ರಸ್ತೆ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡುವುದು ವಿಷಾಧಕರ

ಜಿಲ್ಲಾ ಸುದ್ದಿ

ಕೆಲವು ಹಳ್ಳಿಗಳಲ್ಲಿ ಸ್ಮಶಾನ ಇಲ್ಲದೆ ರಸ್ತೆ ಬದಿಯಲ್ಲಿ ಪಕ್ಕದಲ್ಲಿ ಮೃತ ದೇಹಗಳನ್ನು ಹೂಳುತ್ತಿರುವುದು ವಿಷಾಧನೀಯಕರ ಘಟನೆ ಇಂತಹ ಘಟನೆಗಳು ಮರುಕಳಿಸಬಾರದು ಅಧಿಕಾರಿಗಳು ಪಣತೊಟ್ಟು ಸ್ಮಶಾನ ಜಾಗ ನಿಗದಿ ಮಾಡಬೇಕೆಂದು ಶಾಸಕ ರಘು ಮೂರ್ತಿ ಹೇಳಿದರು ಅವರು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು ಮನುಷ್ಯ ಸಮಾಜದಲ್ಲಿ ಇರುವಷ್ಟು ದಿವಸ ಎಲ್ಲವೂ ನನ್ನದು ಎಂಬ ಮನೋಭಾವನೆ ತಾಳುತ್ತಾನೆ ಆದರೆ ಸತ್ತ ನಂತರ ಮಣ್ಣು ಮಾಡಲು ಜಾಗ ಹುಡುಕುತ್ತಾರೆ ಇದೇ ವಿಚಿತ್ರವಾದ ಜೀವನ ಆದ್ದರಿಂದ ಶ್ರೀಮಂತರು ತಮ್ಮ ಸ್ವಂತ ಭೂಮಿಯಲ್ಲಿ ಅಂತ್ಯ ಕ್ರಿಯೆ ನಡೆಸುತ್ತಾರೆ ಆದರೆ ಬಡವರು ಜಾಗಕ್ಕಾಗಿ ಹೋರಾಟ ನಡೆಸುತ್ತಾರೆ ಆದ್ದರಿಂದ ಇಂತಹ ಘಟನೆಗಳು ಮರುಕಳಿಸುವ ಮುನ್ನ ಸ್ಮಶಾನ ಜಾಗ ನಿಗದಿ ಮಾಡಿ, ತಾಲೂಕಿನಲ್ಲಿ ತೊರೆ ಬೀರನಹಳ್ಳಿ ಗ್ರಾಮದಲ್ಲಿ ಸ್ಮಶಾನದ ಸಮಸ್ಯೆ ಅತಿ ಗಂಭೀರವಾದ ಸಮಸ್ಯೆಯಾಗಿದೆ. ಆದ್ದರಿಂದ ಪರಿಶಿಷ್ಟ ಜಾತಿಯ ಜನರು ತಮ್ಮ ಜಮೀನು ಇಲ್ಲದೆ ಸ್ಮಶಾನ ಅವಲಂಬಿತರಾಗಿದ್ದಾರೆ ಡಿಸೆಂಬರ್ 20ರಂದು ಸ್ಮಶಾನ ಮುಕ್ತ ಚಳ್ಳಕೆರೆ ಕ್ಷೇತ್ರವಾಗಬೇಕು ಎಲ್ಲಾ ಅಧಿಕಾರಿಗಳು ಇತ್ತ ಕಡೆ ಗಮನ ಕೊಡಬೇಕು ಎಂದರು.ತಹಶೀಲ್ದಾರ್ ರಘುಮೂರ್ತಿ ಮಾತನಾಡಿ ತಾಲೂಕಿನಲ್ಲಿ ಅತಿ ಕಡುಬಡತನದಿಂದ ಜೀವನ ನಡೆಸುವ ಬಹಳಷ್ಟು ಜನರಿದ್ದಾರೆ ಅವರಿಗೆ ಸ್ವಲ್ಪವೂ ಭೂಮಿ ಇಲ್ಲದೆ ಇರುವವರು ಇದ್ದು ಅವರಿಗಾಗಿ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ಮಾಡಲು ಅನುಕೂಲ ಮಾಡಲಾಗಿದೆ ಇನ್ನು ಅನೇಕ ಗ್ರಾಮಗಳಲ್ಲಿ ಈಗಾಗಲೇ ನಿಗದಿತ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಲು ನಾಮಫಲಕ ಹಾಕಿದ್ದು ಅಭಿವೃದ್ಧಿ ಮಾಡಬೇಕಾದ ಸ್ಮಶಾನಗಳನ್ನು ತುತ್ತಾಗಿ ಅಭಿವೃದ್ದಿಪಡಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸಂತೋಷ ಕುಮಾರ ಇದ್ದರು

 

 

 

Leave a Reply

Your email address will not be published. Required fields are marked *