Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025
  • ರಾಜ್ಯ

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ಮೂರನೇ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ ಪಕ್ಷ
ರಾಜ್ಯ

ಮೂರನೇ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ ಪಕ್ಷ

D KumaraswamyBy D KumaraswamyFebruary 24, 2023Updated:February 24, 2023No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು ತನ್ನ 3ನೇ ಭರವಸೆಯನ್ನು ರಾಜ್ಯದ ಜನತೆಗೆ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿಯನ್ನು ನೀಡುವುದಾಗಿ ಘೋಷಿಸಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಸಹ ಮಾಡಿ ಮಾಹಿತಿ ನೀಡಿರುವ ಸಿದ್ದರಾಮಯ್ಯ, ‘ಇದು ಕಾಂಗ್ರೆಸ್ ಪಕ್ಷದ ಮೂರನೇ ಗ್ಯಾರೆಂಟಿ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೇರಿದ ಕೂಡಲೆ ರಾಜ್ಯದ ಬಡ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ನಾವು ಈ ಹಿಂದೆಯೂ ನುಡಿದಂತೆ ನಡೆದಿದ್ದೇವೆ, ಮುಂದೆಯೂ ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ’ ಎಂದು ಹೇಳಿದ್ದಾರೆ.

ಇದು ಕಾಂಗ್ರೆಸ್ ಪಕ್ಷದ ಮೂರನೇ ಗ್ಯಾರೆಂಟಿ.

 

 

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೇರಿದ ಕೂಡಲೆ ರಾಜ್ಯದ ಬಡಕುಟುಂಬದ ಪ್ರತೀ ವ್ಯಕ್ತಿಗೆ ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ.

ನಾವು ಈ ಹಿಂದೆಯೂ ನುಡಿದಂತೆ ನಡೆದಿದ್ದೇವೆ,
ಮುಂದೆಯೂ ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಡಿ.ಕೆ.ಶಿವಕುಮಾರ್, ‘ಕೆಪಿಸಿಸಿ ಕಚೇರಿಯಲ್ಲಿ ಇಂದು ಕಾಂಗ್ರೆಸ್‌ನ 3ನೇ ಗ್ಯಾರಂಟಿಯಾದ “ಅನ್ನ ಭಾಗ್ಯ”ವನ್ನು ಅಧಿಕೃತವಾಗಿ ಘೋಷಿಸಲಾಯಿತು. ಪ್ರತಿ ಬಡ ಕುಟುಂಬದ ಪ್ರತಿ ಸದಸ್ಯನಿಗೆ ಮಾಸಿಕ 10KG ಉಚಿತ ಅಕ್ಕಿ ನೀಡಲಿದ್ದೇವೆ. ಹೊಟ್ಟೆ ತುಂಬಿದ BJP ಸರ್ಕಾರಕ್ಕೆ ಹಸಿವಿನ ಸಂಕಟ ತಿಳಿದಿಲ್ಲ. ಕೆಲವೇ ದಿನಗಳಲ್ಲಿ ಬಡವರು, ಹಸಿದವರ ಪರವಾಗಿರುವ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

KPCC ಕಚೇರಿಯಲ್ಲಿ ಇಂದು ಕಾಂಗ್ರೆಸ್‌ನ 3ನೇ ಗ್ಯಾರಂಟಿಯಾದ “ಅನ್ನ ಭಾಗ್ಯ”ವನ್ನು ಅಧಿಕೃತವಾಗಿ ಘೋಷಿಸಲಾಯಿತು. ಪ್ರತಿ ಬಡ ಕುಟುಂಬದ ಪ್ರತಿ ಸದಸ್ಯನಿಗೆ ಮಾಸಿಕ 10KG ಉಚಿತ ಅಕ್ಕಿ ನೀಡಲಿದ್ದೇವೆ. ಹೊಟ್ಟೆ ತುಂಬಿದ BJP ಸರ್ಕಾರಕ್ಕೆ ಹಸಿವಿನ ಸಂಕಟ ತಿಳಿದಿಲ್ಲ. ಕೆಲವೇ ದಿನಗಳಲ್ಲಿ ಬಡವರು, ಹಸಿದವರ ಪರವಾಗಿರುವ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ.

ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಈಗಾಗಲೇ 2 ಭರವಸೆಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ ಯೋಜನೆ ಜಾರಿಗೆ ತರುತ್ತೇವೆ ಎಂದು ಘೋಷಿಸಲಾಗಿತ್ತು. ಅಲ್ಲದೇ ಪ್ರಿಯಾಂಕಾ ಗಾಂಧಿಯವರು ಮಹಿಳೆಯರಿಗೆ ತಿಂಗಳಿಗೆ 2000 ರೂ. ಘೋಷಣೆ ಮಾಡಿದ್ದರು. ಇದೀಗ ಬಡ ಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿದೆ.

Share. Facebook Twitter Pinterest LinkedIn Tumblr WhatsApp Email
Previous Articleಬಾಲಕಾರ್ಮಿಕ ಪದ್ಧತಿ ತಡೆ, ನಿರ್ಮೂಲನೆಗಾಗಿ ಹೆಚ್ಚಿನ ದಾಳಿ ನಡೆಸಿ, ಅರಿವು ಮೂಡಿಸಿ
Next Article ಬೆಂಕಿ ಜ್ವಾಲೆಗೆ ಹಣ್ಣಿನಂಗಡಿ ಮತ್ತು ಎಳೆನೀರು ಭಸ್ಮ
D Kumaraswamy
  • Tumblr

Related Posts

ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

December 12, 2025

ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

December 3, 2025

ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

November 30, 2025

ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

November 26, 2025
Leave A Reply Cancel Reply

Recent Posts
  • ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.