ಭೋವಿ ಸಮುದಾಯಕ್ಕೆ ಟಿಕೆಟ್ ಕೊಡಿ : ಮೊದಲ‌ ಆದ್ಯತೆ ರಘುಚಂದನ್ ಗೆ ಕೊಡಿ ಇಲ್ಲದೇ ಹೋದರೆ ಪರಿಣಾಮ‌ ಎದುರಿಸಿ

ರಾಜ್ಯ

ಸರ್ಕಾರಗಳು ಸಮಾ ಸಮಾಜದ ಬಗ್ಗೆ ಮಾತಾಡುವುದು ಕೇವಲ ತೋರಿಕೆಯಾಗಿದೆ.ಭೋವಿ ಸಮುದಾಯವನ್ನು ಗುರುತಿಸವಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಮಲತಾಯಿ ಧೋರಣೆ ತೋರುತ್ತಿವೆ ಎಂದು ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ‌ ಸಿದ್ದರಾಮೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.
ಬಿಜೆಪಿ 2008 ರಲ್ಲಿ ದಕ್ಷಿಣ ಭಾರತದಲ್ಲಿ ಸ್ವತಂತ್ರ್ಯ ಸರ್ಕಾರ ರಚನೆ ಮಾಡಿದ್ದೇವೆ ಎಂದು ಹೇಳಿದ್ದರು.ಆದರೆ ಮೂರು ಜನ ಭೋವಿ ಸಮುದಾಯದ ಜನಪ್ರತಿನಿಧಿಗಳು ಕಾರಣರಾಗಿದ್ದಾರೆಂಬುದನ್ನು ಅವರು ಮರೆಯಬಾರದು, ಒಂದು ಬಾರೀ ಜನಾರ್ಧನ ಸ್ವಾಮಿಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಎರಡನೇ ಬಾರಿಗೆ ಅವಕಾಶ ಸಿಕ್ಕರೂ ಯಶಸ್ಸು ಸಿಗಲಿಲ್ಲ. ಇದರಿಂದ ಐದು ಕ್ಷೇತ್ರಗಳಲ್ಲಿ ಭೋವಿ ಸಮುದಾಯವನ್ನು ಈ ಬಾರಿ ಅಲಕ್ಷ ಮಾಡಬಾರದು ಎಂದು ಎಚ್ಚರಿಕೆಯನ್ನು ಬಿಜೆಪಿಗೆ ನೀಡಿದರು. ಈ ಬಾರಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಭೋವಿ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿಗಳಿಗೆ ತುಂಬಬೇಕಿತ್ತು. ಆದರೆ ಅವರು ಕೂಡ ಎರಡು ಸಮುದಾಯಗಳಿಗೆ ಮಾತ್ರ ನೀಡಿದೆ. ಎರಡು ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು ನಮ್ಮನ್ನು ಅಲಕ್ಷಿಸಬೇಡಿ, ನೀವು ಅಲಕ್ಷಿಸಿದರೆ ಮುಂದಿನ‌ ದಿನಗಳಲ್ಲಿ ಸೋಲನ್ನು ಉಣ್ಣಬೇಕಾಗಬಹುದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ‌ ಪರಿಶಿಷ್ಟ ಜಾತಿಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಇಲ್ಲದೆ ಹೋದರೆ ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಅವಕಾಶವಿದೆ. ಒಂದು‌ ವೇಳೆ ಪಕ್ಷಗಳು ಅವಕಾಶ ನೀಡದೆ ಹೋದರೆ ಇಡೀ ರಾಜ್ಯದಲ್ಲಿ ಪ್ರಮುಖ ಎಲ್ಲಾ ಪರಿಶಿಷ್ಟ ಜಾತಿ ಸಮುದಾಯಗಳು ಒಂದೆಡೆ ಸೇರಿ ಗಟ್ಟಿ‌ ನಿರ್ಣಿಯ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ಮೂಲಕ ಬಿಜೆಪಿ ಮೊದಲ ಆದ್ಯತೆಯನ್ನು ಹೊಳಲ್ಕೆರೆ ಕ್ಷೇತ್ರದ ಶಾಸಕರಾದ ಡಾ. ಎಂ. ಚಂದ್ರಪ್ಪ ಅವರ ಪುತ್ರ ಎಂ ಸಿ ರಘುಚಂದನ್ ಅವರಿಗೆ ನೀಡಬೇಕು. ಕಾಂಗ್ರೆಸ್ ನಲ್ಲಿ ನೇರ್ಲಗುಂಟೆ ರಾಮಪ್ಪ‌ ಅವರಿಗೆ ಟಿಕೆಟ್ ಕೊಡುತ್ತಾರೆಂದು‌ ನಂಬಿದ್ದೆವು ಆದರೆ ಆ ಪಕ್ಷದ ಅಧ್ಯಕ್ಷರು ವಿಫಲರಾಗಿದ್ದಾರೆ ಎಂದರು. ಇದೇ ಸಮಯದಲ್ಲಿ ಮಾತಾಡಿದ ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ‌ ಮಾತಾಡಿ,ನಮ್ಮ ಸಮುದಾಯಕ್ಕೆ ಎಲ್ಲಾ ಪಕ್ಷಗಳು ಮೋಸವನ್ನು ಮಾಡಿಕೊಂಡು ಬರುತ್ತಿವೆ. ನಾವು ನಮ್ಮದೆ ಆದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು. ಇದೇ ಸಮಯದಲ್ಲಿ ಡಿಸಿ‌ಮೋಹನ್, ರುದ್ರಣ್ಣ, ತಿಪ್ಪೇಸ್ವಾಮಿ, ಮಂಜುನಾಥ್ ಹನುಮಂತಪ್ಪ‌ ಗೋಡೆ ಮನೆ ಇದ್ದರು.

 

 

 

Leave a Reply

Your email address will not be published. Required fields are marked *