ಬ್ಯಾಂಕಿನ ಆರ್ಥಿಕ ವ್ಯವಹಾರಗಳನ್ನು ಇನ್ನಷ್ಟು ಹೆಚ್ಚಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತದೆ

ಜಿಲ್ಲಾ ಸುದ್ದಿ

ಕನಕ ಸಹಕಾರ ಬ್ಯಾಂಕ್ ಅಧ್ಯಕ್ಷ ಡಿ.ಮಲ್ಲಿಕಾರ್ಜುನ್ ಭರವಸೆ ಬ್ಯಾಂಕಿನಲ್ಲಿ ಆರ್ಥಿಕ ವ್ಯವಹಾರ ಇನ್ನಷ್ಟು
ಹೆಚ್ಚಿಸಲು ಕ್ರಮ

 

 

 

ಚಿತ್ರದುರ್ಗ;ತೀರಾ ಸಂಕಷ್ಟವನ್ನು ಎದುರಿಸುತ್ತಿದ್ದ ಕನಕ ಪತ್ತಿನ ಸಹಕಾರ ಸಂಘವನ್ನು ಕಾಲಮಿತಿಯೊಳಗೆ ಪ್ರಗತಿಯತ್ತ ಮುನ್ನಡೆಯಲು ಸರ್ವ ರೀತಿಯಲ್ಲಿಯೂ ಪ್ರಯತ್ನ ಮಾಡಿದ್ದೇನೆ. ಈಗ ಸಾಕಷ್ಟು ಸುಧಾರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕಿನ ಆರ್ಥಿಕ ವ್ಯವಹಾರಗಳನ್ನು ಇನ್ನಷ್ಟು ಹೆಚ್ಚಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಕನಕ ಸಹಕಾರ ಬ್ಯಾಂಕಿನ ಅಧ್ಯಕ್ಷಡಿ.ಮಲ್ಲಿಕಾರ್ಜುನ್ (ಪೊಲೀಸ್ ಮಲ್ಲಿ) ಭರವಸೆ ನೀಡಿದರು
ಇಲ್ಲಿನ ನೆಹರು ನಗರದಲ್ಲಿರುವ ಜ್ಞಾನ ವಿಕಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ ಕನಕ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಉದ್ಗಾಟಿಸಿ ಅವರು ಮಾತನಾಡಿದರು.
ಐತಿಹಾಸಿಕಹಿನ್ನಲೆಯಿರುವ ಚಿತ್ರದುರ್ಗದಲ್ಲಿ ಕುರುಬ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದ್ದು,ಸಮಾಜದ ಹಿರಿಯ ಮುಖಂಡರು 2001 ರಲ್ಲಿ ತುಂಬಾಶ್ರಮವಹಿಸಿ ಈ ಸಹಕಾರ ಸಂಘವನ್ನು ಸ್ಥಾಪನೆ ಮಾಡಿದ್ದಾರೆ. ಇದುವರೆಗೆ ಬಹುತೇಕ ಮುಖಂಡರು ಈ ಸಹಕಾರ ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದರೂ, ಜನರ ಸಹಕಾರ ನಿರೀಕ್ಷಿತ ಪ್ರಮಾಣದಲ್ಲಿಸಿಗಲಿಲ್ಲವೆಂದು ವಿಷಾಧ ವ್ಯಕ್ತಪಡಿಸಿದರು.
ಸಾಕಷ್ಟು ಸಂಕಷ್ಟದ ನಡುವೆ ಸಂಘದ ಸದಸ್ಯರು , ಸಂಸ್ಥಾಪಕರು ಎಲ್ಲರೂ ಒಟ್ಟುಗೂಡಿ ನನಗೆ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ. ಈ ಸಂಸ್ಥೆಯನ್ನುಚಿತ್ರದುರ್ಗದಲ್ಲಿ ಒಂದು ಮಾದರಿ ಸಹಕಾರ ಸಂಘವನ್ನಾಗಿ ಮಾಡಬೇಕು ಎನ್ನುವ ಸಂಕಲ್ಪದಿಂದ ಜವಾಬ್ದಾರಿ ಹೊತ್ತು ಸಾಕಷ್ಟು ಸುಧಾರಣೆಯನ್ನು ತಂದಿದ್ದೇನೆ. ಇದೀಗ ಎಲ್ಲಾ ಸಮಸ್ಯೆಗಳುನಿವಾರಣೆಯಾಗಿ ಸಹಕಾರ ಬ್ಯಾಂಕ್ ಉತ್ತಮವಾಗಿಕಾರ್ಯನಿರ್ವಹಿಸುತ್ತಿದೆ. ಇದು ಎಲ್ಲರ ಸಹಕಾರದಿಂದ ಸಾದ್ಯವಾಗಿದೆ ಎಂದರು ಕನಕ ಸಹಕಾರ ಬ್ಯಾಂಕ್‍ನಲ್ಲಿ ಸುಮಾರು ಒಂದು ಸಾವಿರ ಮಂದಿ ಸದಸ್ಯರು ಇದ್ದು, ಮುಂದಿನ ದಿನಗಳಲ್ಲಿ ಸಹಕಾರ ಮನೋಭಾವ ಇರುವರಿಗೆ ಸದಸ್ಯತ್ವ ನೀಡಲು ಕ್ರಮ ಕೈಗೊಳ್ಳಲಾಗುವುದು. ಆ ಮೂಲಕವಾಗಿ ಇಲ್ಲಿ ಇನ್ನಷ್ಟು ಆರ್ಥಿಕ ವ್ಯವಹಾರ ಹೆಚ್ಚಿಸಿ ಸಂಘವನ್ನು ಇನ್ನಷ್ಟು ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಯೂ ಅವರು ನುಡಿದರು
ಈ ಸಹಕಾರ ಸಂಘದಲ್ಲಿ ಸಾಕಷ್ಟು ಮಂದಿ ಪಡದುಕೊಂಡಿರುವ ಸಾಲವನ್ನು ಮರುಪಾವತಿ ಮಾಡಿಲ್ಲ.. ಹಳೇ ಬಾಕಿ ಸಾಕಷ್ಟು ವಸುಲಾಗದೆ ಉಳಿದುಕೊಂಡಿರುವ ಕಾರಣ ತೊಂದರೆಯಾಗುತ್ತಿದೆ. ಹಳೇ ಬಾಕಿ ವಸೂಲಾತಿಗಾಗಿ ಶೀಘ್ರದಲ್ಲಿಯೇ ವಿಶೇಷ ಆಂದೋಲನ ಆರಂಭಿಸಲಾಗುವುದು. ಸಂಘ ನೀಡಿರುವ ಗಡುವಿನೊಳಗಾಗಿ ಸಾಲ ಮರುಪಾವತಿಮಾಡದಿದ್ದರೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಡಿ.ಮಲ್ಲಿಕಾರ್ಜುನ್ಎ ಚ್ಚರಿಸಿದರು. ಯಾವುದೇ ಸಂಘ, ಸಂಸ್ಥೆಗಳು ಬೆಳವಣಿಗೆಯಾಗಬೇಕಾದರೆ, ಆರ್ಥಿಕ ವ್ಯವಾರ ಹೆಚ್ಚಿನ ಮಟ್ಟದಲ್ಲಿ ನಡೆಯಬೇಕಾದರೆ ಪರಸ್ಪರ ಸೇವಾ ಮನೋಭಾವ ಅವಶ್ಯ. ಸಿಬ್ಬಂದಿಗಳು,ಸದಸ್ಯರುಗಳ ನಡುವೆ ಉತ್ತಮ ಭಾಂಧವ್ಯ ಬೆಳೆಯಬೇಕು. ಸದಸ್ಯರು ನೆಪಮಾತ್ರಕ್ಕೆ ಇಲ್ಲಿ ಸದತ್ವ ಪಡೆಯಕೂಡದು. ಸಣ್ಣ ಪ್ರಮಾಣದಲ್ಲಿ ಆದರೂ ಪ್ರತಿಯೊಬ್ಬರೂ ವ್ಯವಹಾರನಡೆಸುವಂತಾಗಬೇಕು ಎಂದು ಅವರು ಸಲಹೆ ನೀಡಿದರು.
ಕನಕ ಸಹಕಾರ ಸಂಘದ ಸಂಸ್ಥಾಪಕ ನಿರ್ದೇಶಕ ಕೆ.ಬಿ.ರಾಮಪ್ಪ ಮಾತನಾಡಿ, ಕಳೆದು ಇಪ್ಪತ್ತು ವರ್ಷಗಳ ಹಿಂದೆ ಸಾಕಷ್ಟು ಕಷ್ಟ ಪಟ್ಟು ಈ ಸಂಸ್ಥೆಯನ್ನುಸ್ಥಾಪಿಸಿದ್ದೇವೆ. ಜಿಲ್ಲಾ ಕೇಂದ್ರದಲ್ಲಿ ಇದರ ಅನಿವಾರ್ಯವೂ ಇತ್ತು. ನಮ್ಮನಿರೀಕ್ಷೆಯಂತೆ ಸಹಕಾರ ಸಿಗಲಿಲ್ಲ. ಆದರೂ ಎಲ್ಲಿಯೂ ಲೋಪವಾಗದಂತೆ ಇದನ್ನು ಉಳಿಸಿಕೊಂಡು ಬಂದಿದ್ದೇವೆ, ಈಗ ಕೆಲವು ವರ್ಷಗಳಿಂದ ಡಿ.ಮಲ್ಲಿಕಾರ್ಜುನ್ ಅವರಿಗೆ ಜವಾಬ್ದಾರಿ ಕೊಟ್ಟಿದ್ದು, ಅವರ ಅವಧಿಯಲ್ಲಿ ಈ ಸಂಘ ಪ್ರಗತಿಯತ್ತಸಾಗುತ್ತಿರುವುದು ನಮಗೆ ತುಂಬಾ ಸಂತಸವಾಗಿದೆ ಎಂದರುಸಂಘದ ಉಪಾದ್ಯಕ್ಷಎನ್.ಓಂಕಾರಪ್ಪ, ನಿರ್ದೇಶಕರಾದ ಕೆ.ಬಿ.ರಾಮಪ್ಪ,ಕೆ.ಬಿ.ಕೃಷ್ಣಪ್ಪ,ಎಲ್.ನೀಲಗಿರಿಯಪ್ಪ,ಈ.ಅರುಣ್‍ಕುಮಾರ್,ಆರ್.ದೊಡ್ಡಲಿಂಗಪ್ಪ,ಎನ್.ಸೋಮಶೇಖರ್,ಸಿ.ಷಣ್ಮುಖ,ಪುಷ್ಪರಾಜ್,ಎಂ.ಎಸ್.ಬಸವರಾಜ್, ಪಾರ್ವತಮ್ಮ, ಡಿ.ಶೋಭಾ ಸಭೆಯಲ್ಲಿಉಪಸ್ಥಿತರಿದ್ದರು ಶಿಕ್ಷಕಿ ಪವಿತ್ರ ಪ್ರಾರ್ಥಿಸಿದರೆ, ನಿರ್ದೇಶಕ ಕೆ.ಕೃಷ್ಣಪ್ಪ ಸ್ವಾಗತಿಸಿದರು. ದೊಡ್ಡಲಿಂಗಪ್ಪವಂದಿಸಿದರು. ಶಿಕ್ಷಕ ಜಿ.ಕೆ.ರುದ್ರಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು

Leave a Reply

Your email address will not be published. Required fields are marked *