ಜಿಲ್ಲಾ ಸುದ್ದಿ

*ಜನಪರ ಹೋರಾಟಗಳಿಗೆ ಕಸಾಪ ಕೊಂಡೊಯ್ಯುವೆ: ಚಿಕ್ಕಪ್ಪನಹಳ್ಳಿ ಷಣ್ಮುಖ*

ಚಿತ್ರದುರ್ಗ:,ನ03(ಸಂವಾ)-ಜಿಲ್ಲೆಯ ಸ್ಥಳೀಯ ಸಮಸ್ಯೆಗಳ
ಜತೆಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಪರ ಹೋರಾಟಗಳಿಗೆ ಕೊಂಡೊಯ್ಯುವೆ ಎಂದು ಹಿರಿಯ ಪತ್ರಕರ್ತ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ ಚಿಕ್ಕಪ್ಪನಹಳ್ಳಿ ಷಣ್ಮುಖ ಹೇಳಿದರು.

ನಗರದ ಐಶ್ವರ್ಯ ಪೋರ್ಟ್ ಸಭಾಂಗಣದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಪರಿಷತ್ತು ಇದುವರೆಗೂ ಸ್ಥಳೀಯ ಸಮಸ್ಯೆ ಕೈಗೆತ್ತಿಕೊಂಡು ಹೋರಾಟ ಮಾಡಿದ ನಿದರ್ಶನಗಳಿಲ್ಲ, ಹಾಗಾಗಿ ಜನಪರ ಹೋರಾಟಗಳ ಮೂಲಕ ರೈಲ್ವೆ, ಮೆಡಿಕಲ್ ಕಾಲೇಜು, ನೀರಾವರಿ ಹೋರಾಟ ಸೇರಿದಂತೆ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.

ಜನಪರ ಹೋರಾಟಗಳಿಗೆ ಕಸಾಪ ಕೈಜೋಡಿಸಬೇಕೆಂಬ ಆಸೆ ಇದ್ದು, ಇದರ ಜತೆಗೆ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣಕ್ಕೂ ಆಧ್ಯತೆ ನೀಡಲಾಗುವುದು ಎಂದರು.

 

 

 

ಜಿಲ್ಲೆಯಲ್ಲಿ 7 ಸಾವಿರ ಮಂದಿ ಕಸಾಪ ಸದಸ್ಯರಿದ್ದು ಇದರಲ್ಲಿ ಅನೇಕರು ಆತ್ಮೀಯರಿದ್ದಾರೆ. ಬಹುತೇಕ ಎಲ್ಲರೂ ನನ್ನ ಸಂಪರ್ಕ ಹಾಗೂ ಒಡನಾಟ ಹೊಂದಿದ್ದಾರೆ. ಶೇ.60ರಷ್ಟು ಮಂದಿ ಸದಸ್ಯರಲ್ಲಿ ಈಗಾಗಲೇ ಮಾತನಾಡಿದ್ದೇನೆ. ಯಾರೂ ಸಹ ಅಪಸ್ವರ ಎತ್ತುತ್ತಿಲ್ಲ. ಹಾಗಾಗಿ ಉತ್ಸುಕನಾಗಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಸಾಹಿತಿ ಲೋಕೇಶ್ ಅಗಸನಕಟ್ಟೆ ಮಾತನಾಡಿ, ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪನವರು ಕನ್ನಡ ಸಾಹಿತ್ಯ ಪರಿಷತ್ತು ವ್ಯಾಪ್ತಿಗೆ ಸಂಸ್ಕøತಿ ಸಮಾಜ ಸೇರಬೇಕು. ಕಸಾಪ ಪ್ರಗತಿಪರ ನೆಲೆಯಲ್ಲಿ ತೆಗೆದುಕೊಂಡು ಹೋಗಬೇಕು ಎಂಬ ಆಶಯ ಹೊಂದಿದ್ದಾರೆ. ವೃತ್ತಿಪರ, ಸತ್ಯಪರ ಹೋರಾಟದ ಮನೋಭಾವ ಹೊಂದಿರುವ ಅವರ ಕನಸುಗಳು ನನಸಾಗಲಿ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಫೀರ್ ಮಾತನಾಡಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯದೇ ಅವಿರೋಧ ಆಯ್ಕೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಚಿಂತಕ ಜೆ.ಯಾದವರೆಡ್ಡಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಗೋಪಾಲಸ್ವಾಮಿ ನಾಯಕ, ಗಾಯಕ ಡಿ.ಒ.ಮುರಾರ್ಜಿ, ಡಾ.ಜೆ.ಕರಿಯಪ್ಪ ಮಾಳಿಗೆ, ಮಲ್ಲಿಕಾರ್ಜುನಯ್ಯ, ಗೌನಹಳ್ಳಿ ಗೋವಿಂದಪ್ಪ, ಓಂಕಾರ್, ಖಾಸಗಿ ಬಸ್ದು ಮಾಲೀಕರ ಸಂಘದ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಜಿ.ಬಿ.ಶೇಖರ್, ಸಂಗೇನಹಳ್ಳಿ ಅಶೋಕ್ ಕುಮಾರ್, ಪಿ.ಎಂ.ಜಿ ರಾಜೇಶ್, ಬ್ರಹ್ಮಾನಂದ ಗುಪ್ತ, ರಶೀದ್, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಹೊರಕೇರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಚಿತ್ರದುರ್ಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಎಂ. ಆರ್ ದಾಸೇಗೌಡ, ಚಿಂತನ ಪ್ರಕಾಶನದ ಜಿ.ಎಂ.ಶಂಕರಮೂರ್ತಿ, ಶಶಿದರ ಬಾಬು, ರಾಜಸಿರಿಗೆರೆ,ಸೇರಿದಂತೆ ಮತ್ತಿತರರಿದ್ದರು ಹಾಜರಿದ್ದರು.

ಸಂಯುಕ್ತ ವಾಣಿ

ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *