ನಾಯಕರ ಸಂಸ್ಕೃತಿಗಳು ದೇಶವನ್ನು ಶ್ರೀಮಂತಗೊಳಿಸಿವೆ

ಜಿಲ್ಲಾ ಸುದ್ದಿ

ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಮತ್ತು ಮ್ಯಾಸ ನಾಯಕರ ಆಚಾರ ವಿಚಾರಗಳು ಉಡುಗೆ ತೊಡುಗೆಗಳು ಸಂಪ್ರದಾಯಗಳು ಪೂಜಾ ವಿಧಿ ವಿಧಾನಗಳು ದೇಶಿಯ ಸಂಸ್ಕೃತಿ ಯನ್ನು ಶ್ರೀಮಂತ ಗೊಳಿಸಿವೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.ಅವರು ಇಂದು ಪುರ್ಲ ಹಳ್ಳಿ ಗ್ರಾಮದಲ್ಲಿ ಕ್ಯಾತಪ್ಪ ದೇವರ ಜಾತ್ರಾ ಕಳಸಾರೋಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು, ಇದೇ ತಿಂಗಳು 9 ರ ವರೆಗೆ ನಡೆಯುವ ಈ ಜಾತ್ರೆ ಅತ್ಯಂತ ವಿಶಿಷ್ಟ ಪೂರ್ಣವಾದದ್ದು ಎಲ್ಲ ಭಕ್ತಾದಿಗಳು ಕೂಡ ತಮ್ಮ ಮೈ ಮತ್ತು ಮನಗಳನ್ನು ಅಂತಕರಣದಿಂದ ಶುದ್ದಿ ಮಾಡಿಕೊಂಡು ನಿರಂತರ ಉಪವಾಸದಿಂದ ಮೈಲಿಗೆ ಸೋಕಿಸದೆ ಮಡಿಯಿಂದ ವ್ರತಗಳನ್ನಾಚಾರಿಸಿಕೊಂಡು ಈ ಪವಿತ್ರ ಕಾರ್ಯಮಾಡುತ್ತಾರೆ ತುಮಕೂರು ಚಿತ್ರದುರ್ಗ ಮತ್ತು ಬಳ್ಳಾರಿ ಹಾಗೂ ಆಂಧ್ರದ ಭಾಗದಿಂದಲೂ ಕೂಡ ಈ ದೇವಸ್ಥಾನದ ಗುಡೇಕಟ್ಟೆ ಯವರು ಬರುತ್ತಾರೆ, ಈ ಎಲ್ಲಾ ಭಕ್ತಾದಿಗಳು ಕೂಡ ಆದಷ್ಟು ಶುಚಿತ್ವ ಮತ್ತು ಆರೋಗ್ಯದ ಕಡೆ ಗಮನ ಕೊಡಬೇಕು ಕೋವಿಡ್ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕು ಸಂಸ್ಕೃತಿ ಉಳಿಸುವುದರ ಜೊತೆಗೆ ಶೈಕ್ಷಣಿಕ ಆರ್ಥಿಕ ಸ್ವಾವಲಂಬನೆ ಕಂಡುಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾಡುಗೊಲ್ಲ ಸಮಾಜದ ಅಧ್ಯಕ್ಷರಾದ ಬೂದಿಹಳ್ಳಿ ರಾಜು ಹೊನ್ನೂರ್ ಗೋವಿಂದಪ್ಪ ಖಜಾಂಚಿ ಕಾಂತ ರಾಜು ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.

 

 

 

Leave a Reply

Your email address will not be published. Required fields are marked *