ಕೆಸಿವಿ ಪಪ್ಪಿಗೆ ಸಚಿವ ಸ್ಥಾನ ನೀಡಿ : ವೀರಶೈವ ಮಹಾ ಸಭಾ ಆಗ್ರಹ

ರಾಜಕೀಯ

ಚಿತ್ರದುರ್ಗದ ಅಭಿವೃದ್ದಿಗೆ ಹಾಗೂ ಯುವಕರಿಗೆ ಆಧ್ಯತೆ ನೀಡುವ ವಿಚಾರದಲ್ಲಿ ಚಿತ್ರದುರ್ಗ ವಿಧಾನ ಸಭಸ ಕ್ಷೇತ್ರದಿಂದ ಗೆದ್ದಿರುವ ಕೆ ಸಿ‌ವೀರೇಂದ್ರ ಪಪ್ಪಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾ ಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಆಗ್ರಹಿಸಿದ್ದಾರೆ. ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ 30 ವರ್ಷಗಳ ಹಿಂದೆ ಹೆಚ್. ಏಕಾಂತಯ್ಯ ಅವರು ವೀರಶೈವ ಲಿಂಗಾಯಿತ ಸಮುದಾಯದಿಂದ ಸಚಿವರಾಗಿದ್ದರು, ಇದೀಗ ಈ ಬಾರಿ ಮತ್ತೊಮ್ಮೆ ಎಲ್ಲಾ ಸಮುದಾಯದವರು ಕೆ ಸಿ ವೀರೇಂದ್ರ ಪಪ್ಪಿ‌ಅವರನ್ನು ಬೆಂಬಲಿಸಿ ಗೆಲ್ಲಿಸಿದ್ದಾರೆ. ನಾವು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇದರಿಂದ ಈ ಬಾರಿ ಸಚಿವ ಸಂಪುಟದಲ್ಲಿ‌‌ಕೆ ಸಿ ವೀರೇಂದ್ರ ಪಪ್ಪಿ‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೆಪಿಸಿಸಿ‌ ಹಾಗೂ ಎಐಸಿಸಿಗೆ ಆಗ್ರಹಿಸಿದ್ದಾರೆ. ಕಳೆದ ಬಿಜೆಪಿ ಸರ್ಕಾರವಿದ್ದರೂ ಕೂಡ ಅಲ್ಲಿ ವೀರಶೈವ ಲಿಂಗಾಯಿತರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ, ಇದರಿಂದ ನಮಗೆ ವಂಚನೆಯಾಗಿದೆ. ಈಗಾಗಲೇ ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು,ಹಿರಿಯೂರು ಕ್ಷೇತ್ರಗಳಿಗೆ ಸಿಕ್ಕಿದೆ ಈ ಬಾರಿ ಚಿತ್ರದರ್ಗ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡ ಬೇಕು ಎಂದು‌ ಮನವಿ‌ ಮಾಡುತ್ತೇವೆ. ಪಪ್ಪಿ ಅವರು ಯುವಕರಿದ್ದು, ಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಿದೆ. ಅಭಿವೃದ್ದಿ ಕೆಲಸ ಮಾಡಲು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.‌ಈ ಸಂದರ್ಭದಲ್ಲಿ ಜಿಲ್ಲಾ ವೀರಶೈವ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮಹೇಶ್, ಜಿಲ್ಲಾ ಯುವ ಘಟಕದ ಬಿವಿಕೆಎಸ್ ಕಾರ್ತಿಕ್, ವಾಣಿಜ್ಯ ಘಟಕದ ಟಿ.‌ದಯಾನಂದ್ ಪಾಟೀಲ್, ಜಿಲ್ಲಾ ಖಾಜಾಂಚಿ ದಿವಾಕರ್ ಸಂಕೋಳ್, ಜೆಎಂ ಶಿವಾನಂದ್ ಇದ್ದರು

 

 

 

Leave a Reply

Your email address will not be published. Required fields are marked *