ಮಾಜಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ರಾಜಕೀಯಕ್ಕೆ ಎಂಟ್ರಿ

ಜಿಲ್ಲಾ ಸುದ್ದಿ

ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಹಲವಾರು ಜನಪರ ಕೆಲಸವನ್ನು ಮಾಡಿದ್ದೇನೆ, ನನ್ನ ಅಭಿಮಾನಿಗಳು ಹಿತೈಷಿಗಳು ರಾಜಕೀಯಕ್ಕೆ ಬನ್ನಿ ಎಂಬ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಬರುತ್ತಿದ್ದು, ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಾರ್ಟಿವತಿಯಿಂದ ಟಿಕೆಟ್ ಕೇಳಿದ್ದೇನೆ, ಅದರೆ ಪಕ್ಷದ ವರಿಷ್ಠರು ಯಾವುದೇ  ಭರವಸೆ ನೀಡಿಲ್ಲ ಎಂದು ಮಾಜಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ 2014ರಲ್ಲಿ ಕೆಲಸವ ಮಾಡಿದ್ದೇನೆ. ಇಲ್ಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದಿದ್ದೆನೆ, ಅಲ್ಲದೆ ಹಲವಾರು  ಸಮಸ್ಯೆಯನ್ನು ಬಗೆಹರಿಸಿದ್ದೇನೆ, ಇದರೊಂದಿಗೆ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳ ಪರಿಚಯ ವಿದ್ದು, ಅಲ್ಲಿನ ಜನತೆಯ ನಡುವೆ ಒಡನಾಟ ಇದೆ, ಜನಪ್ರತಿನಿಧಿಗಳೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದೇನೆ. 2014ರಲ್ಲಿ ವಿವಿಧ ರೀತಿಯ ಚುನಾವಣೆ ಮಾಡಿದ್ದೆನೆ, ಚಿತ್ರದುರ್ಗ ಲೋಕಸಭಾದ 8 ಕ್ಷೇತ್ರಗಳ ಪರಿಚಯವಿದ್ದು, ಇಲ್ಲಿನಾ ಆಗು ಹೋಗುಗಳನ್ನು ತಿಳಿದಿದ್ದೇನೆ. ಇದರಿಂದ ಈ ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದರು.
ಬಿಜೆಪಿಯ ವರಿಷ್ಠರನ್ನು ಹಲವಾರು ಬಾರಿ ಭೇಟಿಯಾಗಿದ್ದೇನೆ, ನನಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ, ಈಗ ಹಾಲಿ ಸಂಸದರು ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ, ಇದರಿಂದ ನಾನು ಕಣಕ್ಕೆ ಇಳಿದಿದ್ದೇನೆ, ಈ ಕ್ಷೇತ್ರದಲ್ಲಿ ಮಾದಿಗ ಎಡಗೈ ಸಮುದಾಯದವರ ಸುಮಾರು 4 ರಿಂದ 5 ಲಕ್ಷ ಮತದಾರರಿದ್ದಾರೆ. ಈಗಾಗಲೇ ಒಂದು ಬಾರಿ ಕ್ಷೇತ್ರದ ನಾಯಕರನ್ನು ಭೇಟಿ ಮಾಡಿದ್ದೇನೆ ಇನ್ನು ಮತದಾರರನ್ನು ಭೇಟಿ ಮಾಡಿಲ್ಲ. ಮುಂದಿನ ದಿನದಲ್ಲಿ ಅವರನ್ನು ಸಹಾ ಭೇಟಿ ಮಾಡುವುದರ ಮೂಲಕ ಜಿಲ್ಲಾಧಿಕಾರಿಯಾಗಿದ್ದಾಗ ನಾನು ಮಾಡಿದ ಕೆಲಸಗಳನ್ನು ಅವರಿಗೆ ತಿಳಿಸಿಕೊಡಲಾಗುವುದು ಎಂದು ಶ್ರೀರಂಗಯ್ಯ ತಿಳಿಸಿದರು.
ಬಿಜೆಪಿ ಪಕ್ಷದಲ್ಲಿ ನಾನು ಟಿಕೆಟ್ ಕೇಳಿದ್ದೇನೆ ಪಕ್ಷ ತೀರ್ಮಾನ ಮಾಡಿ ನನಗೆ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ, ಇಲ್ಲವಾದಲ್ಲಿ ಕಾರ್ಯಕರ್ತನಾಗಿ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರ ಕೆಲಸ ಮಾಡುತ್ತೇನೆ, ನಾನು ಸಹಾ ಸ್ಥಳಿಯನಾಗಿದ್ದೇನೆ, ಹೂರಗಿನಿಂದ ಬಂದವನಲ್ಲ, ಗಡಿ ಪ್ರದೇಶದಲ್ಲಿ ನಮ್ಮ ಪರಿವಾರ ಇದೆ ಎಂದು ಸ್ಪಷ್ಟಪಡಿಸಿದರು.
ಗೋಷ್ಟಿಯಲ್ಲಿ ತಾಲ್ಲೂಕು ಪಂಚಾಯಿ ಮಾಜಿ ಸದಸ್ಯ ಮೋಹನ್, ಗ್ರಾಮ ಪಂಚಾಯಿತಿ ಸದಸ್ಯ ರಂಗಯ್ಯ ಉಪಸ್ಥಿತರಿದ್ದರು.

 

 

 

Leave a Reply

Your email address will not be published. Required fields are marked *