ನಮ್ಮ ಚುನಾವಣಾ ಫಲಿತಾಂಶ ವಿಶ್ವದಲ್ಲಿ ಚರ್ಚೆಯಾಗಬೇಕು

ರಾಜ್ಯ

ಬಿಜೆಪಿಯ 10 ವರ್ಷದ ಆಡಳಿತದಲ್ಲಿ ಎರಡು ಧ್ವಜ ಹಾಗೂ ಎರಡು ಸಂವಿಧಾನ ಇರಬಾರದು ಎಂದು ಆರ್ಟಿಕಲ್ 370 ರದ್ದು,ಹಾಗೂ ಮಹಿಳಾ ಮೀಸಲಾತಿಯನ್ನು ತಂದಿದೆ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿದರು. ಅವರು ಲೋಕಸಭಾ ಚುನಾವಣೆಯ ಬಿಜೆಪಿ‌ ಕಚೇರಿ‌ ಉದ್ಘಾಟಿಸಿ ಮಾತಾಡಿದರು. ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಗುರವಾಗಿ ಮಾತಾಡುತ್ತಾರೆ. ರಾಮಮಂದಿರ ಆರಂಭವಾದರೆ ಅಲ್ಲೊಕಲ್ಲೋವಾಗುತ್ತದೆ ಎಂದಿದ್ದರು, ಆದರೆ ಏನು ಆಗಲಿಲ್ಲ. ರಾಮ ಮಂದಿರ ದೇಶದ ಪ್ರತೀಕವಾಗಿದೆ. ಎಲ್ಲರೂ ಚುನಾವಣೆ ಗೆಲ್ಲುವ ಕಡೆಗೆ ಗಮನವಿರಿಸಿ, ವಿಶ್ವಕ್ಕೆ ನಮ್ಮ ಫಲಿತಾಂಶ‌ ತೋರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಕರೆ ನೀಡಿದರು.
ಶಾಸಕ ತಿಪ್ಪಾರೆಡ್ಡಿ ಮಾತಾಡಿ,ಮೋದಿ ಪ್ರಧಾನಿಯಾಗುತ್ತಾರೆ ಎಂಬ ಮನವರಿಕೆಯನ್ನು ವಿವಿಧ ದೇಶಗಳು ಮಾಡಿಕೊಂಡಿವೆ. ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಭೀಮ‌ ಬಲ ಬಂದಿದೆ. ದಕ್ಷಿಣ ಭಾರತದಲ್ಲಿ 45 ಸೀಟುಗಳು ಬರಬೇಕಿದೆ. ಬಿಜೆಪಿ ಗೆಲುವು ಶತ ಸಿದ್ದವಾಗಿರುವುದರಿಂದ ಎಲ್ಲಾ ಪಕ್ಷಗಳು ನಮ್ಮ ಜೊತೆ ಬರುತ್ತಿವೆ. ಇಂಡಿಯಾದಿಂದ (ಐ ಎನ್ ಡಿ ಐ ಎ)ನಮಗೆ ಯಾವುದೇ ನಷ್ಟವಿಲ್ಲ ಎಂದರು.ವಿಧಾನ ಪರಿಷತ್ ಸದಸ್ಯಕೆ ಎಸ್ ನವೀನ್ ಮಾತಾಡಿ, ಈ ಕ್ಷೇತ್ರವನ್ನು ಗೆದ್ದೆ ಗೆಲ್ಲುತ್ತೇವೆ, ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವ ವಾತಾವರಣದಲ್ಲಿದ್ದೇವೆ. ಎಂಟು ಕ್ಷೇತ್ರಗಳಲ್ಲಿ ಗೆಲುವನ್ನು ತರಬೇಕು. ಆದ್ದರಿಂದ ಚುನಾವಣೆಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಎಷ್ಟೆ ಅನುಭವವಿದ್ದರೂ ಕೂಡ ಸಣ್ಣ ಕೊರತೆ ಇಲ್ಲದೆ ಚುನಾವಣೆಗೆ ತಯಾರಾಗಬೇಕು. ಕಾಂಗ್ರೆಸ್ ನವರು ಏನೇ ಓಡಾಡಿದರೂ ಕೆಲಸ ಮಾಡಿದರೂ ಕೂಡ ಕಾಂಗ್ರೆಸ್ ಸೋಲು‌ ಖಚಿತ, ರಾಜ್ಯದಲ್ಲಿ‌ ಕಾಂಗ್ರೆಸ್ ವಿರೋಧಿ ಅಲೆ ಇದೆ.ಎಲ್ಲಾ ಆಯಾಮಗಳಲ್ಲಿ ಸರ್ಕಾರ ವಿಫಲವಾಗಿದೆ. ಜನರು ಪಾಠ ಕಲಿಸಲು ಕಾಯುತ್ತಿದ್ದಾರೆ. ಇದನ್ನು ಬಳಿಸಿಕೊಂಡು ಬಿಜೆಪಿಯನ್ನು ಗೆಲ್ಲಿಸಬೇಕೆಂದರು. ಮಾಜಿ ಶಾಸಕ ತಿಪ್ಪೇಸ್ವಾಮಿ‌ ಮಾತಾಡಿ,ಹಿರಿಯರು ಕೊಟ್ಟ ಸಲಹೆ ಮೇರೆಗೆ ಕೆಲಸ ಮಾಡಿದರೆ ಮಾತ್ರ ಗೆಲುವು ಸಾಧ್ಯ, ಪ್ರಧಾನಿ ಮೋದಿ ಮತ್ತೊಮ್ಮೆ ದೇಶಕ್ಕೆ ಬೇಕು. ಕಾಂಗ್ರೆಸ್ ಸರ್ಕಾರ ಸುಳ್ಳಿನ ಭರವಸೆಗಳ ಮೇಲೆ ನಡೆಯುತ್ತಿದೆ ಎಂದರು
ಕಾರ್ಯಕ್ರಮದಲ್ಲಿ ಶಾಸಕ ನವೀನ್, ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷರಾದ ಮುರುಳಿ, ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತೆಗೌಡ, ಮಾಜಿ ಶಾಸಕ ರಾಜೇಶ್ ಗೌಡ ಹಾಗೂ ಇತರೇ ಮುಖಂಡರು ಭಾಗಿಯಾಗಿದ್ದರು.

 

 

 

Leave a Reply

Your email address will not be published. Required fields are marked *