ಪ್ರಧಾನ ಮಂತ್ರಿ ಕೌಶಲಾಭಿವೃದ್ದಿ ಕೇಂದ್ರದ ತರಗತಿ ಆರಂಭಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾ ಸುದ್ದಿ

ಚಿತ್ರದುರ್ಗ,- ಮಾದಾರ ಗುರುಪೀಠಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಗುರುಪೀಠದಲ್ಲಿ ನಡೆಯುತ್ತಿದ್ದ ಕೌಶಲಾಭಿವೃದ್ದಿಯ ಎಲ್ಲಾ ತರಗತಿಗಳನ್ನು ಸಮಾಜಿಕ ಅಂತರ ಕಾಪಾಡಿಕೊಂಡು ಆರಂಭಿಸಬಹುದು ಎಂದು ತಿಳಿಸಿದ್ದಾರೆ.

ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಕೌಶಲಾಭಿವೃದ್ದಿಯ ಎಲ್ಲಾ ತರಗತಿಗಳ‌ನ್ನು ಹಂತ ಹಂತವಾಗಿ ಆರಂಭಿಸಲು ಸೂಚಿಸಿದ್ದಾರೆ. ಇಂದು ಸಂಜೆ ಮಠಕ್ಕೆ ಭೇಟಿ‌ನೀಡಿದ ಸಮಯದಲ್ಲಿ ಕೌಶಲಾಭಿವೃದ್ದಿ ಕೇಂದ್ರಕ್ಕೂ ಭೇಟಿ‌ ನೀಡಿ ಸರ್ಕಾರಿ ಸುರಕ್ಷಾ ನಿಯಮಗಳು ಹಾಗು ಅಂತರವನ್ನು ಕಾಪಾಡಿಕೊಂಡು ತರಗತಿಗಳನ್ನು ನಡೆಸಬಹುದಾಗಿದೆ. ಕೇಂದ್ರದ ಮೂಲಕ ನಡೆಯುವ ತರಬೇತಿಗಳಲ್ಲಿ ಹೆಚ್ಚಿನದಾಗಿ ಮಹಿಳೆಯರಿಗೆ ಅನುಕೂಲವಾಗಲಿದೆ, ಮತ್ತು ಅರ್ಥಿಕ ಸಬಲೀಕರಣಗೊಳ್ಳುವಂತಹ ಟೈಲರಿಂಗ್ ತರಬೇತಿ ಮಹಿಳೆಯರಿಗೆ ಸ್ವಾವಲಂಬಿ ಉದ್ಯೋಗವಾಗಿದೆ ಎಂದರು.Chitradurga  start  development skill  class DC gdve permission
ಇದೇ ಸಮಯದಲ್ಲಿ‌ ಮಾತನಾಡಿದ, ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸ್ವಾವಲಂಬನೆಯ ಜೀವನವನ್ನು ರೂಪಿಸಿಕೊಳ್ಳಲು ಈ ಕೇಂದ್ರದಲ್ಲಿ ಇನ್ನು ಹೆಚ್ಚಿನ ತರಬೇತಿ ಆರಂಭಕ್ಕೆ ಸಲಹೆ ನೀಡಿದರು.
ಕೇಂದ್ರದ ವ್ಯವಸ್ಥಾಪಕ ಗಿರೀಶ್, ತರಬೇತುದಾರ ನವೀನ್, ಅರುಣ್, ಶಾಂತಕುಮಾರಸ್ವಾಮಿ, ಮತ್ತು ಮಾದಾರ ಚನ್ನಯ್ಯ ಪೀಠದ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಹಾಜರಿದ್ದರು.

 

 

 

ಇದೇ ಸಮಯದಲ್ಲಿ ಪ್ರಧಾನ ಮಂತ್ರಿ ಕೌಶಲಾಭಿವೃದ್ದಿ ಕೇಂದ್ರದಲ್ಲಿ ವಿವಿಧ ಉಚಿತ ತರಬೇತಿಗಳಾದ ಟೈಲರಿಂಗ್, ಹ್ಯಾಂಡ್ ಎಂಬ್ರಾಯಿಡರಿ, ಹಾರ್ಡ್ ವೇರ್ ಅಂಡ್ ನೆಟ್ ವರ್ಕಿಂಗ್ ಡಿಟಿಎಚ್ ಸೆಟಪ್ ಬಾಕ್ಸ್ ಇನ್ಸ್ಟಲೇಷನ್ ಮತ್ತು ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ತರಬೇತಿಗಳಿಗೆ ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಸರು ನೋಂದಾಯಿಸಿಕೊಳ್ಳುವವರು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಅಂಕಪಟ್ಟಿ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳಾದ ದಾಖಲೆಗಳನ್ನು ತರಬೇಕು.
ಹೆಚ್ಚಿನ ಮಾಹಿತಿಗೆ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ: ನವೀನ್: 9741721889
ಜಗದೀಶ್: 7795075070

ಸಂಯುಕ್ತವಾಣಿ

Leave a Reply

Your email address will not be published. Required fields are marked *