ನಮಗು ರಕ್ಷಣೆ ಸಿಗುವಂತಹ ಕಾನೂನುಗಳನ್ನು ರಚಿಸಿ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಮಹಿಳಾ ಮತ್ತು ಪುರುಷ ವಕೀಲರು ಮಹಿಳೆಯರ ರಕ್ಷಣೆಗೆ ಇರುವಂತೆ ನೊಂದ ಪುರುಷರ ರಕ್ಷಣೆಗೂ ಅಗತ್ಯ ಕಾನೂನುಗಳನ್ನು ತಿದ್ದುಪಡಿ ಮೂಲಕ ಜಾರಿಗೆ ತರುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

 

 

 

Chitradurga give us to protection
ಅಂತಹ ಏನೂ ತಪ್ಪೇ ಮಾಡದೆ ತೊಂದರೆಗೆ ಸಿಲುಕುವವರ ರಕ್ಷಣೆಗೆ ಕೋಟೆನಾಡು ಚಿತ್ರದುರ್ಗದಲ್ಲಿ ಕರ್ನಾಟಕ ನಾಗರೀಕರ ಹಿತರಕ್ಷಣಾ ವೇದಿಕೆಯೊಂದು ಅಸ್ತಿತ್ವಕ್ಕೆ ಬಂದಿದೆ. ಖ್ಯಾತ ಹಿರಿಯ ವಕೀಲ ಬಿ.ಕೆ ರೆಹಮತ್ ವುಲ್ಲಾ ಹಾಗೂ ಯುವ ವಕೀಲ ಪ್ರತಾಪ್ ಜೋಗಿ ಸೇರಿದಂತೆ ಬಹುತೇಕ ವಕೀಲರು ಸೇರಿ ಹುಟ್ಟುಹಾಕಿರುವ ನೂತನ ವೇದಿಕೆ ವತಿಯಿಂದ ಇಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದು,
ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ, ಅತ್ಯಾಚಾರ ಪ್ರಕರಣಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ತಡೆಯಲು ಸರ್ಕಾರ ಹಲವಾರು ಕಾನೂನುಗಳನ್ನು ತಿದ್ದುಪಡಿ ಮೂಲಕ ಜಾರಿಗೆ ತಂದಿದೆ. ಆದರೆ ಐಪಿಸಿ ಕಲಂ 498, 354(a), 376, 366(a) ಹಾಗು POCSO ಕಾಯಿದೆಗಳು ಅನೇಕ ಸಂದರ್ಭಗಳಲ್ಲಿ ದುರುಪಯೋಗವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಸುಳ್ಳು ಕೇಸುಗಳಿಗೆ ಸಿಲುಕಿ ಹಲವಾರು ಯುವಕರು, ಪುರುಷರು, ವೃದ್ದರು ಕೂಡ ಕಾನೂನು ಸಂಘರ್ಷದಲ್ಲಿ ಸೋತು ಸೆರೆವಾಸ ಅನುಭವಿಸುವಂತಾಗಿದೆ. ಇಂತವರಿಗೂ  ರಕ್ಷಣೆ ಸಿಗಬೇಕು ಅಂತಹ ಕಾನೂನುಗಳ ಅಗತ್ಯವಿದ್ದು, ಅವುಗಳನ್ನು ಜಾರಿಗೆ ತರುವಂತೆ ಮುಖ್ಯ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ನಾಗರೀಕ ಹಿತರಕ್ಷಣಾ ವೇದಿಕೆ ಮನವಿಯನ್ನು ಸಲ್ಲಿಸಿತು.

ಸಂಯುಕ್ತವಾಣಿ

Leave a Reply

Your email address will not be published. Required fields are marked *