ಸ್ವಾತಂತ್ರೋತ್ಸವ ಆಚರಣೆಯಲ್ಲಿ ಯಶಸ್ವಿಯಾಗಿದ್ದೇವೆ

ಜಿಲ್ಲಾ ಸುದ್ದಿ

ಭಾರತ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಆಶಯದಂತೆ ಅಮೃತ ಮಹೋತ್ಸವದ ಸ್ವಾತಂತ್ರ್ಯೋತ್ಸವ ವನ್ನು ಈ ವರ್ಷ ನಾವೆಲ್ಲರೂ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ ಹರ್ ಗರ್ ತಿರಂಗ ಅಭಿಯಾನವನ್ನು ಶೇಕಡ ನೂರರಷ್ಟು ತಾಲೂಕಿನಲ್ಲಿ ಹಮ್ಮಿಕೊಂಡು ಯಶಸ್ವಿಯಾಗಿದ್ದೇವೆ ಎಂದು‌‌ ತಹಶೀಲ್ದಾರ್ ಹೇಳಿದರು.

ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

 

 

 

ಚಳ್ಳಕೆರೆ ತಾಲ್ಲೂಕಿನಲ್ಲಿ 1,450 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಬಿಂಬಿಸಿದ್ದೇವೆ ಈ ಮುಖಾಂತರ ದೇಶಪ್ರೇಮ ಮತ್ತು ರಾಷ್ಟ್ರಪ್ರೇಮವನ್ನು ಪ್ರತಿಯೊಬ್ಬರ ಮನೆ ಮತ್ತು ಮನಗಳಲ್ಲಿ ಉಳಿಯುವಂತ ಕೆಲಸವನ್ನು ಮಾಡಿದ್ದೇವೆ ತಮ್ಮ ತ್ಯಾಗ ಮತ್ತು ಬಲಿದಾನಗಳಿಂದ ನಮ್ಮ ಹಿರಿಯರು ಉಳಿಸಿಕೊಟ್ಟು ಹೋಗಿರುವಂತಹ ಈ ಸ್ವಾತಂತ್ರ್ಯವನ್ನು ನಾವೆಲ್ಲರೂ ಕೂಡ ಸದ್ಬಳಕೆ ಮಾಡಿಕೊಂಡು ಈ ದೇಶದ ಸಂವಿಧಾನದ ಆಶಯಗಳನ್ನು ಗೌರವಿಸುವ ಕೆಲಸ ಮಾಡಬೇಕೆಂದು ತಾಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು ಬರುವ ತಲುಕು ಹೋಬಳಿ, ಚೆನ್ನೈಗಾನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿರುವಂತ ಸ್ವಾತಂತ್ರ್ಯೋತ್ಸವ ನಂತರದ ಗಾಂಧೀಜಿ ಮತ್ತು ಅಂಬೇಡ್ಕರ್ ಮೊದಲಿಗರಾಗಿ ಸುಭಾಷ್ ಚಂದ್ರ ಬೋಸ್ ಚಂದ್ರಶೇಖರ್ ಆಜಾದ್ ವೀರ ಸಾವರ್ಕರ್ ಸಂಗೊಳ್ಳಿ ರಾಯಣ್ಣ ಕಿತ್ತೂರಾಣಿ ಚೆನ್ನಮ್ಮ ಮುಂತಾದ ಹಲವಾರು ವೀರಾಗ್ರ ಣಿಗಳು ಸ್ವಾತಂತ್ರ್ಯಕ್ಕಾಗಿತಮ್ಮ ಜೀವನವನ್ನೇ ಮೂಡಿಪಾಗಿಟ್ಟವರು ಗುರುಗಳ ತ್ಯಾಗ ಮತ್ತು ಬಲಿದಾನದಿಂದ 200 ವರ್ಷಗಳ ಕಾಲ ಬ್ರಿಟಿಷರಲ್ಲಿದ್ದಂತ ಸ್ವಾತಂತ್ರ್ಯವನ್ನು ನಾವುಗಳ ಪಡೆದಿದ್ದೇವೆ ಈ 75 ವರ್ಷಗಳ ಅವಧಿಯಲ್ಲಿ ದೇಶ ಮತ್ತು ರಾಜ್ಯದಲ್ಲಿ ವಿಜ್ಞಾನ ತಂತ್ರಜ್ಞಾನ ಬಾಹ್ಯಾಕಾಶ ಶಿಕ್ಷಣ ನೀರಾವರಿ ಕೈಗಾರಿಕೆ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶೇಷವಾದ ಸ್ಥಾನ ಬಂದಿದೆ ಮುಂದೆಯೂ ಕೂಡ ಭಾತೃತ್ವ ಶಾಂತಿ ನೆಮ್ಮದಿ ಮತ್ತು ಅಹಿಂಸೆ ನಮ್ಮಲ್ಲಿ ಮನೆ ಮಾಡಬೇಕಿದೆ ಈ ಭಾಗದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುವ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ವಾಮ್ಯದ ಹೆಚ್ಚು ಹೆಚ್ಚು ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಆಗಬೇಕು ಹಾಗಾಗಿ ಶೈಕ್ಷಣಿಕ ನೆಲೆಗಟ್ಟು ಭದ್ರಗೊಳ್ಳಬೇಕು ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಶಿಕ್ಷಣದ ಮೂಲಕ ಅಲಂಕರಿಸಬೇಕು ಎಂದು ಸಲಹೆ ನೀಡಿದರು ಬಿಜೆಪಿ ಮಟ್ಟದ ಅಧ್ಯಕ್ಷರಾದ ರಾಮರೆಡ್ಡಿ ಮಾತನಾಡಿ ಚೆನ್ನಿಗನಹಳ್ಳಿ ಗ್ರಾಮದಲ್ಲಿ ನಾಲ್ಕು ಜನ ಸ್ವತಂತ್ರ ಯೋಧರಿದ್ದು ಅವರು ಈಗ ದೈವಾಧೀನದರಾಗಿದ್ದಾರೆ ಅವರ ಕೊಡುಗೆ ಈ ಗ್ರಾಮಕ್ಕೆ ಬಹಳಷ್ಟು ಇದೆ ಎಲ್ಲಾ ಗ್ರಾಮಗಳು ಕೂಡ ಸ್ವಾತಂತ್ರ್ಯದ ಕಾಹ ಳೆಯನ್ನು ಮೊಳಗಿಸಿದಂತ ಗ್ರಾಮಗಳಾಗಿದ್ದವು ಇವತ್ತಿನ ಸ್ವತಂತ್ರೋತ್ಸವ ಕಾರ್ಯಕ್ರಮವನ್ನು ಇಂದು ಈ ಗ್ರಾಮದಲ್ಲಿ ಹಮ್ಮಿಕೊಂಡು ರಾಷ್ಟ್ರ ಅಭಿಮಾನದ ಬಗ್ಗೆ ಜನ ಜಾಗೃತಿ ಮೂಡಿಸಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು ಗ್ರಾಮದ ಹಿರಿಯರಾದಂತಹ ತಿಮ್ಮಾರೆಡ್ಡಿ ಬಿಜೆಪಿ ಮುಖಂಡರಾದ ಚ ನ್ನಿಗಾನಹಳ್ಳಿ ಮಲ್ಲೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು ಸಮಾರಂಭದಲ್ಲಿ ಗೌರಸಮುದ್ರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ರಾಜಣ್ಣ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *