ವೈಯುಕ್ತಿಕ ವಿಚಾರಗಳನ್ನು ಮಾತಾಡಿದರೆ ಕಾನೂನು ಹೋರಾಟ ಮಾಡುತ್ತೇನೆ

ರಾಜ್ಯ

ರಾಜಕೀಯಗಳ ಬಗ್ಗೆ ಮಾತನಾಡುವವರು ಆರೋಪಿಸುವವರು ರಾಜಕೀಯಕ್ಕಷ್ಟೆ ಸೀಮಿತವಾಗಿರಬೇಕು ವೈಯುಕ್ತಿಕ ವಿಚಾರಗಳ ಬಗ್ಗೆ ಮಾತಾಡಿದರೆ ಅಂತವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಎನ್ ಎಸ್ ಯು ಐ ನ ರಾಜ್ಯ ಕಾರ್ಯದರ್ಶಿ ರಕ್ಷಿತಾ ರಾಥೋಡ್ ಎಚ್ಚರಿಕೆ ನೀಡಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ‌ ಮಾತಾಡಿದರು.
ಎನ್ ಎಸ್ ಯು ಐ ನ ಚಿತ್ರದುರ್ಗ ಮಾಜಿ ಜಿಲ್ಲಾಧ್ಯಕ್ಷ ವಿನಯ್ ಗೋಡೆ ಮನೆ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿಯೇ ಮುಂದುವರೆಸಬೇಕು, ಚುನಾವಣೆ ನಂತರ ನನ್ನನ್ನು ಜಿಲ್ಲಾಧ್ಯಕ್ಷೆಯಾಗಿ ನೇಮಕ‌ ಮಾಡಬೇಕು. ಕಿರಣ್ ಯಾದವ್ ಅವರ ನೇಮಕ ತಡೆ ಹಿಡಿಯಬೇಕೆಂದು ರಕ್ಷಿತಾ ರಾಥೋಡ್ ಆಗ್ರಹಿಸಿದ್ದಾರೆ.ರಾತ್ರೋ ರಾತ್ರಿ ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೂ ವಿನಯ್ ಗೋಡೆ ಮನೆ ಅವರನ್ನು ಮುಂದುವರೆಸಬೇಕು. ದಲಿತ ಹೆಣ್ಣು ಮಕ್ಕಳಿಗೆ ಎನ್ ಎಸ್ ಯು ಐ ನಲ್ಲಿ ಸ್ಥಾನ ಮಾನಗಳನ್ನು ಕೊಡಬೇಕು.ಚುನಾವಣೆ ನಂತರ ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅವರು ನನ್ನನ್ನು ಪರಿಗಣಿಸುತ್ತಾರೆಂಬ ಎಂಬ ವಿಶ್ವಾಸವಿದೆ. ಸಂಘಟನೆಯಲ್ಲಾದ ಅನ್ಯಾಯಗಳನ್ನು ಜಿಲ್ಲೆಯ ಮಾಜಿ ಸಚಿವರು ಸಂಸದರು, ಹಾಗೂ ಹಾಲಿ ಸಚಿವರು ಮತ್ತು ಶಾಸಕರುಗಳು ಸರಿಪಡಿಸಬೇಕು.ಇದಕ್ಕಾಗಿ ಸಭೆ ಕರೆಯಬೇಕು. ಇನ್ನು ರಾಜಕೀಯದ ಬಗ್ಗೆ ಮಾತಾಡಬೇಕೆ ಹೊರೆತು ವೈಯುಕ್ತಿಕ ಜಾತಿ ವಿಚಾರಗಳನ್ನು ಮಾತಾಡಬಾರದು, ಜೊತೆಗೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಇದು ಕೊನೆಯಾಗಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದರು.

 

 

 

Leave a Reply

Your email address will not be published. Required fields are marked *