ಸ್ವಾಮೀಜಿ ಜಾಮೀನು ಅರ್ಜಿ‌ ವಿಚಾರಣೆ ನಾಳೆಗೆ ಮುಂದೂಡಿಕೆ

ದೇಶ

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಜೈಲು ಸೇರಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದನ್ನು ನಾಳೆಗೆ ಮುಂದೂಡಲಾಗಿದೆ ಎಂದು ಸಂತ್ರಸ್ತೆಯರ ಪರ ವಕೀಲರಾದ ಶ್ರೀನಿವಾಸ್ ಹೇಳಿದರು. ಅವರು ಚಿತ್ರದುರ್ಗದಲ್ಲಿ‌ಮಾಧ್ಯಮಗಳೊಂದಿಗೆ ಮಾತನಾಡಿದರು.

 

 

 


ಇಂದು ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿತ್ತು.‌ಆದರೆ ನ್ಯಾಯಾಲಯವು ನಾಳೆಗೆ ಮುಂದೂಡಿದೆ. ನಾವುಗಳು ಅದಕ್ಕೆ ತಕರಾರು ಅರ್ಜಿಯನ್ನು ಸಲ್ಲಿಸಲಿದ್ದೇವೆ. ಹಾಗೂ ನಾಲ್ಕು ಮತ್ತು ಐದನೇ ಆರೋಪಿಗಳ ಜಾಮೀನು ಅರ್ಜಿಯೂ ನಾಳೆಗೆ ಮುಂದೂಡಿದ್ದು, ಅದಕ್ಕೂ ನಾವು ತಕರಾರು ಅರ್ಜಿಯನ್ನು ಸಲ್ಲಿಸಲಿದ್ದೇ. ಒಂದನೇ ಆರೋಪಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಇದಕ್ಕೆ ತಕರಾರು ಅರ್ಜಿಯನ್ನು ಸಲ್ಲಿಸಲು ನಾವು ಸಂತ್ರಸ್ತ ಮಕ್ಕಳ ಭೇಟಿ ಮಾಡಿ ವಿಚಟರಣೆ ನಡೆಸಿದ ನಂತರ ಸಲ್ಲಿಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೆವು. ಇಂದು ನ್ಯಾಯಾಲಯವು ಮನವಿಯ‌ನ್ನು ಪುರಸ್ಕತಿಸಿ ಮಕ್ಕಳ‌ ಭೇಟಿಗೆ ಅನಮತಿ‌ ನೀಡಿದೆ. ಮಕ್ಕಳನ್ನು ಭೇಟಿಯಾದ ಬಳಿಕ ಮಾಹಿತಿ ಪಡೆದು ತಕರಾರು ಅರ್ಜಿ ಸಲ್ಲಿಸುತ್ತೇವೆ. ಇನ್ನು ಶ್ರೀಗಳ ಪರವಾದ ವಕೀಲರಾದ ಸಿ ಹೆಚ್ ಹನುಮಂತರಾಯ ಮತ್ತು ಕೆಬಿಕೆ ಸ್ವಾಮಿ ತಂಡವು ಕೂಡ ಮತ್ತೊಮ್ಮೆ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದೆ. ಇದರಲ್ಲಿ ಮಾತನಾಡಿದ ಹಿರಿಯ ವಕೀಲರಾದ ಹನುಮಂತರಾಯ ಅವರು, ಈ ಮೊದಲು ಸಲ್ಲಿಸಿದ್ದ ಜಾಮೀನು ಅರ್ಜಿಯಲ್ಲಿ‌ ಕಣ್ತಪ್ಪಿಕೊಂಡಿದ್ದ ವಿಷಯಗಳನ್ನು ಮತ್ತೆ ಸೇರಿಸಿ ವಿಸ್ತಾರವಾಗಿ ಕೂಲಂಕುಷವಾಗಿ ಪರಿಶೀಲಿಸಿ ಅರ್ಜಿಯಲ್ಲಿ‌ಎಲ್ಲವನ್ನೂ ಹೇಳಿ‌ ಅರ್ಜಿಯನ್ನು ಸಲ್ಲಿಸಲಾಗಿದೆ. ನಂತರ ಪ್ರತಿವಾದಿ ವಕೀಲರು ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ಗಳು ಕೂಡ ತಕರಾರು ಅರ್ಜಿಯನ್ನು ಸಲ್ಲಿಸಲು ಎರಡು ದಿನ ಸಮಯಾವಕಾಶ ಕೇಳಿದ್ದು, ನಂತರ ಅರ್ಜಿ ಸಲ್ಲಿಸಲಿದ್ದಾರೆ. ಆ ನಂತರದಲ್ಲಿ ವಾದ ಪ್ರತಿ ವಾದಗಳು ಆರಂಭವಾಗಲಿವೆ ಎಂದು ಹೇಳಿದರು.

Leave a Reply

Your email address will not be published. Required fields are marked *