ಹಂಪಿ ವಿವಿಗೆ ಕೂಡಲೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಇರುವ ಒಂದೇ ಒಂದು, ಅದು ಹಂಪಿ ವಿಶ್ವ ವಿದ್ಯಾಲಯ ಅದರ ಅಭಿವೃದ್ದಿಗಾಗಿ ಹಾಗೂ ಭೋದಕ ಬೋದಕೇತರರ ವೇತನಕ್ಕೂ ಅನುದಾನವಿಲ್ಲದೆ ಇಂದು ವಿವಿ ಸ್ವರಗುತ್ತಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಇಲ್ಲದೆ ಹೋದರೆ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಚಿತ್ರದುರ್ಗ ನವ ನಿರ್ಮಾಣ ವೇದಿಕೆ ಎಚ್ಚರಿಕೆಯನ್ನು‌ ನೀಡಿದೆ.

 

 

 

 

Chitradurga realse  fund for hampi Kannada vv

ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ಅನುದಾನದ ಕೊರತೆಯಿಂದ ಸೊರಗುತ್ತಿರುವುದು ನೋವಿನ ಸಂಗತಿಯಾಗಿದೆ. ವಿವಿಯಲ್ಲಿ ನಡೆಯುವ ಸಂಶೋಧನೆಯ ಕೆಲಸಗಳು, ಭಾಷೆ ಸಂಸ್ಕೃತಿ ಕಲೆ ಸಾಹಿತ್ಯ ಇಂತಹ ವಿಚಾರಗಳ ಜ್ಙಾನಾರ್ಜನೆಗೂ ಸರಿಯಾದ ಸೌಲಭ್ಯವಿಲ್ಲವಾಗಿದೆ. ಕನ್ನಡದ ಬೆಳವಣಿಗೆ , ಸಂಶೋಧನೆಗಾಗಿ ಹುಟ್ಟಿಕೊಂಡಿರುವ ವಿವಿ ಅಭಿವೃದ್ದಿ ಬೆಳವಣಿಗೆ ಕಾಣದೆ ರಾಜಕಾರಣಕ್ಕಾಗಿ ಸೊರಗಬಾರದು. ಇಷ್ಟೆ ಅಲ್ಲದೆ ಅನುದಾನವಿಲ್ಲದೆ ಅಲ್ಲಿನ ಸಿಬ್ಬಂದಿಗಳಿಗೆ ವೇತನ ಕೊಡಲೂ ಹಣವಿಲ್ಲದೆ ಮೂರು ನಾಲ್ಕು ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಸರ್ಕಾರ ಅನ್ಯ ವಿಚಾರಗಳಿಗೆ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡುತ್ತಿದ್ದು, ಕನ್ನಡದ ಏಳಿಗೆಗಾಗಿ ಬೆಳವಣಿಗೆಗಾಗಿ ಇರುವ ಏಕೈಕ ವಿವಿ ಇಂತಹ ವಿವಿ ಬಗ್ಗೆ ಸರ್ಕಾರ ನಿರ್ಲಕ್ಷತೆಯ ಧೋರಣೆ ತೋರುತ್ತಿರುವುದು ಸರ್ಕಾರಕ್ಕೆ ಶೋಭೆಯಲ್ಲ. ವಿವಿ ಅಭಿವೃದ್ದಿ ಹಾಗೂ ಸಿಬ್ಬಂದಿ ವೇತನ ಸೇರಿ ವಾರ್ಷಿಕ 50 ಕೋಟಿ ಹಣವನ್ನು ಬಿಡುಗಡೆ ಮಾಡುತ್ತಿದ್ದ ಸರ್ಕಾರ ನೆರೆ ಕೋರೋನಾ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಮುಂದೊಡ್ಡಿ ಕೇವಲ 50 ಲಕ್ಷಕ್ಕೆ ಸೀಮಿತಗೊಳೊಸಿದೆ. ಅದರಲ್ಲಿ 12 ಲಕ್ಷ ಮಾತ್ರ ಬಿಡುಗಡೆಗೊಳಿಸಿದೆ. ಆದರೆ ಕೂಡಲೇ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡಬೇಕು. ಇಲ್ಲದೆ ಹೋದರೆ ಜನವರಿ 5 ರಂದು ಸಾಹಿತಿ ಹೋರಾಟಗಾರರ ವಿದ್ಯಾರ್ಥಿಗಳ ಹಕ್ಕೋತ್ತಾಯದ ಸಭೆ ನಡೆಸಿ ಸರ್ಕಾರದ ನಡೆಯನ್ನು ಖಂಡಿಸುವ ಕೆಲಸವನ್ನು ನವ ನಿರ್ಮಾಣ ವೇದಿಕೆ ಮಾಡಲಿದೆ ಎಂದು ಜಿಲ್ಲಾಧ್ಯಾಕ್ಷ ಕೆಟಿ ಶಿವಕುಮಾರ್ ಹೇಳಿದ್ದು, ಮನವಿಯನ್ನು ಚಿತ್ರದುರ್ಗದ ಎಡಿಸಿ ಸಂಗಪ್ಪ ಅವರ ಮೂಲಕ ಸರ್ಕಾರದ ಸಿಎಂ ಯಡಿಯೂರಪ್ಪ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *