ಡಿಸೆಂಬರ್ ನಲ್ಲಿ ದುರ್ಗೋತ್ಸವ ಆಚರಣೆ

ರಾಜ್ಯ

ಡಿಸೆಂಬರ್ ನಲ್ಲಿ ದುಗೋರ್ತ್ಸವವನ್ನು ಆಚರಣೆ ಮಾಡಲಾಗುವುದೆಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ದುಗೋತ್ಸವ ಕಾರ್ಯಕ್ರಮ ನಡೆದಿತ್ತು, ಈಗ ಮತ್ತೋಮ್ಮೆ ದುಗೋತ್ಸವ ಮಾಡಲು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿದ್ದೇನೆ ಅವರು ಸಹಾ ಸಮ್ಮತ್ತಿಸಿದ್ದಾರೆ. ಮೂರರಿಂದ ಐದು ದಿನಗಳ ಕಾಲ ಉತ್ಸವವವನ್ನು ನಡೆಸಲಾಗುವುದು. ಕೇಂದ್ರ ಪ್ರವಾಸೋದ್ಯಮ ಸಚಿವರು ಇದರಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಈ ದುಗೋತ್ಸವವದಲ್ಲಿ ಅಪ್ಪರ್ ಭದ್ರಾ ಯೋಜನೆ, ನೇರ ರೈಲು ಮಾರ್ಗ, 83 ವರ್ಷಗಳ ಬಳಿಕ ತುಂಬಿರುವ ವಾಣಿವಿಲಾಸ ಸಾಗರದ ಬಗ್ಗೆ ಚರ್ಚೆ, ಸಂವಾದಗಳು ನಡೆಯಲಿದೆ ಎಂದರು.
ಅ. 28ರಂದು ಕೋಟೆಯ ಮೇಲೆ ಕಾರ್ಯಕ್ರಮವೊಂದನ್ನು ನಡೆಸಲು ಸಚಿವರು ನಿರ್ಧಾರ ಮಾಡಿದ್ದಾರೆ. ಇದರ ಬಗ್ಗೆ ಮುಂದಿನ ದಿನಮಾನದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸುವುದರ ಮೂಲಕ ಕಾರ್ಯಕ್ರಮಗಳ ರೂಪುರೇಷವನ್ನು ನಿರ್ಧಾರ ಮಾಡಲಾಗುವುದು. ಇದರ ನೇತೃತ್ವವನ್ನು ಜಿಲ್ಲಾಧಿಕಾರಿಗಳು ವಹಿಸಲಿದ್ದಾರೆ ಎಂದು ನವೀನ್ ಹೇಳಿದರು.

 

 

 

Leave a Reply

Your email address will not be published. Required fields are marked *