ಚಿತ್ರದುರ್ಗ: ಚಳ್ಳಕೆರೆಯ ಸರ್ಕಾರಿ ಆಸ್ಪತ್ರೆಯ ಕೋವಿಡ್ ಸೆಂಟರ್ ನಲ್ಲಿನ ಕೋವಿಡ್ ಸೋಂಕಿತರಿಗೆ ಯೋಗ ಚಿಕಿತ್ಸೆಯನ್ನು ನೀಡುವ ಮೂಲಕ ಅವರಲ್ಲಿ ಆತ್ಮ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಡಾ. . ನಂದಿನಿ ಲಾವಣ್ಯ ಮಾಡುತ್ತಿದ್ದಾರೆ.
ಕೋವಿಡ್ ಸೋಂಕಿತರಿಗೆ ಬೇಸರ ಕಳೆಬೇಕು. ಆತ್ಮಸ್ಥೈರ್ಯ ತುಂಬ ಬೇಕು ಎಂಬ ಕಾರಣಕ್ಕೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ವೈದ್ಯರು ನರ್ಸ ಗಳು ಶಾಸಕರು ಹಾಗೂ ಸೋಂಕಿತರು ಹಾಡು ಹಾಕಿ ಕುಣಿದು ಕುಪ್ಪಳಿಸುತ್ತಾ ಮನೋರಂಜನೆ ಪಡೆಯುತ್ತಿದ್ದಾರೆ ಇದು ಸಾಮಾನ್ಯವಾಗಿದೆ. ಆದರೆ ಚಳ್ಳಕೆರೆಯ ಸರ್ಕಾರಿ ಆಸ್ಪತ್ರೆಯ ಕೋವಿಡ್ ಸೋಂಕಿತರಿಗೆ ಆತ್ಮ ಸ್ಥೈರ್ಯ ಹೆಚ್ಚಿಸುವ ಸಲುವಾಗಿ ಡಾ. ನಂದಿನಿ ಲಾವಣ್ಯ ಅವರು ದಿನವೂ ಚಿಕಿತ್ಸೆಯ ಜೊತೆಗೆ ಯೋಗಾ ತರಬೇತಿ ಹಾಗು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಇಂತಹ ಒಳ್ಳೆಯ ಕೆಲಸವೂ ಪ್ರಶಂಸೆಗೆ ಕಾರಣವಾಗಿದೆ.
ಸಂಯುಕ್ತವಾಣಿ