ಕವಿಗಳ ಹೆಸರನ್ನು ಹೇಳಲು ಬಾರದ ಸಚಿವರ್ಯಾರು ?

ಜಿಲ್ಲಾ ಸುದ್ದಿ ರಾಜ್ಯ

ಚಿತ್ರದುರ್ಗ ನ 01(ಸಂವಾ)- ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಬಹಳ ಸಂತಸದಿಂದ ರಾಜ್ಯೋತ್ಸವದ ಹಬ್ಬವನ್ನು ಆಚರಿಸಿಕೊಳ್ಳುವಾಗ  ನಾಡಿನ ಜನತೆಗೆ  ಸಂದೇಶವನ್ನು ಕೊಡುವ ಸಚಿವರೊಬ್ಬರು  ರಾಷ್ಟ್ರ ಪ್ರಶಸ್ತಿಯನ್ನು ಕನ್ನಡಕ್ಕೆ ತಂದು ಕೊಟ್ಟ ಕವಿಗಳ ಹೆಸರುಗಳನ್ನು ತಪ್ಪುತಪ್ಪಾಗಿ ಹೇಳಿದ್ದು ನಾಡಿನ ಸಾಹಿತ್ಯ ಲೋಕಕ್ಕೆ ಅವಮಾನ ಮಾಡಿದಂತಾಗಿದೆ.

wrong pronounce by minister

 

 

 

ಇಂದು ಕೋಟು ನಾಡು ಚಿತ್ರದುರ್ಗ ಜಿಲ್ಲೆಯ ಪೋಲಿಸ್ ಕವಾಯತು ಮೈದಾನದಲ್ಲಿ  ಜಿಲ್ಲಾಡಳಿತ 65 ನೇ ಕನ್ನಡ ರಾಜ್ಯೋತ್ಸವನ್ನು ಆಯೋಜಿಸಿತ್ತು.  ಬೆಳಗ್ಗೆ ಒಂಬತ್ತು ಗಂಟೆಗೆ ರಾಷ್ಟ್ರಧ್ವಜಾರೋಹಣ  ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ  ಸಮಾಜ ಕಲ್ಯಾಣ ಸಚಿವರು ಆಗಿರುವ ಶ್ರೀರಾಮುಲು  ಮುದ್ರಿತ ಭಾಷಣದ  ಪ್ರತಿಯನ್ನು  ಇಟ್ಟುಕೊಂಡು ಭಾಷಣವನ್ನು ಮಡಲು ಆರಂಭಿಸಿದರು. ಕನ್ನಡ ಹೋರಾಟ, ಚಳುವಳಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ತಂದು ಕೊಟ್ಟ ಕವಿಗಳನ್ನು ನೆನೆಯಬೇಕು ಎಂದು ಹೇಳುತ್ತಾ,  ಕುವೆಂಪು ಎಂದು ಹೇಳುವ ಬದಲು ಕುಯೆಂಪು, ಮಾಸ್ತಿ ಎಂದು ಹೇಳಲು ಮಸ್ತ್ರಿ ಎಂದು ಹೇಳುತ್ತಾ ಉಳಿದಂತೆ ಆಲೂರು ವೆಂಕಟರಾಯರು ಎಲ್ಲಾ ಜ್ನಾನ ಪೀಠ ಪ್ರಶಸ್ತಿಗಳನ್ನು ನೀಡಿರುವ ಎಲ್ಲರನ್ನೂ ಕೂಡ ನೆನಎಸಿಕೊಳ್ಳಬೇಕು.  ಎಂದು ತಪ್ಪು ತಪ್ಪಾಗಿ ಉಚ್ಛರಣೆ ಮಾಡುವ ಮೂಲಕ ಕವಿಗಳಿಗೆ ಸಾಹಿತ್ಯ ಲೋಕಕ್ಕೆ ಅವಮಾನ ಮಾಡಿದ ಘಟನೆ ನಡೆಯಿತು.

ಸಂಯುಕ್ತವಾಣಿ

ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *