ಸರ್ಕಾರಿ ನೌಕರರು ನಿಗಧಿತ ಸಮಯಕ್ಕೆ ಬರದಿದ್ದರೆ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ

ರಾಜ್ಯ

 

Breaking News

ಸರ್ಕಾರಿ ನೌಕರರು ಕರಕ್ಟ್ 10 ಗಂಟೆಗೆ ಕಚೇರಿಗೆ ಹಾಜರಾಗಿದಿದ್ದರೆ ಕಠಿಣ ಕ್ರಮ ಗ್ಯಾರಂಟಿ ಸರ್ಕಾರದ ಖಡಕ್ ಆದೇಶ

 

 

 

ಸರಿಯಾದ ನಿಗಧಿತ ಸಮಯಕ್ಕೆ ಕಚೇರಿಗೆ ಹಾಜರಾಗಬೇಕು ಮತ್ತು ಕಚೇರಿ ವೇಳೆಯಲ್ಲಿ‌ ಕಾರ್ಯನಿರ್ವಹಿಸಬೇಕು ಇಲ್ಲದೇ ಹೋದರೆ ಕಾನೂನು ರೀತಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಕಟ್ಟು ನಿಟ್ಟಿನ ಆದೇಶವನ್ನು ಸರ್ಕಾರ ಹೊರಡಿಸಿದ್ದು, ಇದು ಸರ್ಕಾರಿ‌ ನೌಕರರಿಗೆ ಎಚ್ಚರಿಕೆ ಗಂಟೆಯಾಗಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈಗಾಗಲೇ ಸರ್ಕಾರಿ ನೌಕರರು ಬೆಳಗ್ಗೆ ಹತ್ತು ಗಂಟೆಗೆ ಹಾಜರಾಗುವಂತೆ ಸೂಚಿಸಿದ್ದರು.ಕೆಲ ಅಧಿಕಾರಿಗಳ ಕರ್ತವ್ಯ ನಿಷ್ಠೆ ಮತ್ತು ಸಮಯ ಪ್ರಜ್ಞೆಯ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ದೂರದೂರಿನಿಂದ ಕೆಲಸ ಕಾರ್ಯಗಳಿಗೆ ಕಚೇರಿಗೆ ಬರುವ ಸಾರ್ವಜನರಿಕರು ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಚೇರಿಗೆ ಸಕಾಲದಲ್ಲಿ ಬರಬೇಕು ಹೊರಗಿನ ಕೆಲಸವಿದ್ದರೆ ದಿನವಹಿ ಚಲನ ವಲನ ಪುಸ್ತಕದಲ್ಲಿ ನಮೂದಿಸಿ ಹೋಗಬೇಕು ಎಂದಿದ್ದಾರೆ.

ಚಲನವಲನ ಪುಸ್ತಕದಲ್ಲಿ ನಮೂದಿಸದೆ ಮೇಲಾಧಿಕಾರಿಗಳ ಅನುಮತಿ ಪಡೆಯದೆ ‌ಇರುವ ನೌಕರರ ವಿರುದ್ಧ ಸಕ್ಷಮ ಪ್ರಾಧಿಕಾರವು ಕಠಿಣ ಕ್ರಮ ಜರುಗಿಸಬಹುದು ಎಂದಿದ್ದಾರೆ.

Leave a Reply

Your email address will not be published. Required fields are marked *