ಋತು ಚಕ್ರದ ಸಮಯದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು: ಹಿರಿಯ ಸ್ತ್ರೀ ರೋಗ ತಜ್ಞ ಡಾ. ರವಿಕುಮಾರ್

ಜಿಲ್ಲಾ ಸುದ್ದಿ

ಚಿತ್ರದುರ್ಗ: ಋತ ಚಕ್ರದ ವೇಳೆ ವೈಯುಕ್ತಿಕ ಶುಚಿತ್ಚ ಕಾಪಾಡಿಕೊಳ್ಳದೆ ಹೋದರೆ ಅಪಾಯಕಾರಿಯಂತಹ ರೋಗಕ್ಕೆ ತುತ್ತಾಗುವ ಎಲ್ಲ ಅವಕಾಶಗಳಿರುತ್ತವೆ. ಆದ್ದರಿಂದ ಋತುಚಕ್ರದ ಸಮಯದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಹಿರಿಯ ಸ್ತ್ರೀ ರೋಗ ತಜ್ಞ ಡಾ. ರವಿಕುಮಾರ್ ಹೇಳಿದರು.

Chitradurga mensrual hygienic

 

 

 

ಅವರು ಚಿತ್ರದುರ್ಗದ ಜಿಪಂ ಸಭಾಂಗಣದಲ್ಲಿ ನಡೆದ ಋತು ಚಕ್ರ ನಿರ್ವಹಣೆ ಕುರಿತು ಕಾರ್ಯಗಾರದಲ್ಲಿ ಮಾತನಾಡಿದರು. ಋತು ಚಕ್ರದ ಬಗ್ಗೆ ಎಲ್ಲರೂ ಯಾವುದೇ ಸಂಕೋಚವಿಲ್ಲದೆ ಮುಕ್ತವಾಗಿ ಮಾತನಾಡುವಂತಾಗಬೇಕು ಎಂದರು.
ಸಾಮಾನ್ಯವಾಗಿ ತಿಂಗಳಿಗೊಮ್ಮೆ ಋತುಚಕ್ರದ ಸಮಯವಾಗಿರುತ್ತದೆ. ಒಂದೆರಡು ದಿನಗಳು ಏರುಪೇರಾದರೆ ಯಾರೂ ಭಯಪಡುವ ಅಗತ್ಯವಿಲ್ಲ. ಋತು ಚಕ್ರದ ಸಮಯದಲ್ಲಿ ಸಂಕೋಚಪಡುವುದು,ನಾಚಿಕೆ ಪಡೆಯುವುದು ಮಾಡಬಾರದು. ಋತುಚಕ್ರದ ಸಮಯದಲ್ಲಿ ಮನೆಯಿಂದ ಹೊರಗೆ ಇಡಬಾರದು,ಮೂಢನಂಬಿಕೆ ಅಚರಣೆ ಮಾಡಬಾರದು. ಇದೊಂದು ಸ್ವಾಭಾವಿಕ ಕ್ರಿಯೆಯಾಗಿದೆ ಎಂದರು. ಋತು ಚಕ್ರದ ಸಮಯದಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ ರಕ್ತಸ್ರಾವವಾದರೆ ಅದು ಸಹಜ ಪ್ರತಿಕ್ರಿಯೆಯಾಗಿದೆ. ಆದರೆ ನಾಲ್ಕರಿಂದ ಎಂಟು ಹತ್ತು ದಿನಗಳ ಕಾಲ ರಕ್ತಸ್ರಾವ ಆದರೆ ಅದು ಅಸಹಜ ಕ್ರಿಯೆಯಾಗಿರುತ್ತದೆ. ಮೊಟ್ಟ ಮೊದಲು ಋತುಚಕ್ರದ ಸಮಯದಲ್ಲಿ ಮಕ್ಕಳಲ್ಲಿ ಮುಜುಗರ ಸಂಕೋಚ ಭಯ ಕೂಡ ಇರುತ್ತದೆ. ಆದ್ದರಿಂದ ಮಕ್ಕಳಲ್ಲಿ ಧೈರ್ಯ ತುಂಬುವಂತಹ ಕೆಲಸ ಮಾಡಬೇಕು.ಇನ್ನು ಋತು ಚಕ್ರದ ವೇಳೆ ಸ್ಯಾನಿಟರಿ ನ್ಯಾಪ್ಕಿನ್ಸ್ ಗಳನ್ನು 10 ರಿಂದ 15 ಬಳಸಲಾಗುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದಿದ್ದರೆ ಪರಿಸರಕ್ಕೆ ಹಾನಿ ಉಂಟಾಗುತ್ತದೆ. Menstrual cup ಒಂದು ಬಾರಿ‌ ಖರೀದಿಸಿದರೆ ಇದನ್ನು 3 ರಿಂದ 4 ವರ್ಷಗಳ ವರೆಗೆ ಒಳಕೆ ಮಾಡುವುದರಿಂದ‌ ಹಣ ಉಳಿತಾಯ ಮತ್ತು ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗವುದಿಲ್ಲವೆಂದು ತಿಳಿಸಲಾಯಿತು. ಹಾಗೂ ಟಾಂಪೂನ್ಸ್ ಗಳ ಬಳಕೆಯೂ ಒಂದು ಒಳ್ಳೆಯ ಮೆಥೆಡ್ ಆಗಿದೆ.ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಕೆ. ನಂದಿನ‌ದೇವಿಯವರು ಮಾತನಾಡುತ್ತಾ ಋತುಚಕ್ರದ ಸಮಯದಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸಿ ಬೇಕು. ಋತು ಚಕ್ರದ ಬಗ್ಗೆ ಮುಕ್ತವಾಗಿ ಮಾತನಾಡಬೇಕು.ಹಾಗೂ breast Cancer ರೋಗದ ಕುರಿತು ವೈದ್ಯ ಬಳಿ ಪ್ರತಿ 6 ಅಥವಾ 8 ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳ ಬೇಕೆಂದು ತಿಳಿಸಿದರು. ಹಾಗೂ ಮುಖ್ಯ ಯೋಜನಾಧಿಕಾರಿಯವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಋತಚಕ್ರದ ಕುರಿತು ಜನರಲ್ಲಿ ಇರುವ ಮೂಢನಂಬಿಕೆ ಹೋಗಲಾಡಿಸಿ ಬೇಕು. ಪುರುಷರು ಸಹಾ ಇದರ ಬಗ್ಗೆ ಗಮನಿಸಬೇಕು. ಅವರಿಗೂ ಸಹಾ ಅರಿವು ಮೂಡಿಸುವ ಅಗತ್ಯ ವಿದೆಂದು ತಿಳಿಸಲಾಯಿತು.

ಸಂಯುಕ್ತವಾಣಿ

Leave a Reply

Your email address will not be published. Required fields are marked *