ಅಕ್ರಮ ಎಣ್ಣೆ ತಡೆಯಲು 9 ಪ್ಲೈಯಿಂಗ್ ಸ್ಕ್ವಾಡ್ ತಂಡ ರಚನೆ

ರಾಜ್ಯ

ಅಬಕಾರಿ ಅಕ್ರಮ  ತಡೆಗಾಗಿ 9 ಪ್ಲೈಯಿಂಗ್ ಸ್ಕ್ವಾಡ್ ತಂಡ ರಚನೆ

 

 

 

ಸಾರ್ವತ್ರಿಕ ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಂಗ್ರಹಣೆ, ಸಾಗಾಣಿಕೆ, ಮಾರಾಟ ಹಾಗೂ ಅಬಕಾರಿ ಇಲಾಖೆಗೆ ಸಂಬಂಧಪಟ್ಟ ಇನ್ನಿತರೆ ವಸ್ತುಗಳ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ 9 ಫ್ಲೈಯಿಂಗ್ ಸ್ಕ್ವಾಡ್ ತಂಡ ರಚನೆ ಮಾಡಲಾಗಿದೆ.
ಇದರೊಂದಿಗೆ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಅಂತರಾಜ್ಯ ಗಡಿ ಪ್ರದೇಶಗಳಾದ ಹಿರಿಯೂರು ತಾಲ್ಲೂಕು ಮದ್ದಿಹಳ್ಳಿ, ಚಳ್ಳಕೆರೆ ತಾಲ್ಲೂಕಿನ ದೊಡ್ಡಬಾದಿಹಳ್ಳಿ, ಮೊಳಕಾಲ್ಮೂರು ತಾಲ್ಲೂಕಿನ ಎದ್ದಲಬೊಮ್ಮನಹಟ್ಟಿಯಲ್ಲಿ ಅಬಕಾರಿ ತನಿಖಾ ಠಾಣೆ ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿದೆ ಎಂದು ಚಿತ್ರದುರ್ಗ ಅಬಕಾರಿ ಉಪ ಆಯುಕ್ತ  ಬಿ.ಮಾದೇಶ್ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅಕ್ರಮ ಮದ್ಯ ಸಾಗಾಣಿಕೆ, ಮಾರಾಟ ಹಾಗೂ ಹಂಚುವುದು ಕಂಡುಬಂದರೆ, ಅಬಕಾರಿ ಉಪ ಅಧೀಕ್ಷಕ ರಾಜೇಂದ್ರ ಐ ಉಗಾರ್ ದೂರವಾಣಿ ಸಂಖ್ಯೆ 9449629510, 08194-230668, ವಲಯ ಅಬಕಾರಿ ನಿರೀಕ್ಷಕ ಶೇಖ್ ಇಮ್ರಾನ್ ದೂರವಾಣಿ ಸಂಖ್ಯೆ 08194-231393, 9482088555, ಹೊಳಲ್ಕೆರೆ ವಲಯ ಅಬಕಾರಿ ನಿರೀಕ್ಷಕಿ ಹೆಚ್.ಸವಿತಾ  ದೂರವಾಣಿ ಸಂಖ್ಯೆ 08191-275902, 9663527579, ಹೊಸದುರ್ಗ ವಲಯ ಅಬಕಾರಿ ಉಪ ನಿರೀಕ್ಷಕ ಎಂ.ಭೂಪತಿ ದೂರವಾಣಿ ಸಂಖ್ಯೆ 08199-200575, 9036645736, ಹಿರಿಯೂರು ಉಪ ವಿಭಾಗ ಉಪ ಅಧೀಕ್ಷಕ ಕೆ.ಟಿ.ಧರ್ಮಪ್ಪ ದೂರವಾಣಿ ಸಂಖ್ಯೆ 08193-271730, 9481178474, ಚಳ್ಳಕೆರೆ ವಲಯ ಅಬಕಾರಿ ನಿರೀಕ್ಷಕ ಸಿ.ನಾಗರಾಜ್ ದೂರವಾಣಿ ಸಂಖ್ಯೆ 08195-251258, 9611976385, ಹಿರಿಯೂರು ವಲಯ ನಿರೀಕ್ಷಕಿ ಭಾರತಮ್ಮ ದೂರವಾಣಿ ಸಂಖ್ಯೆ  08193-271733, 8660075704, ಮೊಳಕಾಲ್ಮೂರು ವಲಯ ನಿರೀಕ್ಷಕ ಎಸ್.ರಮೇಶ್ ದೂರವಾಣಿ ಸಂಖ್ಯೆ 08198-229750 ಹಾಗೂ ಚಿತ್ರದುರ್ಗ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕ ಎಂ.ಆರ್.ಸೋಮಶೇಖರ್ ಹಾಗೂ ಅಬಕಾರಿ ಉಪ ಆಯಕ್ತ ಬಿ.ಮಾದೇಶ್  ಟೋಲ್ ಫ್ರೀ ನಂಬರ್  9663397015 ಗೆ ಸಂಪರ್ಕಿಸಿ ದೂರು ನೀಡಬಹುದು ಎಂದು ತಿಳಿಸಿದೆ.

Leave a Reply

Your email address will not be published. Required fields are marked *