Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025
  • ರಾಜ್ಯ

    ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ

    December 12, 2025

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ಆರೋಗ್ಯ»ಬಿಜೆಪಿ ಸರ್ಕಾರದ ವಿರುದ್ದ ಅಬ್ಬರಿಸಿದ ಕನಕಪುರ ಬಂಡೆ : ಡಿಕೆ ಶಿವಕುಮಾರ್
ಆರೋಗ್ಯ

ಬಿಜೆಪಿ ಸರ್ಕಾರದ ವಿರುದ್ದ ಅಬ್ಬರಿಸಿದ ಕನಕಪುರ ಬಂಡೆ : ಡಿಕೆ ಶಿವಕುಮಾರ್

D KumaraswamyBy D KumaraswamyFebruary 6, 2023No Comments3 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ನನ್ನ ಕನಕಪುರ ಕ್ಷೇತ್ರಕ್ಕಿಂತ ಬಯಲು ಸೀಮೆ ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕ ಟಿ.ರಘುಮೂರ್ತಿ ಉತ್ತಮ ಕೆಲಸ ಮಾಡಿದ್ದಾರೆ, ಅಂತಹ ಕೆಲಸಗಳು ನಿಮ್ಮ ಕಣ್ಣ ಮುಂದೆ ಇವೆ, ಒಬ್ಬ ಇಂಜಿನಿಯರ್ ಆಗಿ, ಶಾಂತಿಮೂರ್ತಿಯಾದ ಟಿ.ರಘುಮೂರ್ತಿಯನ್ನು ಮತ್ತೊಮ್ಮೆ ವಿಧಾನಸೌಧಕ್ಕೆ ಕಳಿಸಿಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವಣರದಲ್ಲಿ ಆಯೋಜಿಸಿದ್ದ ಕಾಂಗ್ರೇಸ್‌ ಪಕ್ಷದ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಇಡೀ ರಾಜ್ಯವೇ ತಿರುಗಿ ನೋಡುವಂತ ಅಭಿವೃದ್ದಿ ಮಾಡಿದ ಶಾಸಕ ಮತ್ತೋಮ್ಮೆ ನಿಮ್ಮ ಆರ್ಶಿವಾದ ಕೋರಿದ್ದಾರೆ, ಆದ್ದರಿಂದ ಈ ಬಿಜೆಪಿ ಸರ್ಕಾರವನ್ನು ತೊಲಗಿಸಿ 70 ವರ್ಷ ಆಳ್ವಿಕೆ ಮಾಡಿದ ಇಂದಿರಾ ಗಾಂಧಿ ಕಾಲದ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ತರೋಣ ಎಂದರು.
ಡಬಲ್ ಇಂಜಿನ್ ಸರ್ಕಾರ ಎಂದು ಹೇಳುವ ಬಿಜೆಪಿಗರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ, ಇದೇ ಚಿತ್ರದುರ್ಗ ಮತದಾರರಿಂದ ಆಯ್ಕೆಯಾದ ಕೇಂದ್ರದ ಮಂತ್ರ ಎ.ನಾರಾಯಣಸ್ವಾಮಿ ನಿಮ್ಮ ಮತದಾರರ ಋಣ ತೀರಿಸಿ, ಅದನ್ನು ಬಿಟ್ಟು ಲೋಕಸಭಾ ಸದಸ್ಯನಾಗಿ ಮೀಸಲಾತಿ ವಿಚಾರದಲ್ಲಿ ಉತ್ತರ ನೀಡಿದೆ ಜನರಿಗೆ ಮೋಸ ಮಾಡುತ್ತಿರೀ ಎಂದರು.
ಭಾರತ್ ಜೋಡೋ ಯಾತ್ರೆ ನೆನಪು :
ಚಳ್ಳಕೆರೆ ಕ್ಷೇತ್ರದಲ್ಲಿ ಅಭೂತ ಪೂರ್ವವಾದ ಜನ ಬೆಂಬಲ ತೋರಿಸುವ ಮೂಲಕ ಇಡೀ ರಾಜ್ಯದಲ್ಲಿ ಅತೀ ಹೆಚ್ಚಿನ ಜನ ಬೆಂಬಲ ತೊರಿಸಿದ ಕೀರ್ತಿ ಚಳ್ಳಕೆರೆ ಕ್ಷೇತ್ರಕ್ಕೆ ಇದೆ, ಇನ್ನೂ ಕಡಲೆ ಕಾಯಿ ಕೊಟ್ಟು ಬಯಲು ಸೀಮೆ ಪರಿಚಯಿಸಿದ ರೈತ ಕಿಸಾನ್ ಸದಸ್ಯ ನಾಗರಾಜ್, ರಾಹುಲ್ ಗಾಂಧಿಗೆ ಕ್ಷೇತ್ರದ ಪರಿಚಯ ಮಾಡಿದರು, ಇಡೀ ರಾಜ್ಯಕ್ಕೆ ದೊಡ್ಡ ಶಕ್ತಿ ನೀವು ಮಹಿಳಾ ತಾಯಿ ಸೌತೆಕಾಯಿ ಕೊಟ್ಟು ನಿಮ್ಮ ಅಜ್ಜಿ ನೀಡಿದ ಭೂಮಿಯಲ್ಲಿ ಬೆಳೆದ ಬೆಳೆ ತಿನ್ನು ಎನ್ನುವ ಮಾತು ನಿಜಕ್ಕೂ ಧನ್ಯ , ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಡ ಜನರಿಗೆ ಭೂಮಿ ಕೊಟ್ಟವರು ಕಾಂಗ್ರೇಸ್ ಸರ್ಕಾರ ಮಾತ್ರ,

ಬಿಜೆಪಿ ಕೇಂದ್ರ ಮಂತ್ರಿ ನಾರಾಯಾಣಸ್ವಾಮಿಗೆ ಟಾಂಗ್ ಡಿಕೆಶಿ :
ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಲ್ಲಿ ಹೋಯಿತು ನಿಮ್ಮ ಭರವಸೆಯ ಪ್ರಣಾಳಿಕೆಗಳು, ನುಡಿದಂತೆ ನಡೆಯೋದಕ್ಕೆ ಆಗಿಲ್ಲ ರೈತರಿಗೆ ಬೆಂಬಲ ಬೆಲೆ ಇಲ್ಲ. ಕೋವಿಡ್ ಸಂಧರ್ಭದ ಆಸ್ವತ್ರೆಯ ಬಿಲ್‌ಗೆ ಹಣವಿಲ್ಲ, ಸುಖಾಸುಮ್ಮನೆ ಜನಧನ್ ಖಾತೆ ಮಾಡಿಸಿದಿರಿ ಅದಕ್ಕೆ ಹಣ ಹಾಕಿಲ್ಲ. ಎಲ್ಲಿ ಹೋಯಿತು ನಿಮ್ಮ ಅಚ್ಚೆದಿನ ಕೇಂದ್ರ ಮಂತ್ರಿ ನಾರಾಯಣಸ್ವಾಮಿಗಳೆ ಎಂದು ವ್ಯಂಗ್ಯ ಮಾಡಿದರು.
ಇಡೀ ರಾಜ್ಯದಲ್ಲಿ ಭ್ರಷ್ಟ ಸರ್ಕಾರ ತೆಗೆಯಬೇಕು ಎಂದು ನಿಮ್ಮ ಶಾಸಕರೇ ಹೇಳುತ್ತಾರೆ, 40ರಷ್ಟು ಕಮಿಷನ್ ದಂಧೆಯನ್ನು ನಿಮ್ಮ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಕ್ಕೆ ನಮ್ಮ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣೆ ತನಿಖೆ ಮಾಡಿಸಿ ನಿಮ್ಮ ಬಣ್ಣ ಬಯಲು ಮಾಡುತ್ತೆವೆ, 2023ಕ್ಕೆ ಕಾಂಗ್ರೇಸ್ ಅಧಿಕಾರಕ್ಕೆ ಬರುತ್ತದೆ 136 ಸ್ಥಾನ ಗೆಲ್ಲುತ್ತೆವೆ, ಈಗಾಗಲೇ ನಮ್ಮ ಪ್ರಣಾಳಿಕೆಯಲ್ಲಿ ಇದ್ದ ಸುಮಾರು 169 ಅಂಶಗಳಲ್ಲಿ ಸು.165 ಅಂಶಗಳನ್ನು ಜಾರಿಗೆ ತಂದಿದ್ದೆವೆ. ಬಿಜೆಪಿ ಸುಳ್ಳು ಪ್ರಣಾಳಿಕೆಯಲ್ಲಿ 600ಅಂಶಗಳಲ್ಲಿ ಕನಿಷ್ಟ 60 ಈಡೇರಿಸಲು ಹಾಗಿಲ್ಲ ಎಂದು ಆರೋಪ ಮಾಡಿದರು.

 

 

ಪ್ರತಿ ಕುಟುಂಬದ ಯಜಮಾನಿಕೆಗೆ 2 ಸಾವಿರ :
ಕಾಂಗ್ರೇಸ್ ಅಧಿಕಾರಕ್ಕೆ ಬಂದ ತಕ್ಷಣೆವೇ ಬಡ ಜನರ ಹೊಟ್ಟೆಗೆ ತಿನ್ನುವ ಅಕ್ಕಿಯನ್ನು ಪ್ರತಿ ಕುಟುಂಬಕ್ಕೆ 10 ಕೆಜಿ ಉಚಿತವಾಗಿ ನಿಡಲಾಗುತ್ತದೆ, ಇನ್ನೂರು ಯೂನಿಟ್ ವಿದ್ಯುತ್ ಉಚಿತ, ಗ್ಯಾಸ್ ಬೆಲೆ ಏರಿಕೆ, ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಎಣ್ಣೆ ದುಬಾರಿ ಇದೆಲ್ಲವು ಮನಗಂಡು ಪ್ರತಿ ತಿಂಗಳು ಮನೆ ಯಾಜಮಾನಿಗೆ ಎರಡು ಸಾವಿರ ಉಚಿತವಾಗಿ ನೀಡಲಾಗುತ್ತದೆ. ಎಂದು ಗ್ಯಾರಂಟಿ ಇರುವ ಬಾಂಡ್ ಕಾರ್ಡ್ ನ್ನು ತೋರಿಸಿದರು.

ಸಾರಿಗೆ ಸಚಿವ ಶ್ರೀರಾಮುಲು ಟೂರಿಂಗ್ ಸಚಿವ :
ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಇಡೀ ರಾಜ್ಯವೇ ತಿರುಗಿ ನೋಡುವಂತ ಅಭಿವೃದ್ದಿ ಮಾಡಿದ್ದಾರೆ. ಆದರೆ ಪಕ್ಕದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಬರೀ ಟೂರ್ ಮಾಡಿಕೊಂಡು ಇದ್ದಾರೆ, ಇನ್ನೂ ಜನರ ಕಷ್ಟ ಕೇಳದೆ ಇರುವುದು ಅವರ ಬಿಜೆಪಿ ಪಕ್ಷದ ವೈಫಲ್ಯ ಎಂದು ರಾಮುಲು ವಿರುದ್ದ ಚಾಟಿ ಬೀಸಿದರು.

ಇನ್ನೂ ಕೇವಲ 40ದಿನ ಬಿಜೆಪಿ ಸರಕಾರ ಅಧಿಕಾರ :
ಬಿಜೆಪಿ ಸರ್ಕಾರ ಆಡಳಿತದಲ್ಲಿ ಕೇವಲ ಜನಪರ ಅಭಿವೃದ್ದಿಗಿಂತ, ಅವರ ಹಗರಣಗಳ ಸರಮಾಲೆಗಳೆ ಹೆಚ್ಚು ಪಿಎಸ್‌ಐ ಹಗರಣ, ಇಂಜಿನಿಯರ್ ಗಳ ಆಯ್ಕೆ ಪ್ರಕ್ರಿಯೆಯಲ್ಲಿ ಹಗರಣ, ಗುತ್ತಿಗೆದಾರರು ಬಿಜೆಪಿ ಆಡಳಿತಕ್ಕೆ ರೋಸಿ ಆತ್ಮಹತ್ಮೆ ಮಾಡಿಕೊಂಡರು, ಇನ್ನೂ 40ದಿನ ಬಿಜೆಪಿ ಸರ್ಕಾರ ತದನಂತರ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಡಿಕೆ ಭರವಸೆ ನೀಡಿದರು.
ಇನ್ನೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಕ್ಷೇತ್ರದ ಎರಡು ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಇನ್ನೂ ಕ್ಷೇತ್ರವಾಪ್ತಿಯಲ್ಲಿ ಅಕ್ರಮ ಮರಳು ಗಾರಿಕೆ, ಅಕ್ರಮ ಮಧ್ಯ ಮಾರಾಟ ಹೀಗೆ ಎಲ್ಲದಕ್ಕೂ ಕಡಿವಾಣ ಹಾಕಿ, ಆರ್ಥಿಕ ಅಭಿವೃದ್ದಿಗೆ ಹೆಚ್ಚು ಹೊತ್ತು ನೀಡಿಲಾಗಿದೆ. 2023ಕ್ಕೆ ಮತ್ತೊಮ್ಮೆ ಶಾಸಕನಾಗಲು ನಿಮ್ಮ ಆರ್ಶಿವಾದ ಅಗತ್ಯ ಎಂದರು.
ಇದೇ ಸಂಧರ್ಭದಲ್ಲಿ ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿಕೆ.ಶಿವಕುಮಾರ್, ಮಾಜಿ ಉಪಮುಖ್ಯ ಮಂತ್ರಿ ಪರಮೇಶ್ವರ್. ಮಾಜಿ ಸಚಿವರಾದ, ಮುನಿಯಪ್ಪ, ರಾಮಲಿಂಗರೆಡ್ಡಿ, ಸಲೀಮ್‌ಆಹ್ಮದ್, ,ಸುದರ್ಶನ್, ರೇವಣ್ಣ, ಮಾಜಿ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಶಾಸಕ. ಎಸ್.ತಿಪ್ಪೆಸ್ವಾಮಿ, ನಲಪಾಡ್, ನಿಕೇತ್‌ರಾಜ್, ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಹಾಗೂ ಕಾಂಗ್ರೇಸ್ ಪದಾಧಿಕಾರಿಗಳು ಮುಂಚೂಣಿ ಘಟಕದ ಅಧ್ಯಕ್ಷರು ಕಾರ್ಯಕರ್ತರು ಇತರರು ಇದ್ದರು.

Share. Facebook Twitter Pinterest LinkedIn Tumblr WhatsApp Email
Previous Articleಸರ್ಕಾರಿ ಅಕ್ಕಿ ಮತ್ತು ಹಣ ದುರುಪಯೋಗ: ಮೊಳಕಾಲ್ಮೂರು ಪರಿಶಿಷ್ಟ ಪಂಗಡದ ಹಾಸ್ಟೆಲ್ ವಾರ್ಡನ್ ಅಮಾನತ್ತು ಮಾಡಿ ಆದೇಶಿಸಿದ ಸಿಇಒ
Next Article ವಿಧಾನಸೌಧದ ಕಂಬ ಹೇಳುತ್ತವೆ 40 % ಸರ್ಕಾರ ಎಂದು: ಡಾ. ಜಿ. ಪರಮೇಶ್ವರ್
D Kumaraswamy
  • Tumblr

Related Posts

ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಿಖಿಲ್ ಕುಮಾರಸ್ವಾಮಿ

August 3, 2025

ತೆರೆಗೆ ಅಪ್ಪಳಿಸಲು ಸಜ್ಜಾದ ಕ್ಯೂಬ್ ಎಂಟರ್ ಟೈನ್ಮೆಂಟ್ ನ ಮಹತ್ವಾಕಾಂಕ್ಷಿ ಚಿತ್ರ ಕಟ್ಟಾಳನ್ 

June 7, 2025

1.11 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಆರು ತಿಂಗಳಲ್ಲಿ ರಾಜ್ಯದಲ್ಲಿ ಬಾಕಿ ಇರುವ 50 ಸಾವಿರ ಕುಟುಂಬಗಳಿಗೂ ಹಕ್ಕುಪತ್ರ – ಸಿ.ಎಂ.ಸಿದ್ದರಾಮಯ್ಯ

May 20, 2025

ರಸಗೊಬ್ಬರ ಕೊರತೆ ಉಂಟಾಗದಂತೆ ಕ್ರಮ ವಹಿಸಿ- ಡಿ.ಸಿ. ವೆಂಕಟೇಶ್ ಸೂಚನೆ

March 25, 2025
Leave A Reply Cancel Reply

Recent Posts
  • ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಿ,ಕೇಂದ್ರ ಸರ್ಕಾರ ಮಧ್ಯಪ್ರವೇಶ ಅಗತ್ಯ: ಮಾಜಿ ಸಚಿವ ಹೆಚ್. ಆಂಜನೇಯ
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.