ಬೆಂಕಿ ಜ್ವಾಲೆಗೆ ಹಣ್ಣಿನಂಗಡಿ ಮತ್ತು ಎಳೆನೀರು ಭಸ್ಮ

ಜಿಲ್ಲಾ ಸುದ್ದಿ

ಹಣ್ಣಿನ ಅಂಗಡಿಗೆ ಬೆಂಕಿ ಬಿದ್ದ ಪರಿಣಾಮ ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪಲ್ಲಿ ನಡೆದಿದೆ. ಹಣ್ಣಿನ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದಿದ್ದು ಸುಮಾರು 4 ಹಣ್ಣಿನ ಅಂಗಡಿ 1 ಬಿಡಾಂಗಡಿ 3 ಎಗ್ ರೈಸ್ ಅಂಗಡಿ ಸುಟ್ಟಿವೆ .ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಬೆಂಕಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ . ವಿಷಯ ತಿಳಿದು ಅಗ್ನಿಶಾಮಕ ಠಾಣೆಯ ಜಯಣ್ಣ ನೇತೃತ್ವದ ತಂಡ ಸ್ಥಳ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ .ಇದು ಕಿಡಿಗೇಡಿಗಳ ಕಿಡಿಗೇಡಿತನವು ಅಥವಾ ಆಕಸ್ಮಿಕವು ತಿಳಿದು ಬಂದಿಲ್ಲ ಹಣ್ಣಿನ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಚಳ್ಳಕೆರೆ ನಗರದ ವ್ಯಾಪರಸ್ಥರಾದ ವೆಂಕಟೇಶ್ ಓಬಣ್ಣ ವೆಂಕಟೇಶ್ ಅಶೋಕ್, ಹನುಮಂತ ರಾಯ, ನಾಗೇಂದ್ರಪ್ಪ ರಮೇಶ್ ರಾಮಣ್ಣ ಭಾಗ್ಯಮ್ಮ ಸೇರಿದಂತೆ ಸುಮಾರು 8 ಅಂಗಡಿಗಳು ಸುಟ್ಟಿದ್ದು ಎರಡು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ತಿಳಿದು ಬಂದಿದೆ. ವಿಷಯ ತಿಳಿದ ಸ್ಥಳೀಯ ಶಾಸಕ ಟಿ. ರಘುಮೂರ್ತಿ ಭೇಟಿ‌ನೀಡಿ ಪರಿಶೀಲಿಸಿದರು. ಬೆಂಕಿ‌ ಅನಾಹುತದಲ್ಲಿ  ನಷ್ಟ ಅನುಭವಿಸಿದವರಿಗೆ ಸಾಂತ್ವಾನ ಹೇಳಿದರು. ನಂತರ ಮಾಧ್ಯಮಗಳಿಗೆ ಮಾತನಾಡಿ, ತಹಶೀಲ್ದಾರ್ ಹಾಗೂ ಅಧಿಕಾರಿಗಳಿಗೆ   ಹಣ್ಣಿನ ಅಂಗಡಿ ಹಾಗೂ ಎಳೆ ನೀರು ಸುಟ್ಟು ಕರಕಲಾಗಿ ನಷ್ಟವಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದರು.ತಕ್ಷಣದ ಪರಿಹಾರವಾಗಿ  ಮತ್ತು ಅಂಗಡಿ ಮರು ಆರಂಭಿಸಲು ಸೂಕ್ತ ಕ್ರಮ‌ಜರುಗಿಸಬೇಕು ಎಂದು ಸೂಚನೆಯನ್ನು ನೀಡಿದರು.

 

 

 

Leave a Reply

Your email address will not be published. Required fields are marked *