ಅನಂತ್ ಕುಮಾರ್ ಹೆಗಡೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ: ಬಾಳೇಕಾಯಿ ಶ್ರೀನಿವಾಸ್

ರಾಜ್ಯ

 

 

 

 

ಸಂವಿಧಾನ ಬದಲಾವಣೆಯ ಬಗ್ಗೆ ಮಾತಾಡಿರುವ ಬಿಜೆಪಿ ಮುಖಂಡ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಾನೂನು ರೀತಿ ಪ್ರಕರಣ ದಾಖಲಿಸಿಬೇಕು ದೇಶದ್ರೋಹ ಪ್ರಕರಣ ದಾಖಲಿಸಿ ದೇಶದಿಂದ ಹೊರಹಾಕಬೇಕೆಂದು ಡಿಎಸ್ ಎಸ್ (ಎಂಎಸ್ ಬಣ)ನ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಆಗ್ರಹಿಸಿದರು.‌ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ‌ಮಾತಾಡಿದರು. ಅನಂತ್ ಕುಮಾರ್ ಹೆಗಡೆ ಅವರು ಸಂವಿಧಾನದ ಅಡಿಯಲ್ಲೆ ಗೆದ್ದು ಸಂಸದರಾಗಿದ್ದಾರೆ. ಆದರೆ ಅದನ್ನು ಅವರು ಮರೆತಿದ್ದಾರೆ. ಈ ಹೇಳಿಕೆಯ ಹಿಂದೆ ಆರ್ ಎಸ್ ಎಸ್ ಹಾಗೂ ಸಂಘ ಪರಿವಾರದ ಅಜೆಂಡ ಇದೆ. ಇನ್ನು ಬಿಜೆಪಿಯ ಶಾಸಕರು ಸಂಸದರು ಎಸ್ಸಿ ಎಸ್ಟಿ ಶಾಸಕರುಗಳು ಯಾರೂ ಕೂಡ ಅನಂತ್ ಕುಮಾರ್ ಹೆಗಡೆ ಯಾಕೆ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಪ್ರಶ್ನಿಸಲ್ಲ. ಪಾಕಿಸ್ತಾನ್ ಜೈ ಎಂದು ಘೋಷಣೆ ‌ಹಾಕಿದವರನ್ನು ಅಲ್ಲೆ ಪೊಲೀಸರು‌ ಬಂಧಿಸಿ ಕರೆದುಕೊಂಡು‌ ಹೋದರು ಆದರೆ ಸಂವಿಧಾನ ಬದಲಾವಣೆ ಬಗ್ಗೆ ಮಾತಾಡಿದರೆ ಅಂತವರನ್ನು ಯಾಕೆ ಬಂಧಿಸಲ್ಲ, ಕಾಂಗ್ರೆಸ್ ದಲಿತರು, ಅಲ್ಪಸಂಖ್ಯಾತರ ಪರ ಎಂದು ಹೇಳುತ್ತಿದೆ. ಹಾಗಾದರೆ ಕೂಡಲೇ ಅನಂತ್ ಕುಮಾರ್ ಹೆಗಡೆ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಬೇಕು. ಬಿಜೆಪಿ ಏನಾದರು ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ದೇಶದಲ್ಲಿ‌ರಕ್ತ ಪಾತವಾಗುತ್ತದೆ. ದಲಿತ ಸಂಘರ್ಷ ಸಮಿತಿಗಳು ಎಷ್ಟೇ ಗುಂಪುಗಳಾಗಿದ್ದರೂ ಸಂವಿಧಾನದ ವಿಚಾರ ಬಂದಾಗ ಒಂದಾಗುತ್ತೇವೆ. ಸಂವಿಧಾನ ಬದಲಾವಣೆ ಬಿಟ್ಟು ಮಾತಾಡಬೇಕು. ಈ ಬಾರಿ ಚುನಾವಣೆಯಲ್ಲಿ‌ ದೇಶದ ಜನತೆ ಬಿಜೆಪಿಗೆ ಸರಿಯಾದ ಪಾಠ ಕಲಿಸಲಿದ್ದಾರೆ. ಚುನಾವಣೆಗೆ ಕಾಯುತ್ತಿದ್ದಾರೆ. ಮೋದಿಯವರಿಗೂ ಕೂಡ ಪಾಠ ಕಲಿಸುತ್ತಾರೆಂದರು. ಇದೇ ಸಮಯದಲ್ಲಿ‌ ಮಾತಾಡಿದ ನರೇನಹಳ್ಳಿ‌ಅರುಣ್ ಕುಮಾರ್,ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧರಾಷ್ಟ್ರ ದ್ರೋಹದ ದೂರು ದಾಖಲಿಸಬೇಕು ಎಂದರು. ಸಂವಿಧಾನ ವಿರೋಧಿಸುವವರು ಅಲ್ಪ ಸಂಖ್ಯಾತರು, ದೇಶದ ಶಾಂತಿಗೆ ಭಂಗವುಂಟು ಮಾಡುವಂತ ಕೆಲಸ ಮಾಡುತ್ತಿರುವ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ಸುಮೋಟೋ ಪ್ರಜರಣ ದಾಖಲಿಸಬೇಕು, ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಈ ಸಮಯದಲ್ಲಿ ಡಿಎಸ್ ಎಸ್ ಮುಖಂಡರಾದ ಬಾಳೇಕಾಯಿ ಶ್ರೀನಿವಾಸ್,ನರೇನಹಳ್ಳಿ‌ಅರುಣ್ ಕುಮಾರ್, ಸುಭಾನ್, ರಾಜಣ್ಣ, ಮಹಾಲಿಂಗಪ್ಪ ಇತರರಿದ್ದರು.

Leave a Reply

Your email address will not be published. Required fields are marked *