ಕೋಟೆನಾಡು ಚಿತ್ರದುರ್ಗ ನಗರಕ್ಕೆ ಚಿತ್ರ ನಟ ಶ್ರೀಮುರುಳಿ ಭೇಟಿ ನೀಡಿದರು. ಬೆಂಗಳೂರಿನಿಂದ ಆನೆಗುಂದಿ ಉತ್ಸವಕ್ಕೆ ತೆರಳುತ್ತಿದ್ದು ಮಾರ್ಗ ಮಧ್ಯೆ ಚಿತ್ರದುರ್ಗದ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ ಬಿ ಕಾಂತರಾಜ್ ಅವರ ಬಿಗ್ ಬಾಸ್ ಹೋಟೆಲ್ ಹಾಗೂ ಬಿ ಕಾಂತರಾಜ್ ಅವರನ್ನ ಭೇಟಿ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ನನ್ನ ನಟನೆಯ ಬಗೀರ ಚಿತ್ರದ ಇನ್ನೂ ಕೆಲವು ಭಾಗದ ಶೂಟಿಂಗ್ ಬಾಕಿ ಇದ್ದು, ನಾಲ್ಕೈದು ತಿಂಗಳಲ್ಲಿ ಚಿತ್ರ ತೆರೆಗೆ ತರಲಿದ್ದೇವೆ ಎಂದರು. ಆನೆಗುಂದಿ ಉತ್ಸವ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುತ್ತಿದ್ದು, ಸಂತಸ ತರಿಸಿದೆ ಎಂದರು. ಇನ್ನೂ ಜಾಕಿ ಚಿತ್ರ ತೆರೆಗೆ ಬರಲಿದ್ದು, ಚಿತ್ರ ಸೂಪರ್ ಹಿಟ್ ಆಗಲಿದೆ. ಜನರು ಸಹ ಖುಷಿಯಿಂದ ಚಿತ್ರ ನೋಡುತ್ತಾರೆ.ಹಾಡುಗಳನ್ನ ಸಹ ನಾವು ಎಂಜಾಯ್ ಮಾಡಿದ್ದು ಚಿತ್ರ ಒಂದು ಹಬ್ಬವನ್ನ ಕ್ರಿಯೇಟ್ ಮಾಡುತ್ತದೆ. ಮಾರ್ಚ್ 17 ಅಪ್ಪು ಅವರ ದಿನವಾಗಿದ್ದು, ಅದನ್ನ ನಾವು ಎಂಜಾಯ್ ಮಾಡಬೇಕೆಂದು ಅವರು ತಿಳಿಸಿದ್ದಾರೆ. ಯುವ ಚಿತ್ರ ಸೂಪರ್ ಹಿಟ್ ಆಗಲಿದೆ ಎಂದು ಶ್ರೀಮುರುಳಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಚಿತ್ರ ನಿರ್ಮಾಪಕ ಬಿ ಕಾಂತರಾಜ್ ಹಾಗೂ ಶ್ರೀಮುರುಳಿ ಅಭಿಮಾನಿಗಳು ಹಾಜರಿದ್ದರು.