ರೈತರಿಗೆ ಅನುಕೂಲ ಮಾಡಿದರೆ ಮತ ಹಾಕುತ್ತೇವೆ ಇಲ್ಲವೇ ಧಿಕ್ಕಾರ ಕೂಗುತ್ತೇವೆ

ರಾಜ್ಯ

ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಚುನಾವಣೆಯಲ್ಲಿ 5300 ಕೋಟಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದೀರಿ ಜನ ನಿಮಗೆ ಮತ ಹಾಕಿದರು. ಯಾರು ನಮಗೆ ಅನುಕೂಲ ಮಾಡುತ್ತಾರೋ ಅವರಿಗೆ ಮತ ಹಾಕುತ್ತೇವೆ, ಯಾರೂ ಸ್ಪಂದಿಸಲ್ಲೋ ಅವರಿಗೆ ದಿಕ್ಕಾರ ಕೂಗುತ್ತೇವೆ. ನಾವು ಯಾವ ಪಕ್ಷಗಳಿಗೂ ಅಂಟಿ ಕೊಂಡವರಲ್ಲ,ನೀವು ಕೂಡಲೇ ಹಣ ಬಿಡುಗಡೆ ಮಾಡಿಸಿ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ‌ ಕೇಂದ್ರ ಸಚಿವ ಎ. ನಾರಾಯಣಸ್ವಾಮಿಗೆ ಮನವಿ ಮಾಡಿದರು.ಅವರು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕಚೇರಿಗೆ ದಿಗ್ಬಂಧನದ ಪ್ರತಿಭಟನೆಯ ಸಭೆ ಉದ್ದೇಶಿಸಿ ಮಾತಾಡಿದರು.ಕಳೆದ 31 ದಿನಗಳಿಂದ ಧರಣಿ ಮಾಡುತ್ತಿದ್ದಾರೆ. ನಾವು ‌ಕೂಡ ಎರಡು ಬಾರಿ ಸಿಎಂ ಜೊತೆಗೆ ಸಭೆ ಮಾಡಿದ್ದೇವೆ. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರ ಸಚಿವರ ಭೇಟಿ ಮಾಡಿ‌ ಹಣ ಬಿಡುಗಡೆಗೆ ಮನವಿ ಮಾಡಿದ್ದೇವೆ ಆದರೆ ಅವರು ಸ್ಪಂದಿಸಿಲ್ಲ.‌ನೀವು ಒಬ್ಬರ ಮೇಲೊಬ್ಬರು ಹೇಳಿಕೊಂಡು‌ ಕೂರಬೇಡಿ‌ ರೈತರಿಗೆ ಅನುಕೂಲ‌ ಮಾಡಿ ಕೊಡಿ‌ ಎಂದರು. ಇದಕ್ಕೆ ಪ್ರತಿಯಾಗಿ ಮಾತಾಡಿದ ಕೇಂದ್ರ ಸಚಿವ ಎ.‌ನಾರಾಯಣಸ್ವಾಮಿ,ಜಿಲ್ಲೆಯಲ್ಲಿ ವಿಶ್ವೇಶ್ವರಯ್ಯ ಜಲ‌ ನಿಗಮದ ಇಂಜಿನಿಯರ್ ಹಾಗೂ ಎಂಡಿಗಳ ಜೊತೆ ಸಭೆಗಳನ್ನು ಮಾಡಿದ್ದೇವೆ. ಕಡತಗಳನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಸಲ್ಲಿಸಿ ಮಾಡಲೇಬೇಕು ಎಂದು ಒತ್ತಡವನ್ನು ಹಾಕಿದ್ದೇವೆ. ಸಾವಿರ ಕೋಟಿಗು ಹೆಚ್ಚು ಹಣ ಬಿಡುಗಡೆ ಮಾಡುವಂತೆ ಮನವಿ‌ ಮಾಡಿದ್ದೇವೆ. ಇದರಲ್ಲಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದನ್ನು ಸರ್ಕಾರ ಬಿಟ್ಟಿದೆ. ಯೋಜನೆಗೆ ಬೇಕಾದ ಹಣವನ್ನು 50 *50 ಎರಡೂ ಸರ್ಕಾರಗಳು ಬಿಡುಗಡೆ ಮಾಡಬೇಕು. ಕೇಂದ್ರದ ಪಾಲನ್ನು ಬಿಡುಗಡೆ ಮಾಡಲು ಎಸ್ಕ್ರೋ ಅಕೌಂಟ್ ತೆರೆಯಲೇಬೇಕೆಂದು ಕೇಂದ್ರವು ಹೇಳಿದೆ. ಕೇಂದ್ರ ಜಲ‌ನಿಗಮವನ್ನು ಭೇಟಿ‌ ಮಾಡಿ‌ ಮನವಿ ಮಾಡಿ ಹೇಳಿದ್ದೇನೆ. ಅವರು ಮತ್ತೊಂದು ಬಾರಿ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ. ಈ ಮಧ್ಯೆ ರಾಜ್ಯದ ಉಪ‌ಮುಖ್ಯ ಮಂತ್ರಿ ಹಾಗೂ ನೀರಾವರಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು,ಅವರ ಬಳಿ ಮಾತಾಡಿದ್ದೇನೆ.‌ನೀವು ಬನ್ನಿ ನಿಯೋಗ ಹೋಗಿ ಮುಖ್ಯ ಮಂತ್ರಿ ಬಳಿ ಹೋಗಿ ಮಾತಾಡೋಣ,ಕೇಂದ್ರದ ಜಲ‌ನಿಗಮದ ಮಂತ್ರಿ ಅವರನ್ನು ಭೇಟಿ‌ ಮಾಡೋಣ, ಪ್ರಧಾನಿಗಳ ಸಮಯ ತೆಗೆದುಕೊಳ್ಳೋಣ ಅದ ಬಿಟ್ಟು‌ ಇಲ್ಲಿ ಕುಳಿತು ಧರಣಿ ‌ನಡೆಸಬೇಡಿ ಇದರಿಂದ ನಮ್ಮ ಮನಸ್ಸಿಗೆ ನೋವಾಗುತ್ತದೆ. ಧರಣಿ ಕೈ ಬಿಡಿ ನಾನು ನಿಮ್ಮ ಜೊತೆ ಇರುತ್ತೇನೆ. ನಾನು ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪೂರ್ಣಗಳಿಸುತ್ತೇನೆ ಇದು‌ ನನ್ನ ಜವಾಬ್ದಾರಿ ಎಂದು ಹೇಳಿದರು.

 

 

 

Leave a Reply

Your email address will not be published. Required fields are marked *