ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಹೊರಗಿನವರಿಗೆ ಟಿಕೆಟ್ ಕೊಟ್ಟರೆ ಮತ ನೀಡುವುದಿಲ್ಲ ಎಂದು ಮತದಾರರು ಪ್ರತಿಜ್ಞೆ ಮಾಡುವುದರ ಜೊತೆಗೆ ಜಿಲ್ಲೆಯ ನೈತಿಕತೆ ಹಾಗು ಬದ್ದತೆಯನ್ನು ಎತ್ತಿ ಹಿಡಿಯಬೇಕೆಂದು ಚಿತ್ರದುರ್ಗ ಮೀಸಲು ಲೋಕಸಭಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ. ಬಿ ತಿಪ್ಪೇಸ್ವಾಮಿ ಕರೆ ನೀಡಿದರು.
ಅವರು ಚಳ್ಳಕೆರೆಯ ಪರುಶುರಾಂಪುರದ ಚೌಳೂರು ಗೇಟ್ ಬಳಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಿದಂತೆ ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯರನ್ನು ಗೆಲ್ಲಿಸುವಂತೆ ಮಾಡಿ ಪರುಶುರಾಂಪುರ ಹಾಗೂ ಧರ್ಮಪುರಗಳನ್ನು ತಾಲೂಕು ಕೇಂದ್ರಗಳನ್ನಾಗಿ ಮಾಡುವ ಭರವಸೆ ನೀಡಿದರು. ಚೌಳೂರು ಪ್ರಕಾಶ್ ಮಾತಾಡಿ, ಜೆಜೆ ಹಟ್ಟಿ ತಿಪ್ಪೇಸ್ವಾಮಿ, ಗಣಪತಿ ಹಬ್ಬ, ಡಿಜೆ ಇವುಗಳಿಗೆ ಹಣ ಕೊಡದೆ ಆರೋಗ್ಯ, ಶಿಕ್ಷಣ, ಇನ್ನಿತರೆ ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತಾರೆ. ಇಂತವರನ್ನು ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ದಿಯಾಗುತ್ತದೆ ಎಂದರು. ಲಿಡ್ಕರ್ ನ ಮಾಜಿ ಅಧ್ಯಕ್ಷ ಓ . ಶಂಕರ್ ಮಾತಾಡಿ, ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಮತದಾರರು ಹಾಗೂ ಕ್ಷೇತ್ರದ ಜನತೆಯ ಕೂಗು ಎದ್ದಿದ್ದು, ಇದು ದೆಹಲಿ ಮಟ್ಟಕ್ಕೆ ತಲುಪಿದೆ. ಅದು ಡಾ. ತಿಪ್ಪೇಸ್ವಾಮಿಗೆ ಸಿಗಲಿ ಅವರ ಗೆಲುವಿಗೆ ಶ್ರಮಿಸೋಣ ಎಂದು ಹೇಳಿದರು.