ಕೋಟೆ ನಾಡಿಗೂ ಕೋರೋನಾ ಎರಡನೇ ಪ್ರಭೇಧ ಕಾಲಿಡ್ತಾ?

ಜಿಲ್ಲಾ ಸುದ್ದಿ

ಚಿತ್ರದುರ್ಗ: ವಿದೇಶದಿಂದ ಬಂದಿರುವ 8 ಜನರನ್ನು ಆರೋಗ್ಯ ಇಲಾಖೆ ಕೋಟೆ ನಾಡಿನಲ್ಲಿ ಪತ್ತೆ ಹಚ್ಚಿದ್ದು ದೇಶದಲ್ಲಿ ಕೋರೋನಾ ಸೋಂಕಿನ ಎರಡನೇ ಅಲೇ ಶುರುವಾಗಿದ್ದು ಇದು  ಕೋಟೆ ನಾಡು ಚಿತ್ರದುರ್ಗದಲ್ಲೂ  ಬಂತಾ? ಇಂತಹ ವಿಚಾರ ಜಿಲ್ಲೆಯಲ್ಲಿ ಆತಂಕ ಸೃಷ್ಟಿ ಮಾಡಿದೆ.

Chitradurga corona second layer

 

 

 

 

ಕಳೆದ 12 ದಿನಗಳ ಹಿಂದೆ ವಿದೇಶದಿಂದ ಬಂದಿರುವ 8 ಜನರಲ್ಲಿ ಚಿತ್ರದುರ್ಗ,4 ಹಿರಿಯೂರು,1 ಹಾಗೂ ಹೊಸದುರ್ಗದಲ್ಲಿ 3 ಎಂದು ಪತ್ತೆ ಹಚ್ಚಲಾಗಿದೆ.
ಇವರೆಲ್ಲರ ಗಂಟಲು ದ್ರವದ ಮಾದರಿಯನ್ನು ತೆಗೆದು ಲ್ಯಾಬ್ ಗೆ ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಎಲ್ಲರದ್ದೂ ಎ ಸಿಂಪ್ಟಾಮಾಟಿಕ್ ನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
8 ಜನರಿಂದ ಸುಮಾರು 120 ಜನರನ್ನು ಪ್ರಾಥಮಿಕ ಹಾಗೂ ದ್ವೀತೀಯ ಸಂಪರ್ಕ ಹೊಂದಿದವರನ್ನು ಕೂಡ ಪತ್ತೆ ಹಚ್ಚಲಾಗಿದೆ. ಸದ್ಯಕ್ಕೆ ನಿಗಾದಲ್ಲಿರುವ 8 ಹಾಗೂ 120 ಜನರಿಗೆ ಮನೆ ಬಿಟ್ಟು ಹೊರಗೆ ಹೋಗದಂತೆ ಸೂಚನರ ನೀಡಿದ್ದು, ಫಲಿತಾಂಶ ಪಾಸಿಟಿವ್ ಬಂದರೆ ಅವರೆಲ್ಲರನ್ನೂ ಕೂಡ ಇನ್ಸಟಿಟ್ಯೂಷನಲ್ ಕ್ವಾರಂಟೈನ್ ಮಾಡುತ್ತೇವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸಂಯುಕ್ತವಾಣಿ

Leave a Reply

Your email address will not be published. Required fields are marked *