ಅಧಿಕಾರಿಳಿಗೆ ಚಳಿ ಬಿಡಿಸಿದ ಶಾಸಕ ತಿಪ್ಪಾರೆಡ್ಡಿ

ಜಿಲ್ಲಾ ಸುದ್ದಿ

ಓಬವ್ವ ಕ್ರೀಡಾಂಗಣ ಅವ್ಯವಸ್ಥೆ ಮತ್ತು ಕ್ರೀಡಾಪಟುಗಳ ದೂರುಗಳ ಸರಮಾಲೆಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು. ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರೀಡಾಪಟುಗಳ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ಅಹವಾಲು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಕ್ರೀಡಾಂಗಣದಲ್ಲಿ ಸ್ವಚ್ಚತೆಗಾಗಿ ನಗರಸಭೆಯಿಂದಕಸದ ಬುಟ್ಟಿಗಳನ್ನು ಅಳವಡಿಸಲಾಗುವುದು. ಕ್ರೀಡಾಂಗಣ ಸುತ್ತಲೂ ಸಹ ಎಲ್ ಇಡಿ ದೀಪಗಳನ್ನು ಹಾಕಲಾಗುತ್ತದೆ. ನಾಯಿಗಳು ಮತ್ತು ದನಗಳನ್ನು ಒಳಗೆ ಬಾರದಂತೆ ಸೆಕ್ಯುರಿಟಿ ಕ್ರಮ‌ ವಹಿಸಲು ಸೂಚಿಸಿದ್ದೇನೆ. ಶೌಚಾಲಯದ ನವೀಕರಣವನ್ನು ತುರ್ತಾಗಿ ಮಾಡಲಾಗುತ್ತದೆ. ಕ್ರೀಡೆಗಾಗಿ ಉತ್ತಮ ಮಣ್ಣಿನ ಅವಶ್ಯಕತೆ ಇದ್ದು ಕೂಡಲೇ ಹಾಕಲು ತಿಳಿಸಿದ್ದೇನೆ. ಕುಡಿಯುವ ನೀರಿನ ವ್ಯವಸ್ಥೆಗೆ ಇಂದೇ ಕೊಳವೆ ಬಾವಿ ಕೊರೆಸಲಾಗುವುದು, ಡ್ರೇಸಿಂಗ್ ರೂಂ ಸರಿಪಡಿಸಲಾಗುವುದು. ಉತ್ತಮ ಮತ್ತು ಗುಣಮಟ್ಟದ ಕ್ರೀಡಾ ಸಾಮಗ್ರಿಗಳನ್ನು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳತ್ತೇವೆ. ಎಲ್ಲಾ 16 ಸಿಬ್ಬಂದಿಗಳು ಸಹ ಅವರ ವ್ಯಾಪ್ತಿಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಸಿಬ್ಬಂದಿ ವಜಾ ಮಾಡಲಾಗುತ್ತದೆ. ಕ್ರೀಡಾಪಟುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಾನು ಬದ್ದವಾಗಿದ್ದು ಸದ್ಯಕ್ಕೆ ಅನುದಾನ ಕೊರತೆ ಇದ್ದು ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು.ಕ್ರೀಡಾ ಇಲಾಖೆ ಅಧಿಕಾರಿ ಇಷ್ಟೊಂದು ಸಮಸ್ಯೆ ಇಟ್ಟುಕೊಂಡು ಸುಮ್ಮನೆ ಇದ್ದರೆ ಸಹಿಸಲ್ಲ , ಕ್ರೀಡಾ ಇಲಾಖೆಯಲ್ಲಿ 4 ಲಕ್ಷ ಹಣ ಇದ್ದು ಮತ್ತು ನಗರಸಭೆಯ 10 ರಿಂದ 20 ಲಕ್ಷ ಹಣ ಬಳಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು.

 

 

 

ಕ್ರೀಡಾ ಇಲಾಖೆ ಹಾಸ್ಟೆಲ್ ಮಕ್ಕಳಿಗೆ ನಿತ್ಯದ ಊಟದ ಪಟ್ಟಿ ಪ್ರಕಾರ ಊಟ ನೀಡಬೇಕು. ಮೊಟ್ಟೆ , ಚಿಕನ್ , ಬಾಳೆಹಣ್ಣು, ಜೂಸ್, ಹಾಲು ತರಕಾರಿ ಸೇರಿ ಪೌಷ್ಟಿಕಾಂಶ ಆಹಾರ ನೀಡಬೇಕು ಎಂದರು. ಮದ್ಯಪಾನ ಮಾಡಿ‌ ಯುವಕರು ಗಲಾಟೆ ಮಾಡಿತ್ತಾರೆ ಎಂದು ತಿಳಿಸಿದ್ದು ಬಡಾವಣೆ ಪೋಲಿಸ್ ಠಾಣೆಯ ಪಿಎಸ್ಐ ಅವರಿಗೆ ತಿಳಿಸಿ ರಾತ್ರಿ ಬಂದು ಇಲ್ಲಿ ಪರಿಶೀಲಿಸಿ ಇಂತಹ ಕೃತ್ಯ ಮಾಡುವವರ ವಿರುದ್ದ ಕೇಸ್ ದಾಖಲಿಸಿ ಎಂದು ಸೂಚಿಸಿದ್ದೇನೆ. ಜಿಲ್ಲಾ ಪಂಚಾಯತ ಸಿಇಓ ಅವರು ಸಹ ಇದರ ಅವ್ಯವಸ್ಥೆ ಬಗ್ಗೆ ಸಭೆಯ ಮುಖಾಂತರ ಸುಧಾರಣೆಗೆ ಕ್ರಮ ವಹಿಸಲು ತಿಳಿಸಿದ್ದೇನೆ ಎಂದರು.ಕ್ರೀಡಾಪಟುವಿಗೆ ಶೂ ಇಲ್ಲ ತುಂಬಾ ಬಡವ ಎಂದಾಗ ಶಾಸಕರು ಸ್ವತಃ ತಮ್ಮ ಸ್ವಂತ ಹಣವನ್ನು ನೀಡಿ ಉತ್ತಮವಾದ ಶೂ ತೆಗೆದುಕೋ‌ ಎಂದು ಯುವಕನಿಗೆ ತಿಳಿಸಿದರು

Leave a Reply

Your email address will not be published. Required fields are marked *