ಮಠಾಧೀಶರು ಸಮಾಜ ಮುಖಿಯಾಗಿ ಕೆಲಸಮಾಡಬೇಕು ಧರ್ಮದ ಮುಖವಾಣಿಯಾಗಬಾರದು

ಜಿಲ್ಲಾ ಸುದ್ದಿ

ಚಿತ್ರದುರ್ಗ,ಮಠಾಧೀಶರು ಸಮಾಜಮುಖಿಯಾಗಿ ಕೆಲಸವನ್ನು ಮಾಡಬೇಕಿದೆ ಒಂದು ಜಾತಿ, ಧರ್ಮದ ಮುಖವಾಣಿಯಾಗಿ ಕೆಲಸವನ್ನು ಮಾಡಬಾರದೆಂದು ಸಂಸದರಾದ ಎ.ನಾರಾಯಣಸ್ವಾಮಿ ರವರು ಮಠಾಧೀಶರಲ್ಲಿ ಮನವಿ ಮಾಡಿದ್ಧಾರೆ.

Chitradurga matadhisharu samajamukhiyagi kelasa madbekuu
ಚಿತ್ರದುರ್ಗ ನಗರದ ಕಬೀರಾನಂದಾಶ್ರಮದಲ್ಲಿ ಇಂದಿನಿಂದ ಪ್ರಾರಂಭವಾದ 91ನೇ ಶಿವರಾತ್ರಿ ಮಹೋತ್ಸದವದ ಮಹಾ ಮಂಟಪವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಮಠಗಳು ಧರ್ಮ ಪ್ರಸಾರಕ್ಕಿಂತ ನಮ್ಮ ಜನಾಂಗಕ್ಕೆ ಮೀಸಲಾತಿಯನ್ನು ತಂದು ಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಪಾದಯತ್ರೆ ಮಾಡುತ್ತಿದ್ದಾರೆ ಇದು ದುರಂತದ ವಿಷಯವಾಗಿದೆ. ಮಠಾಧೀಶರು ತಮ್ಮ ಜನಾಂಗಕ್ಕೆ ಜಾಗೃತಿಯನ್ನು ಮೂಡಿಸಬೇಕೇ ಹೊರೆತು ಮೀಸಲಾತಿಗಾಗಿ ಹೋರಾಟವನ್ನು ಮಾಡಬಾರದೆಂದು ತಿಳಿಸಿದರು.
ಮಠ ಎಂದರೆ ಒಂದು ಧರ್ಮ, ಜಾತಿ ಜನಾಂಗಕ್ಕೆ ಮೀಸಲಾಗಿರದೆ ಎಲ್ಲರ ಬೆಳವಣಿಗೆಯನ್ನು ಬಯಸುವಂತರಾಗಬೇಕಿದೆ, ಆದರೆ ಇಂದಿನ ದಿನಮಾನದಲ್ಲಿ ಕೆಲವು ಮಠಗಳು ಮತ್ತು ಅದರ ಮಠಾಧಿಶರು ತಮ್ಮ ಜನಾಂಗಕ್ಕೆ ಮೀಸಲಾತಿಯನ್ನು ನೀಡುವಂತೆ ಒತ್ತಡವನ್ನು ತುರುವಂತ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸಂಸದರು, ಮಠಗಳು ಜಾತಿಯಿಂದ ದೂರ ಇರಬೇಕಿದೆ, ಧರ್ಮದಲ್ಲಿ ರಾಜಕಾರಣವನ್ನು ಬೆರಸುವ ಕಾರ್ಯವನ್ನು ಮಾಡಬಾರದು ಧರ್ಮ ಮತ್ತು ರಾಜಕಾರಣ ಬೆರೆಯಬಾರದೆಂದು ತಿಳಿಸಿದರು.
ನಗರದ ಕಬೀರಾನಂದಾಶ್ರಮ ಕಳೆದ 90 ವರ್ಷಗಳಿಂದ ನಿರಂತರವಾಗಿ ಶಿವನಾಮ ಸ್ಮರಣೆಯನ್ನು ಮಾಡುತ್ತಾ ಬಂದಿದೆ ಇನ್ನೂ 9 ವರ್ಷ ಕಳೆದರೆ 100 ವರ್ಷವಾಗುತ್ತದೆ, ವರ್ಷದಲ್ಲಿ 5 ದಿನ ಶಿವ ನಾಮಸ್ಮರಣೆಯನ್ನು ಮಾಡುವುದರ ಮೂಲಕ ಜನತೆಗೆ ಶಿವನನ್ನು ತಿಳಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ವಾದದು, ಶ್ರೀ ಮಠ ವರ್ಗ, ಜಾತಿ ರಹಿತವಾಗಿ ಕೆಲಸವನ್ನು ಮಾಡುತ್ತಾ ಬಂದಿದೆ, ಇದರೊಂದಿಗೆ ಗೋವುಗಳ ಸಂರಕ್ಷಣೆಯ ಕಾರ್ಯವನ್ನು ಮಾಡುತ್ತಾ ಬಂದಿರುವುದು ಉತ್ತಮವಾದ ಕೆಲಸವಾಗಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.
ಚಿತ್ರದುರ್ಗ ಎಂದರೆ ಮಠಗಳ ತವರೂರಾಗಿದೆ ವರ್ಷ ಪೂರ್ತಿಯಾಗಿ ಮಠಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನತೆಗೆ ಸನ್ಮಾರ್ಗದತ್ತ ಕೊಂಡೂಯ್ಯವ ಕಾರ್ಯವನ್ನು ಮಾಡುತ್ತಿವೆ ಮುರುಘಾಮಠ, ತರಳಬಾಳು, ಸಾಣೇಹಳ್ಳಿ ಮಠ ಹಾಗೂ ಇಲ್ಲಿನ ಕಬೀರಾನಂದ ಆಶ್ರಮವೂ ಸಹಾ ಇದರಲ್ಲಿ ಭಾಗಿಯಾಗಿದೆ ಎಂದು ಹೇಳಿದರು.
ರಾಜ್ಯ ಬಜೆಪಿ ಕಾರ್ಯದರ್ಶೀ ಕೆ.ಎಸ್.ನವೀನ್ ಮಾತನಾಡಿ ಕೋವಿಡ್ ಬರತ್ತದೆ ಎಲ್ಲರು ಮನೆಯಲ್ಲಿ ತಿಂಗಳ ಗಟ್ಟಲೇ ಇರಬೆಕಾಗುತ್ತದೆ ಎಂದು ಕಳೆದ ಶಿವಾರಾತ್ರಿ ಮಹೋತ್ವವದಲ್ಲಿ ಯಾರಿಗೂ ಸಹಾ ಗೊತ್ತಿರಲಿಲ್ಲ ಆದರೆ ಪ್ರಕೃತಿಯ ವಿರುದ್ದ ಹೋದ ಮಾನವನಿಗೆ ಪ್ರಕೃತಿ ತಕ್ಕ ಪಾಠವನ್ನು ಕಲಿಸಲು ಕಾಣದ ವೈರಸ್ ಮೂಲಕ ಆಗಮಿಸಿ ಮಾನವನ ಆಹಂಕಾರವನ್ನು ತಗ್ಗಿಸುವ ಕಾರ್ಯವನ್ನು ಮಾಡಿದೆ ಎಂದು ತಿಳಿಸಿ ಈ ರೀತಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ನಮ್ಮ ಮನಸ್ಸನ್ನು ಶುದ್ದಿಗೂಳಿಸಬೇಕಿದೆ ಕೋವಿಡ್ ಬಂದರೆ ಅದಕ್ಕೆ ವಾಕ್ಸಿನ್ ಪಡೆಯಬೇಕಿದೆ ಆದರೆ ಬಾರದಂತೆ ಇರಲು ಈ ರೀತಿಯಾದ ಮಠಾಧೀಶರ ಮಾತುಗಳೇ ನಮಗೆ ವಾಕ್ಸಿನ್ ಆಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿಯ ಓಬಿಸಿಯ ರಾಜ್ಯ ಉಪಾಧ್ಯಕ್ಷರಾದ ಸಿದ್ದೇಶ್ ಯಾದವ್, ಗ್ರಾಮಾಂತರ ಘಟಕದ ಅಧ್ಯಕ್ಷ ನಂದಿನಾಗರಾಜ್, ಯುವ ಮುಖಂಡ ಸಂದೀಪ್ ಗುಂಡಾರ್ಪಿ, ಜಿ.ಪಂ. ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಶಿವರಾತ್ರಿ ಮಹೋತ್ಸವದ ಅಧ್ಯಕ್ಷ ವೆಂಕಟೇಶ್ ಭಾಗವಹಿಸಿದ್ದರು ಹುರುಳಿ ಬಸವರಾಜ್ ಉಪನ್ಯಾಸ ಮಾಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಪೋಲಿಸ್ ಪದಕ ವಿಜೇತರಾದ ಬಾಲಚಂದ್ರ ನಾಯಕ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಶಿವಮೂತೀ ಮುರುಘಾ ಶರಣರು ಹಾಗೂ ಹುಬ್ಬಳಿಯ ಜಡಿ ಸಿದ್ದೇಶ್ವರ ಮಠದ ಶ್ರೀ ರಮಾನಂದ ಶ್ರೀಗಳು ವಹಿಸಿದ್ದರು.
ಸುಬ್ರಾಯಭಟ್ ವೇದ ಘೋಷವನ್ನು ವಾಚಿಸಿದರೆ, ಶ್ರೀಮತಿ ಸುಮನಾ ಪ್ರಾರ್ಥಿಸಿದರೆ, ಮಾತೃಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯದರ್ಶೀ ವಿ.ಎಲ್.ಪ್ರಶಾಂತ್ ಸ್ವಾಗತಿಸಿದರು, ಮುರುಗೇಶ್ ಕಾರ್ಯಕ್ರಮ ನಿರೂಪಿಸಿದರು. ಸದ್ಗುರು ಕಬೀರಾನಂದಸ್ವಾಮಿ ವಿದ್ಯಾಪೀಠದ ಶಾಲಾ-ಕಾಲೇಜು ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.

 

 

 

 

ಸಂಯುಕ್ತವಾಣಿ

Leave a Reply

Your email address will not be published. Required fields are marked *