ಈಶ್ವರಪ್ಪ ಮಾಡಿಕೊಂಡ ಯಡವಟ್ಟು ಏನು?

ಜಿಲ್ಲಾ ಸುದ್ದಿ ರಾಜಕೀಯ

ಈಶ್ವರಪ್ಪ ಮಾಡಿಕೊಂಡ ಯಡವಟ್ಟು ಏನು?Chitradurga ehwarappa yadavattu

ಚಿತ್ರದುರ್ಗ,ನ06(ಸಂವಾ)-ಯೋಗೇಶ್ ಗೌಡ ಅವರನ್ನು ಕೊಲೆ ಮಾಡಿವುದು ನಿಜ ಎನ್ನುತ್ತಲೆ ವಿನಯ್ ಕುಲಕರ್ಣಿ ಬಂಧನ ಎನ್ನುವ ಬದಲು ಯೋಗೇಶ್ ಗೌಡರ ಬಂಧನ ಸ್ವಾಗತಿಸುತ್ತೇನೆ ಎಂದು ಹೇಳಿಕೆ‌ ನೀಡುವ ಮೂಲಕ ಗ್ರಾಮೀಣಾಭಿವೃದ್ದಿ ಸಚಿವ ಕೆ ಎಸ್ ಈಶ್ವರಪ್ಪ ಯಡವಟ್ಟು ಮಾಡಿಕೊಂಡ ಘಟನೆ ಚಿತ್ರದುರ್ಗದಲ್ಲಿ‌ ನಡೆಯಿತು.

 

 

 

ಅವರು ಜಿಲ್ಲಾ ಪಂಚಾಯಿತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ವಿನಯ್ ಕುಲಕರ್ಣಿ ಅರೆಸ್ಟ್ ಎಂದು ಹೇಳುವ ಬದಲು ಪದೇ ಪದೇ ಯೋಗೇಶ್ ಗೌಡ ಎಂದು ಹೇಳುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ. ಅವರು ಕೊಲೆಯ ಪ್ರಕರಣದಲ್ಲಿ ಮುಕ್ತವಾಗಿ ಹೊರಗೆ ಬರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೆನೆ ಎಂದರು. ಈ ಹಿಂದೆ ಕಾಂಗ್ರೆಸ್, ಸರ್ಕಾರ ಇದ್ದಾಗಲೂ ಅನೇಕರ ಮನೆಗಳ ಮೇಲೆ ರೇಡ್ ಆಯ್ತು ಅನೇಕರ ಮೇಲೆ ಅಪಾದನೆಗಳು ಬಂದವು ಇದಕ್ಕಾಗಿ ಇಡಿ, ಐಟಿ, ಸಿಬಿಐ ಎಲ್ಲವನ್ನು ಮುಚ್ಚಬೇಕಾಗುತ್ತದೆ. ಕಾಂಗ್ರೆಸ್ ನವರು ಏನು ಆಕಾಶದಿಂದ ಉದುರಿ ಬಂದಿಲ್ಲ. ಅವರು ಕೊಲೆ ಮಾಡಿದ್ರೆ, ಇಡಿ ಹವಾಲ ಕೇಸಲ್ಲಿ ಸಿಕ್ಕರೇ ಅವರನ್ನು ಬಿಟ್ಟುಬಿಡಬೇಕು ಎಂದು ಸುಪ್ರೀಂ ಕೋರ್ಟಿನಿಂದ ಜಡ್ಜ್ ಮೆಂಟ್ ತರೋಣ ಇಲ್ಲಾಂದ್ರೆ ಸಂವಿಧಾನ ತಿದ್ದುಪಡಿ ತರೋಣ ಎಂದು ವ್ಯಂಗ್ಯ ಮಾಡಿದರು. ಕಾಂಗ್ರೆಸ್ ನಾಯಕರಾಗಿ ಈ ರೀತಿ ಹೇಳಿಕೆ ಕೊಡುವುದು ಅನ್ಯಾಯ. ನಳೀನ್ ಕುಮಾರ್ ಕಟೀಲ್ ಗೆ ಮೆಚುರಿಟಿ ಇಲ್ಲ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿ, ಸಿದ್ದರಾಮಯ್ಯ ವಿಪಕ್ಷ ನಾಯಕನಾಗಲು ಅಯೋಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾರ ಬಗ್ಗೆ ಹೇಗೆ ಮಾತನಾಡಬೇಕು ಎಂದು ತಿಳುವಳಿಕೆ ಇಲ್ಲದ ಯೋಗ್ಯತೆ ಇಲ್ಲದ ಮನುಷ್ಯ ಬಹಳ ದೊಡ್ಡವರ ಬಗ್ಗೆ ಮಾತನಾಡಿ ದೊಡ್ಡವನಾಗು ಭ್ರಮೆಯಲ್ಲಿದ್ದಾರೆ. ರಾಜ್ಯದ ಜನ ನಿಮ್ಮ ನಿಮ್ಮ ಪಕ್ಷವನ್ನ ತಿರಸ್ಕಾರ ಮಾಡಿದ್ರು ಬುದ್ದಿ ಬಂದಿಲ್ಲ. ಯಾವಾಗ ನಿಮಗೆ ಬುದ್ದಿ ಬರುತ್ತೋ ನೋಡೋಣ. ಇನ್ನು ಸಿಎಂ ಬದಾವಣೆ ಕುರಿತು ಸಿದ್ದರಾಮಯ್ಯಗೆ ನೇರವಾಗಿ ಮೋದಿಯವರು ಹೇಳಿದ್ದಾರೆ. ಚುನಾವಣೆ ಮುಗಿದನಂತರ ಯಡಿಯೂರಪ್ಪಾವರನ್ನು ಬದಲಾಯಿಸುತ್ತೆನೆ ಎಂದು ಹಾಗಾಗಿ ಈ ರೀತಿ ಸಿದ್ದರಾಮಯ್ಯ ಮಾತನಾಡುತ್ತಾರೆ. ಸಿಎಂ ಖಾಲಿ ಇಲ್ಲದಿದ್ದಕ್ಕೆ ಡಿಕೇಶಿ ಹಾಗೂ ಸಿದ್ದರಾಮಯ್ಯ ಇಬ್ಬರೂ ತಿರುಕನ ಕನಸು ಕಾಣುತ್ತಿದ್ದಾರೆ. ಇವರಿಬ್ಬರ ಕನಸು ಈಡೇರೋಲ್ಲ ಎಂದು ಹೇಳಿದರು.

ಸಂಯುಕ್ತವಾಣಿ.ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *