ಮುರುಘಾ ಶರಣರು ರಚಿಸಿದ್ದ ಕಮಿಟಿಯಿಂದ ನನ್ನನ್ನೆ ಹೊರಗೆ ಹಾಕಿದ್ದರು: ಬಸವ ನಾಗಿದೇವ ಶ್ರೀ

ರಾಜ್ಯ

ನಾನು ಪೀಠಾಧ್ಯಕ್ಷರಾಗಿ 23 ವರ್ಷಗಳು ಕಳೆದಿವೆ, ಟ್ರಸ್ಟ್ ಗೆ  ಯಾರೂ ಕೂಡ ಬೀಗ ಹಾಕಿಲ್ಲ, ಎಲ್ಲಾ ಬೀಗಗಳು ನನ್ನ ಕೈಲಿವೆ, ನಾನೇ ಹಾಕುತ್ತೇನೆ ನಾನೇ ತೆಗೆಯುತ್ತೇನೆ, ಯಾವುದೇ ವೈರುಧ್ಯ ನಮ್ಮ ಗುರುಪೀಠದಲ್ಲಿ‌ ನಡೆದಿಲ್ಲ ಎಂದು ಛಲವಾದಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವನಾಗೀದೇವ ಸ್ವಾಮೀಜಿ ಹೇಳಿದರು.‌ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.ಹಿರಿಯ ಗುರುಗಳಾದ ಮುರುಘಾ ಶರಣರು ಹೇಳಿದವರಿಗೆ ಟ್ರಸ್ಟ್ ಮಾಡಿಕೊಟ್ಟಿದ್ದೆ, ಆದರೆ ಅವರು ಮೀತಿ ಮೀರಿ ನನ್ನನ್ನೆ ಟ್ರಸ್ಟ್ ನಿಂದ ಹೊರಗೆ ಹಾಕಿದ್ದಾರೆ. ಮಠದ ಆಸ್ತಿ ಹಾಗೂ ಹಣ ಹೊಡೆಯುವ ದೃಷ್ಠಿಯಿಂದ ಅವರು ಪ್ರಸ್ತಾವನೆಯನ್ನು‌ ನೀಡಿದ್ದು, ಅದು ಸರ್ಕಾರದ ಮಟ್ಟದಲ್ಲಿಯೇ ತಿರಸ್ಕೃತವಾಗಿದೆ. ಈಗ ನಾವೇ ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಂಡು ಗುರುಪೀಠದ ಎಲ್ಲಾ ಕಾರ್ಯವೈಖರಿಯನ್ನು ಪೀಠಾಧ್ಯಕ್ಷರಾಗಿ ಮಾಡುವಲ್ಲಿ ಗುರುತರವಾದ ಹೆಜ್ಜೆಗಳನ್ನಿಡುತ್ತಿದ್ದೇವೆ. ಇದರಿಂದ ನಮ್ಮ ಗುರುಪೀಠಕ್ಕೆ ಎಲ್ಲಿಯೂ ಹಿನ್ನೆಡೆಯಾಗಿಲ್ಲ. ನಮ್ಮ ಸಮುದಾಯದ ಶಿಷ್ಯರುಗಳು ಜಿಲ್ಲೆ, ರಾಜ್ಯವಷ್ಟೆ ಅಲ್ಲ ದೇಶದಲ್ಲಿ ಯೇ ಇದ್ದಾರೆ. 19 ರಾಜ್ಯಗಳಲ್ಲಿಯೂ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಸಮುದಾಯದ ಎಲ್ಲರನ್ನೂ ಒಂದು ಗೂಡಿಸಿಕೊಂಡು ಛಲವಾದಿ‌ ಮಹಾ ಸಭಾದತಿಯಿಂದ ಬಸವ ಸಮಿತಿಯನ್ನು ರಚನೆ ಮಾಡಿದ್ದು, ಶೇಷಪ್ಪ ಜಿಲ್ಲಾಧ್ಯಕ್ಷರಾಗಿದ್ದಾರೆ. ಪೀಠದವತಿಯಿಂದ ರಾಷ್ಟ್ರ ಮಟ್ಟದ ಬೆಳ್ಳಿ ಹಬ್ಬವನ್ನು ಆಚರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಬೆಳ್ಳಿ ಹಬ್ಬದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಲು ಬರುವವರಿಗೆ ನಾವು ಸ್ವಾಗತ ಮಾಡುತ್ತೇವೆ. ಜಿಲ್ಲಾ ಸಮಿತಿ 30 ಜನರನ್ನೊಳಗೊಂಡಿದೆ. ತಾಲೂಕು ಸಮಿತಿಗಳು‌ ಕೂಡ 30 ಜನರನ್ನು ಹೊಂದಿರುತ್ತದೆ. ಇಡೀ ರಾಜದ್ಯದಲ್ಲಿ ಸರಿಸುಮಾರು 1000 ಜನ ಸದಸ್ಯರ ನೋಂದಣಿ‌ ಮಾಡಿಕೊಂಡು ರಾಷ್ಟ್ರ ಮಟ್ಟದ ಬೆಳ್ಳಿ ಹಬ್ಬವನ್ನು ಆಚರಿಸುತ್ತೇವೆಂದು ಹೇಳಿದರು.

 

 

 

Leave a Reply

Your email address will not be published. Required fields are marked *