ಸಿದ್ದರಾಮಯ್ಯ ಅವರನ್ನು ಯಾರಿಗೂ ಟಚ್ ಮಾಡುವ ಶಕ್ತಿ ಇಲ್ಲ

ರಾಜಕೀಯ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೆಟ್ಟದನ್ನು ಬಯಸಿ ಬಿಜೆಪಿ ಯವರು ಮುಟ್ಟಿದರೆ ರಾಜ್ಯದ 6 ಕೋಟಿ ಜನರು ಸುಮ್ಮನೆ ಇರುವುದಿಲ್ಲ ಕ್ರಾಂತಿ ಮಾಡಲಿದ್ದಾರೆ ಎಂದು ಕಾಂಗ್ರೇಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಎಚ್ಚರಿಸಿದ್ದಾರೆ.
ನಗರದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಜೀವ ಬೇದರಿಕೆ ಇದ್ದು, ಇಂದು ಲೋಹ ತಪಾಸಣಾ ಹಾಗೂ ಶ್ವಾನದಳದವರು ತಪಾಸಣೆ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡುತ್ತಾ, ಸಿದ್ದರಾಮಯ್ಯ ದೇಶದ ಆಸ್ತಿ ಅವರ ಕೊಡುಗೆ ಅಪಾರವಾದದ್ದು, ಅವರ ಮೇಲೆ ಮೊಟ್ಟೆ ಹೊಡೆಯುವುದು, ಜೀವ ಬೇದರಿಕೆ ಹಾಕುವುದು ಸೆರಿ ಕೆಟ್ಟದನ್ನು ಬಯಸಿ ಬಿಜೆಪಿ ಯವರು ಮುಟ್ಟಿದರೆ ರಾಜ್ಯದ 6 ಕೋಟಿ ಜನರು ಕ್ರಾಂತಿ ಮಾಡಲಿದ್ದಾರೆ. ಸಿದ್ದರಾಮಯ್ಯ ಅವರನ್ನು ಯಾರು ಸಹ ಟಚ್ ಮಾಡಲು ಸಾಧ್ಯವಿಲ್ಲ‌‌ ಎಂದು ಹೇಳಿದರು.
ಮಡಿಕೆರಿ ಚಲೋ ದಲ್ಲಿ ಏನಾದರೂ ಅನಾಹುತ ಆದರೆ ಅದಕ್ಕೆ ಸಿದ್ದರಾಮಯ್ಯ ಅವರೆ ಹೊಣೆ ಎಂಬ ಹೇಳಿಕೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಆಳಾಗಿ ಹೋಗಿದೆ. ಅದನ್ನು ಸರಿಪಡಿಸಿಕೊಳ್ಳದ ಸರ್ಕಾರ ಬೆರಿಬ್ಬರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿದೆ. ಇನ್ನೂ ಸಿದ್ದರಾಮಯ್ಯ ಅವರ ವಿರುದ್ದ ಮಾತನಾಡುವ ಸಂಸದ ಪ್ರತಾಪ್ ಸಿಂಹ ಯೋಗ್ಯತೆ ಏನು ಎಂಬುದು ಜನರಿಗೆ ತಿಳಿದಿದ್ದು, ಪ್ರತಾಪ್ ಸಿಂಹ ಯೋಗ್ಯತೆ ಏಲ್ಲಿ, ಸಿದ್ದರಾಮಯ್ಯ ಎಲ್ಲಿ ಎಂದು ಪ್ರಶ್ನಿಸಿದರು.
ದೇಶ ಹಾಗೂ ರಾಜ್ಯದಲ್ಲಿ ಇರುವ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಕೊಮುಗಲಭೆ ಸೃಷ್ಟಿಸಿ ದೇಶವನ್ನು ಹೊಡೆಯುವ ಕೆಲಸವನ್ನು ಮಾಡುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ರಾಷ್ಟ್ರಧ್ವಜ, ರಾಷ್ಟ್ರಭಕ್ತಿ ಎಂದು ಜನರಿಗೆ ಎಂದು ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಕಾಂಗ್ರೇಸ್ ಪಕ್ಷ ಪಾತ್ರ ಬಹಳಷ್ಟಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರ ಪಾತ್ರ ಏನು ಇಲ್ಲ. ಬಿಜೆಪಿಯ ಯಾರೊಬ್ಬರೂ ಕೂಡ ದೇಶಕ್ಕಾಗಿ ಹೋರಾಟ ಮಾಡಲಿಲ್ಲ. ಆದರೆ ಇದೀಗ ರಾಷ್ಟ್ರಧ್ವಜ ದ ಮೇಲೆ ಪ್ರೀತಿ ಉಕ್ಕಿ ಬರುತ್ತಿದೆ. ಸಂವಿಧಾದ ಮೇಲೆ ನಂಬಿಕೆ ಇಲ್ಲ‌ದ ಇವರಿಗೆ ತ್ರೀವರ್ಣ ಧ್ವಜ ಬೇಡ. ಮೂರು ಬಣ್ಣದ್ದು, ಅದು ಅಪಶಕುನ ಎಂದು ಹೇಳಿದ್ದರು. ಅಂತಹ ಬಿಜೆಪಿ ಯವರಿಗೆ ಇದೀಗ ಏಕಾಏಕಿ ದೇಶದ ಬಗ್ಗೆ ಪ್ರೀತಿ ಬಂದಿದೆ‌ ಎಂದು ಹರಿಆಯ್ದರು‌.
ರಾಜ್ಯದಲ್ಲಿ ೨ ಸಾವಿರ ನೀರಾವರಿ ಅಣೆಕಟ್ಟುಗಳು ಇದ್ದು ಅವಗಳು ಕಾಂಗ್ರೇಸ್ ಪಕ್ಷ ಮಾಡಿದ್ದು. ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭ‌ಮಾಡಿದ್ದು ಕಾಂಗ್ರೇಸ್ ಅಧಿಕಾರದಲ್ಲಿ. ಉಳುವವನೆ ಭೂಮಿ ಒಡೆಯ ಎಂದು ಭೂಮಿಯ‌ನ್ನು ನೀಡಿದ್ದು, ಕಂಪ್ಯೂಟರ್ ಮೊಬೈಲ್ ನೀಡಿದ್ದು ರಾಜೀವ್ ಗಾಂಧಿ ಅವರು. 2014 ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಅವರು ಇದನೆಲ್ಲಾ ಮಾಡಿದರಾ ? ಎಂದು ಪ್ರಶ್ನಿಸಿದರು.
ಅಧಿಕಾರಕ್ಕೆ ಬರುವ ಮೊದಲು ನರೇಂದ್ರ ಮೋದಿ ಅವರು ದೇಶದ ಜನರಿಗೆ ಸಾಕಷ್ಟು ಕನಸ್ಸು ಬಿತ್ತಿದರು ಅದನ್ನೆಲ್ಲ ಜನರು‌ ಸಹ ನಂಬಿದರು. ಅದರಂತೆ ೧೬ ಕೋಟಿ ಉದ್ಯೋಗ ಸೃಷ್ಟಿ ಆಗಬೆಕಿತ್ತು. ಆದರೆ ಇರುವ ಕೆಲಸಗಳನ್ನು ಕಿತ್ತುಕೊಂಡರು. ಆರ್ಥಿಕ ವ್ಯವಸ್ಥೆಯನ್ನು ನಿಬಾಯಿಸಲಾಗದೆ ಬೆಲೆ ಏರಿಕೆಯ ಬಿಸಿಯನ್ನು ಮುಟ್ಟಿಸಿದರು. ಇದರಿಂದ ಜನರು ನಲುಗಿ ಹೋಗಿದ್ದು, ಇದನ್ನೆಲ್ಲ ದೇಶ ಹಾಗೂ ರಾಜ್ಯದ ಜನರಗೆ ತಿಳಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ರಾಜ್ಯ ಹಾಗೂ ದೇಶದಲ್ಲಿ ಅಧಿಕಾರಕ್ಕೆ ತರಲಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಟಿ.ರಘುಮೂರ್ತಿ, ಹೆಚ್.ಆಂಜನೇಯ, ಬಿ.ಎನ್‌.ಚಂದ್ರಪ್ಪ, ಎ.ವಿ.ಉಮಾಪತಿ,ಹನುಮಲಿ ಷಣ್ಮುಖಪ್ಪ, ಹಾಲಸ್ವಾಮಿ,  ಮೊಳಕಾಲ್ಮೂರು ತಾಲೂಕಿನ ಮುಖಂಡ ಯೋಗೀಶ್ ಬಾಬು ಎಂ.ಕೆ.ತಾಜ್ ಪೀರ್ ಸೇರಿದಂತೆ ಇತರರು ಹಾಜರಿದ್ದರು.

 

 

 

Leave a Reply

Your email address will not be published. Required fields are marked *