ವಿಧಾನಸೌಧದ ಕಂಬ ಹೇಳುತ್ತವೆ 40 % ಸರ್ಕಾರ ಎಂದು: ಡಾ. ಜಿ. ಪರಮೇಶ್ವರ್

ರಾಜ್ಯ

ವಿಧಾನಸೌಧದ ಪ್ರತಿ ಕಂಬವು 40% ಅನ್ನುತ್ತದೆ – ಪರಮೇಶ್ವರ್

ಚಿತ್ರದುರ್ಗ : ವಿಧಾನಸೌಧದಲ್ಲಿರುವ ಪ್ರತಿಯೊಂದು ಕಂಬ ಬಡಿದರೆ 40% ಅಂತ ಸೌಂಡ್ ಬರುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹೇಳಿದರು.
ಜಿಲ್ಲೆಯ ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರಜಾ ಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 

 

 

ರಾಜ್ಯ ಬಿಜೆಪಿ ಸರ್ಕಾರ 40% ಲಂಚ ಪಡೆದು ಆಡಳಿತ ನಡೆಸುತ್ತಿದೆ. ಯಾವ ಪುರುಷಾರ್ಥಕ್ಕೆ ಬಿಜೆಪಿ ಸರ್ಕಾರ ಆಡಳಿತ ಮಾಡುತ್ತಿದೆ ಎಂಬುದು ಗೊತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಇನ್ನು ಇಂದು ತುಮಕೂರಿಗೆ

ಹೆಚ್ ಎ ಎಲ್ ಫ್ಯಾಕ್ಟರಿ ಉದ್ಘಾಟನೆಗೆ ಪ್ರಧಾನಿ ಮೋದಿ ಬಂದಿದ್ದಾರೆ. ಬರಲಿ ಸಂತೋಷ ಆದರೆ 2016ರಲ್ಲಿ ಪ್ರಧಾನಿ ಮೋದಿ ಫ್ಯಾಕ್ಟರಿಗೆ ಅಡಿಗಲ್ಲು ಹಾಕಿದ್ದರು. ಅಂದು ಪ್ರಧಾನಿಯವರು ಎರಡು ವರ್ಷದಲ್ಲಿ ಹೆಲಿಕಾಪ್ಟರ್ ಹಾರುತ್ತದೆ ಎಂದಿದ್ದರು. ಆದರೆ
ಇಂದು ಹೆಚ್ ಎ ಎಲ್ ಫ್ಯಾಕ್ಟರಿ ಉದ್ಘಾಟನೆಗೆ ಬಂದಿದ್ದಾರೆ. ಇದರಿಂದ ಬಿಜೆಪಿ ಸರ್ಕಾರದಿಂದ ಉದ್ಯೋಗ ನೀಡುವ ಭರವಸೆ ಹುಸಿ ಆಗಿದೆ. ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಯಾಕಿಷ್ಟು ಸುಳ್ಳು ಹೇಳ್ತೀರಿ ? ಎಂದು ಪ್ರಶ್ನೆ ಹಾಕಿದರು. ಕಾಂಗ್ರೆಸ್‌ನ ಉಚಿತ ವಿದ್ಯುಚ್ಛಕ್ತಿ ಘೋಷಣೆ ಬಗ್ಗೆ ಟೀಕಿಸುತ್ತೀರಿ,
ಹೇಗೆ ಉತ್ಪಾದಿಸಬೇಕು, ಹೇಗೆ ಉಚಿತ ನೀಡಬೇಕೆಂಬುದು ಗೊತ್ತಿದೆ ಎಂದು ಪರಮೇಶ್ವರ್ ಬಿಜೆಪಿಗೆ ಎಚ್ಚರಿಕೆ ನೀಡಿದರು.
ಬಿಜೆಪಿ ವಿರುದ್ಧ ಆಂಜನೇಯ ವಾಗ್ದಾಳಿ : ರಾಜ್ಯ ಬಿಜೆಪಿ ಸರ್ಕಾರ ದನಕರುಗಳು, ಕತ್ತೆಗಳನ್ನು ಖರೀದಿಸಿದಂತೆ ಜನಪ್ರತಿನಿಧಿಗಳನ್ನು ಖರೀದಿಸಿ ಸರ್ಕಾರ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬರುವ ವಿಧಾನಸಭಾ ಚುನಾವಣೆಯಲ್ಲಿ ನಾವು ಮತ್ತೇ ಅಧಿಕಾರ ರಾಜ್ಯದಲ್ಲಿ ಕಟ್ಟುತ್ತೇವೆ. ಪ.ಜಾ, ಪ.ವರ್ಗ ಇಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮೀಸಲಾತಿ ಹೆಚ್ಚಳ ನೀಡುವಂತೆ ಸ್ವಾಮೀಜಿ ಪ್ರತಿಭಟನೆ ಧರಣಿ ಕುಳಿತ ಪ್ರಭಾವ 7% ಹೆಚ್ಚಳ ಮಾಡಿದ್ರು ಅದು ಬಿಲ್ ಪಾಸ್ ಆಗಿಲ್ಲ ಜನರಿಗೆ ಮೋಸ ಮಾಡುತ್ತಿದ್ದಾರೆ. ರಾಜಕೀಯ ಮೀಸಲಾತಿ ಕೊಟ್ಟ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷವಾಗಿದೆ. ನಾನು ಮಂತ್ರಿಯಾಗಿದ್ದಾಗ ಬಜೆಜೆನಲ್ಲಿ ಎಸ್ ಇಪಿಟಿಎಲ್ ನ ಅಡಿಯಲ್ಲಿ ಮೀಸಲಾತಿ ಇಡಲಾಗಿತ್ತು ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 88 ಸಾವಿರಕೋಟಿ ಖರ್ಚು ಮಾಡಿದ್ದೇವೆ. ರಾಜ್ಯದಲ್ಲಿ ವಾಸಿಸುವ ಎಲ್ಲಾ ಜನರಿಗೆ ಯೋಜನೆಗಳನ್ನು ತಲುಪಿಸಿದ್ದೇವೆ.‌ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಸತ್ಯ ನಾವು ಜನ್ರಿಗೆ ಕೊಡೋ ಭರವಸೆ ಈಡೇರಿಸುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿ,ಅನೈತಿಕ ರಾಜಕಾರಣ ಮಾಡಿತ್ತಿರುವ ಬಿಜೆಪಿಯನ್ನು ತೊಲಗಿಸಬೇಕು ಎಂದು ಆಂಜನೇಯ ತಿಳಿಸಿದರು.

Leave a Reply

Your email address will not be published. Required fields are marked *