,chitradurga maha khyate akrosha

ಮಹಾ ಖ್ಯಾತೆಗೆ ರಾಜ್ಯ ನಾಯಕರ ಆಕ್ರೋಶ

ಜಿಲ್ಲಾ ಸುದ್ದಿ ರಾಜಕೀಯ

 

ಬೆಂಗಳೂರು: ಉದ್ಭವ್ ಠಾಕ್ರೆ ಹೇಳಿಕೆ ಉದ್ದಟತನದ ಹೇಳಿಕೆಯಾಗಿದೆ.  ಮಹಾಜನ್ ವರದಿಯೇ ಅಂತಿಮ  ಇದು ಎಲ್ಲರೂ ತಿಳಿದಿರುವ ಸತ್ಯ ಎಂದು  ಸಿಎಂ ಯಡಿಯೂರಪ್ಪ ಠಾಕ್ರೆಗೆ  ತಿರುಗೇಟು ನೀಡಿದ್ದಾರೆ.

Chitradurga cm bsy akrosha

 

 

 

,chitradurga maha khyate akrosha

ಭಾರತೀಯ ಒಕ್ಕೂಟದ ವ್ಯವಸ್ಥೆಗೆ ವಿರುದ್ದವಾಗಿದೆ‌ ಸೌಹಾರ್ಧತೆಯನ್ನು ಕೆಡಿಸುವ  ಯತ್ನ ಮಾಡುತ್ತಿದ್ದು, ಅದು ಬಿಟ್ಟು ಒಕ್ಕೂಟ ತತ್ವದ ಬದ್ದತೆ ತೋರಲಿ ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ  ಗೃಹ ಸಚಿವ ಬೊಮ್ಮಾಯಿ ಕೂಡ ಬೆಳಗಾವಿಯ ಒಂದಿಂಚೂ ಭೂಮಿ ಕೈಬಿಡೊಲ್ಲ, ಸೊಲ್ಲಾಪುರ ಹಾಗೂ  ಸಾಂಗ್ಲಿಯನ್ನು ಕರ್ನಾಟಕಕ್ಕೆ ಸೇರಿಸುತ್ತೆವೆ ಇದರ ಬಗ್ಗೆ ಪ್ರಯತ್ನ ನಡೆಯುತ್ತಿದೆ. ಶಾಂತಿ ಕದಡುವ ಪ್ರಯತ್ನವನ್ನು ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೊಂದೆಡೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರ್ನಾಟಕ‌ ನೆಲ,ಜಲ, ಭಾಷೆ  ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಇದರಲ್ಲಿ  ರಾಜಿಯೂ ಇಲ್ಲ. ರಾಜಕೀಯವೂ ಇಲ್ಲ ಎಂದಿದ್ದಾರೆ. ಡಿಕೆಶಿ ಕೂಡ ಪ್ರತಿಕ್ರಿಯಿಸುವ ಮೂಲಕ ಆಕ್ರೋಶವನ್ನು, ಮಹಾಜನ್ ವರದಿಯೇ ಅಂತಿಮ  ಠಾಕ್ರೆ ಹೇಳಿಕೆಗೆ ಮಹತ್ವ ಕೊಡಬೇಕಿಲ್ಲ. ಪದೇ ಪದೇ  ಇಂತಹ ಹೇಳಿಕೆ ನೀಡುವುದನ್ನು ಉದ್ಭವ್ ಠಾಕ್ರೆ ನೀಡುವುದು ಸರಿಯಲ್ಲ. ಇಂತಹ ಹೇಳಿಕೆ‌ಕೊಡಬಾರದು ಎಂದು ಹೇಳುವ ಮೂಲಕ ರಾಜ್ಯದ ನಾಯಕರುಗಳು  ಮಹಾರಾಷ್ಟ್ರದ ಖ್ಯಾತೆಗೆ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *