Chitradurga thippareddy asamadhana

ಕುಡಿಯುವನೀರಿನ ಘಟಕ ಉದ್ಘಾಟಿಸಿದ ಶಾಸಕ ಜಿ ಹೆಚ್ ಟಿ

ಆರೋಗ್ಯ

 

ಚಿತ್ರದುರ್ಗ: ‘ಕುಡಿಯುವ ನೀರು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕುಡಿಯುವ ನೀರು ಶುದ್ಧವಾಗಿದ್ದರೆ ಎಷ್ಟೋ ಕಾಯಿಲೆಯನ್ನು ದೂರ ಮಾಡಬಹುದಾಗಿದೆ’ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

 

 

 

ತಾಲ್ಲೂಕಿನ ನಂದಿಪುರ ಗ್ರಾಮದಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ನೂತನವಾಗಿ ನಿರ್ಮಿಸಲಾಗಿರುವ ಶುದ್ದ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.ಹಳ್ಳಿಗಳಲ್ಲಿ ಶುದ್ದ‌ ನೀರಿನ ಘಟಕ ನಿರ್ಮಾಣ ಮಾಡುವುದರಿಂದ ಎಲ್ಲಾರಿಗೂ ಶುದ್ದ ನೀರು ದೊರಕುತ್ತದೆ. ಮನುಷ್ಯನಿಗೆ ಆರೋಗ್ಯ ಉತ್ತಮವಾಗಿರಲು ನೀರು ಬಹಳ ಮುಖ್ಯವಾಗಿದೆ. ಹತ್ತಾರು ವರ್ಷಗಳ ಹಿಂದೆ ಸಾಕಷ್ಟು ನೀರಿ‌ನ ತೊಂದರೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದರು ಈಗ ಆ ಪರಿಸ್ಥಿತಿ ಇಲ್ಲ ಎಂದರು.ಶುದ್ದ ನೀರಿನ ಘಟಕವನ್ನು ನಿರ್ವಹಣೆ ಮಾಡಲು ಒಬ್ಬರನ್ನು ನೇಮಿಸಿ ಅದರ ಖರ್ಚು ವೆಚ್ಚವನ್ನು ಅದಕ್ಕೆ ಲೀಟರಗೆ ಇಂದಿಷ್ಟು ಹಣ ನಿಗದಿ ಮಾಡಿ ಅಗತ್ಯಕ್ಕೆ‌ ಅನುಗುಣವಾಗಿ ಸರ್ವಿಸ್ ಇತ್ಯಾದಿ ಮಾಡಿಸಿ ನಿರ್ವಹಣೆ ಮಾಡಿದರೆ ಯಂತ್ರ ಬಾಳಿಕೆ ಬರುತ್ತದೆ ಎಂದು ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರು ಹಾಜರಿದ್ದರು.ಸೊಂಡೇಕೊಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಷಾ ಜಯಪ್ಪ, ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಜಯಪ್ಪ , ಗ್ರಾ.ಪಂ ಸದಸ್ಯರುಗಳಾದ

ಉಮೇಶ್, ಶಿವಣ್ಣ, ಯಲ್ಲಕ್ಕ ಕಲ್ಲಪ್ಪ ಮತ್ತು ಮುಖಂಡರು ಇದ್ದರು.

Leave a Reply

Your email address will not be published. Required fields are marked *