗೆದ್ದರೆ, ಸಂವಿಧಾನವನ್ನು ಧೂಳಿಪಟ ಮಾಡುತ್ತಾರೆ. ಕಾಂಗ್ರೆಸ್ ಇಷ್ಟು ವರ್ಷಗಳು ಆಡಳಿತ ಮಾಡಿದರೂ, ಇಷ್ಟೊಂದು ಹಗರಣ ಭ್ರಷ್ಠಾಚಾರ ನಡೆಸಿರಲಿಲ್ಲ. ಆದರೆ ಬಿಜೆಪಿ ಎಲೆಕ್ಟ್ರೋ ಬಾಂಡ್ ಗಳ ಹಗರಣ‌ ನಡೆದಿದೆ. ಸಂವಿಧಾನದ ಕಗ್ಗೊಲೆಯಾಗಿದೆ.‌ನ್ಯಾಯದ ಬಗ್ಗೆ ಮಾತಾಡಿದ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ಬರಲು ಬಿಟ್ಟರೆ ಒಬ್ಬರಿಗೊಬ್ಬರಿಗೆ ಜಗಳವಿಡುತ್ತಾರೆ. ಆದ್ದರಿಂದ ಮಿತ್ರ ಪಕ್ಷಗಳ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಅವರಿಗೆ ಅತೀ ಹೆಚ್ಚು ಮತ ಕೊಟ್ಟು ಗೆಲ್ಲಿಸಬೇಕು ಎಂದರು. ಪತ್ರಿಕಾ ಗೋಷ್ಠಿಯಲ್ಲಿ‌ ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಮಯೂರ್ ಜಯಕುಮಾರ್, ಅಭ್ಯರ್ಥಿ, ಚಂದ್ರಪ್ಪ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆಜೆ ಹಟ್ಟಿ ತಿಪ್ಪೇಸ್ವಾಮಿ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜಗದೀಶ್, ಸಮಾಜವಾದಿ‌ಪಕ್ಷದ ರಾಜ್ಯಾಧ್ಯಕ್ಷ ಮಂಜಪ್ಪ, ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ಇತರರಿದ್ದರು.

 

 

 

Leave a Reply

Your email address will not be published. Required fields are marked *