ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ದೇವರಹಳ್ಳಿಯಲ್ಲಿ ಜಮೀನಿನ ವಿಚಾರಕ್ಕೆ ನಡೆದ ಜಗಳದಲ್ಲಿ ಕೊಲೆ ಮಾಡಿದ್ದ 9 ಜನ ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಬುಧವಾರ ಸಂಜೆ ಶ್ರೀರಾಂಪುರ ಹೋಬಳಿಯ ದೇವರಹಳ್ಳಿಯಲ್ಲಿ ರಿ.ಸರ್ವೆ ನಂಬರ್ 4-8 ರ ಜಮೀನಿನ ದಾರಿ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಜಗಳನಡೆದಿತ್ತು. ಇದರಲ್ಲಿ ಫಾಲಾಕ್ಷಿ ಎಂಬ ಮಹಿಳೆ ಮೇಲೆ ಮಚ್ಚು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.ಕೊಲೆ ಮಾಡಿದ್ದವರು ತಲೆ ಮರೆಸಿಕೊಂಡಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಎಸ್ಪಿ ಪರುಶುರಾಂ, ಮತ್ತು ಅಡಿಷನಲ್ ಎಸ್ಪಿ ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಹಿರಿಯೂರು ಡಿವೈಎಸ್ಪಿ ಚೈತ್ರ ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಆರೋಪಿಗಳ ಶೋಧನೆ ಕಾರ್ಯ ನಡೆಸಿದ್ದರು. ಇಂದು ಈ ತಂಡವು 9 ಜನರನ್ನು ಬಂಧಿಸಿದ್ದು, ಅವರುಗಳನ್ನು ರಾಜಣ್ಣ, ಬಸವರಾಜಪ್ಪ, ನಾಗರಾಜ ರುದ್ರೇಶ್,ರಾಮಕ್ಕ, ಶಿಲ್ಪ, ರೂಪ, ಶಾಂತಮ್ಮ ಮತ್ತು ಆಶಾ @ ಆಶಾಲತಾ ಎಂದು ಗುರುತಿಸಲಾಗಿದೆ ಎಂದು ಎಸ್ಪಿ ಪರುಶುರಾಂ ತಿಳಿಸಿದ್ದಾರೆ.