ಸಮಾಲೋಚನಾ ಸಭೆಯಲ್ಲಿ ಡಾ.ಬಿ ತಿಪ್ಪೇಸ್ವಾಮಿಗೆ ಬೆಂಬಲಿಸಲು ಒಕ್ಕೊರಲ ತೀರ್ಮಾನ

ರಾಜ್ಯ

ಬಿ. ದುರ್ಗ ಹೋಬಳಿಯ ಸಮಾಲೋಚನಾ ಸಭೆಯಲ್ಲಿ ಸ್ಥಳೀಯ ಆಕಾಂಕ್ಷಿ ಡಾ. ಬಿ. ತಿಪ್ಪೇಸ್ವಾಮಿಗೆ ಬೆಂಬಲಿಸಲು ತೀರ್ಮಾನ

 

 

 

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿ ದುರ್ಗ ಹೋಬಳಿಯಲ್ಲಿ ವಿವಿಧ ಪಕ್ಷಗಳ ಮುಖಂಡರು ಹಾಗೂ ನಿಷ್ಠಾವಂತ ಕಾರ್ಯಕರ್ತರು, ಅಭಿಮಾನಿಗಳು, ಸಮಾಲೋಚನಾ ಸಭೆಯನ್ನು ನೆಡೆಸಿ ಸ್ಥಳೀಯ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ. ಬಿ. ತಿಪ್ಪೇಸ್ವಾಮಿಗೆ ಸ್ವಯಂ ಪ್ರೇರಣೆಯಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿ ಆಕಾಂಕ್ಷಿ ಡಾ. ಬಿ ತಿಪ್ಪೇಸ್ವಾಮಿಗೆ ಬೆಂಬಲ ಸೂಚಿಸಿದರು.

ಚಿತ್ರದುರ್ಗ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಇದುವರೆಗೂ ಹೊರ ಜಿಲ್ಲೆಯಿಂದ ಬಂದು ಅಧಿಕಾರ ನಡೆಸಿದಿದ್ದಾರೆ. ಹೊರ ಜಿಲ್ಲೆಯವರು ಗೆಲ್ಲುವುದಕ್ಕಷ್ಟೇ ಸೀಮಿತರಾಗಿದ್ದು, ಜಿಲ್ಲೆ ಅಭಿವೃದ್ದಿ ಹಾಗು ಜನರ ಕಷ್ಟಗಳ ಕೇಳುತ್ತಿಲ್ಲ.ಇದರಿಂದ ಚಿತ್ರದುರ್ಗಕ್ಕೆ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿದೆ. ಚುನಾವಣೆ ಸಮೀಪದಲ್ಲಿ ಬರುವ ಹೊರಗಿನವರು ಮತ್ತೆ ಕಾಣಿಸಿಕೊಳ್ಳುತ್ತಾರೆ. ಆದ್ದರಿಂದ ಈ ಬಾರಿ ನಮ್ಮಲ್ಲಿರುವ ಲೋಕಸಭಾ ಚುನಾವಣೆಗೆ ಸಮರ್ಥ ಡಾ. ತಿಪ್ಪೇಸ್ವಾಮಿ ಅವರನ್ನು ಬೆಂಬಲಿಸೋಣ, ಈ ಬಾರಿ ಹೊರ ಜಿಲ್ಲೆ ಯವರಿಗೆ ಮತ ನೀಡದೆ ಸ್ಥಳೀಯರಿಗೆ ಮತ ನೀಡುತ್ತೇವೆಂದು ಸಭೆ ತೀರ್ಮಾನಿಸಿತು.
ಡಾ. ಬಿ ತಿಪ್ಪೇಸ್ವಾಮಿ ರವರಿಗೆ ಮುಂಚೆಯೇ ಅವಕಾಶ ಸಿಕ್ಕಿದ್ದರೆ ರಾಜ್ಯದಲ್ಲಿ ಉತ್ತಮ ನಾಯಕರಾಗುತ್ತಿದ್ದರು, ಜನರ ಕಷ್ಟಗಳಿಗೆ ಸ್ಪಂದಿಸುವವರಿಗೆ ಅವಕಾಶ ಕೊಡಬೇಕೆಂದು ವಕೀಲರು ರೇವಣ್ಣ ಹೇಳಿದರು.ಕಾಂಗ್ರೆಸ್ ಮುಖಂಡ ಎಂ ಡಿ ಅಶ್ವಕ ಅಲಿ ಮಾತನಾಡಿ, ಚಿತ್ರದುರ್ಗದಲ್ಲಿ ಡಾ. ಬಿ ತಿಪ್ಪೇಸ್ವಾಮಿ ಶಿಕ್ಷಣದಲ್ಲಿ ಉನ್ನತ ಪದವಿಗಳನ್ನು ಪಡೆದಿದ್ದು, ಹೋರಾಟ ಗಾರರಾಗಿದ್ದಾರೆ. ಜಿಲ್ಲೆಯನ್ನು ಅಭಿವೃದ್ದಿ ಮಾಡುವ ಕನಸು ಹೊಂದಿದ್ದಾರೆಂದರು. ಸಮಾಲೋಚನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ ಡಿ ಅಶ್ವಕ್ ಅಲಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮಹಾಂತೇಶ್, ರಂಗಸ್ವಾಮಿ ಗ್ರಾಮ ಪಂ ಸದಸ್ಯರು, ರಮೇಶ್ ಬಿದುರ್ಗ ರಾಜ್ಯ ಕಾರ್ಮಿಕ ಪ್ರಧಾನ ಕಾರ್ಯದರ್ಶಿ, ವಕೀಲರು ರೇವಣ್ಣ ಸಿದ್ದಪ್ಪ ಗ್ರಾಮ ಸದಸ್ಯರು, ಪುಟ್ಟಣ್ಣ ಮಾಸ್ಟರ್, ಶಿವಕುಮಾರ್ ಕಾಂಗ್ರೆಸ್ ಮುಖಂಡರು, ಮದನ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಸಯ್ಯದ್ ಇರ್ಫಾನ್,ಒಂಕಾರಪ್ಪ ನಾಯಕ ಸಮಾಜ ಮುಖಂಡರು ಹಾಗೂ ಗ್ರಾಮ ಪಂ ಸದಸ್ಯರು, ಮಂಜಪ್ಪ ಗ್ರಾಮ ಪಂ ಸದಸ್ಯರು, ಹಾಗೂ ಬಿ ದುರ್ಗ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *