ಬಹುಮುಖಿ ಕೃತಿ ಲೋಕಾರ್ಪಣೆ

ಜಿಲ್ಲಾ ಸುದ್ದಿ

ನಾಳೆ ಲೇಖಕ ಕರಿಯಪ್ಪ ಮಾಳಿಗೆ ಅವರ ಮಹತ್ವದ ಬಹುಮುಖಿ ಕೃತಿ ಲೋಕಾರ್ಪಣೆ
ಚಿತ್ರದುರ್ಗ,ನ06(ಸಂವಾ)-ಚಿತ್ರದುರ್ಗದ ಪ್ರಸಿದ್ದ ಲೇಖಕ ಹಾಗೂ ಚಿಂತಕ ಡಾ.ಜೆ.ಕರಿಯಪ್ಪ ಮಾಳಿಗೆ ಅವರ ಬಹುಮುಖಿ ಕೃತಿ ಲೋಪಾರ್ಕಣೆ ಕಾರ್ಯಕ್ರಮ ನವಂಬರ್ 8ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆಯಲಿದೆ

ಸಂಸ್ಕøತಿ ಚಿಂತಕ, ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಅವರು ಕೃತಿಯನ್ನು ಬಿಡುಗಡೆ ಮಾಡಲಿದ್ದು, ಜಿಲ್ಲಾ ಪಂಚಾಯಿತಿ ಮಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಯೋಗೇಶ್ ಕೃತಿ ಕುರಿತು ಮಾತನಾಡುವರು
ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಲೇಖಕ ಡಾ.ಜೆ.ಕರಿಯಪ್ಪ ಮಾಳಿಗೆ, ಸೃಷ್ಠಿಸಾಗರ ಪ್ರಕಾಶನದ ಮುಖ್ಯಸ್ಥ ಹಾಗೂ ಪತ್ರಕರ್ತ ಮೇಘ ಗಂಗಾಧರ ನಾಯಕ್, ಆಶಯ ಪ್ರಕಾಶನ ಮುಖ್ಯಸ್ಥ ಗೌನಹಳ್ಳಿ ಗೋವಿಂದಪ್ಪ, ಮದಕರಿ ಸಾಂಸ್ಕøತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ್ ಭಾಗವಹಿಸುವರು
ಇದೇ ಸಂದರ್ಭದಲ್ಲಿ ಕಲಾವಿದ ಡಿ.ಓ.ಮುರಾರ್ಜಿ ಮತ್ತು ತಂಡದಿದ ಬಹುಮುಖಿ ಗಾಯನ ಇರುತ್ತದೆ. ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಲು ಸೃಷ್ಠಿಸಾಗರ ಪ್ರಕಾಶನದ ಮೇಘ ಗಂಗಾಧರ ನಾಯಕ್ ಕೋರಿದ್ದಾರೆ
ಕರಿಯಪ್ಪ ಮಾಳಿಗೆ ಅವರ ಕೃತಿಗಳು;
ಕನ್ನಡ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಇದುವರೆಗೂ ಸುಮಾರು ಹತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ದಲಿತ ಪದವೀಧರರ ಸಮಸ್ಯೆಗಳು, ಬಳ್ಳಾರಿ ಜಿಲ್ಲೆಯ ಅವದೂತರು, ಬಳ್ಳಾರಿ ಜಿಲ್ಲೆಯ ಅವಧೂತ ಪರಂಪರೆ, ಬಯಲು ಸೀಮೆಯ (ಚಿತ್ರದುರ್ಗ) ಅವಧೂತರು, ವಚನಕಾರ ಮೋಳಿಗೆ ಮಾರಯ್ಯ, ಚಿತ್ರದುರ್ಗ ಜಿಲ್ಲೆ ತತ್ವ ಪದಗಳು, ಚಿತ್ರದುರ್ಗ ಜಿಲ್ಲಾ ಗ್ರಾಮ ಚರಿತ್ರೆ ಕೋಶ, ಸಾಹಿತ್ಯ ಸಂವೇದನೆ, ಸಾಹಿತ್ಯ ಕಣಜ ಇನ್ನಿತರೆ ಕೃತಿಗಳು ಇದುವರೆಗೂ ಪ್ರಕಟವಾಗಿವೆ.

 

 

 

ಸಂಯುಕ್ತವಾಣಿ

ಡಿ.ಕುಮಾರಸ್ವಾಮಿChitradurga bahumukhi lokarpane

 

Leave a Reply

Your email address will not be published. Required fields are marked *