ಹೊಳಲ್ಕೆರೆ ಪುರಸಭೆಯ ಪೌರಾಕಾರ್ಮಿಕರು ಹಾಗೂ ಪುರಸಭೆ ಸದಸ್ಯರುಗಳ ನಡುವೆ ಕ್ರೀಡಾಕೂಟ

ಕ್ರೀಡೆ

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹೊಳಲ್ಕೆರೆ ಪುರಸಭೆಯ ಪೌರಾಕಾರ್ಮಿಕರು ಹಾಗೂ ಪುರಸಭೆ ಸದಸ್ಯರುಗಳ ನಡುವೆ ಕ್ರೀಡಾಕೂಟ

 

 

 

ಈ ದಿನ ಹೊಳಲ್ಕೆರೆ ಪುರಸಭೆ ವತಿಯಿಂದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಹೊಳಲ್ಕೆರೆ ಪುರಸಭೆಯ ಪೌರಾಕಾರ್ಮಿಕರು ಹಾಗೂ ಪುರಸಭೆ ಸದಸ್ಯರುಗಳ ನಡುವೆ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಹೊಳಲ್ಕೆರೆ ಪಟ್ಟಣದ ಕೊಟ್ರೆ ನಂಜಪ್ಪ ಕಾಲೇಜು ಆವರಣದಲ್ಲಿ ಜರುಗಿದ ಈ ಕ್ರೀಡಾಕೂಟದಲ್ಲಿ ಹೊಳಲ್ಕೆರೆ ಪುರಸಭೆಯ ಪೌರಕಾರ್ಮಿಕರು ಹಾಗೂ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಬಡ್ಡಿ, ಗುಂಡು ಎಸೆತ, ತಟ್ಟೆ ಎಸೆತ ಹಾಗೂ ಓಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.


ಪುರಸಭೆಯ ಅಧ್ಯಕ್ಷರಾದ ಆರ್ ಎ ಅಶೋಕ್, ಉಪಾಧ್ಯಕ್ಷರಾದ ಕೆ ಸಿ ರಮೇಶ್, ಸದಸ್ಯರುಗಳಾದ ಹೆಚ್ ಆರ್ ನಾಗರತ್ನಮ್ಮ ವೇದಮೂರ್ತಿ, ಪಿ ಆರ್ ಮಲ್ಲಿಕಾರ್ಜುನ್, ಡಿ ಎಸ್ ವಿಜಯ, ಬಿ ಎಸ್ ರುದ್ರಪ್ಪ, ಎಲ್ ವಿಜಯಸಿಂಹ ಖಾಟ್ರೋತ್, ಮಮತ ಜಯಸಿಂಹ ಖಾಟ್ರೋತ್, ಪಿ ಹೆಚ್ ಮುರುಗೇಶ್, ಶಬೀನ ಅಶ್ರಫುಲ್ಲಾ, ಸೈಯದ್ ಸಜೀಲ್, ಸೈಯದ್ ಮನ್ಸೂರ್, ಪೂರ್ಣಿಮ ಬಸವರಾಜ್, ಸುಧಾ ಬಸವರಾಜ್, ಸವಿತ ನರಸಿಂಹ ಖಾಟ್ರೋತ್, ಬಿ ವಸಂತ ಆರ್ ರಾಜಪ್ಪ, ನಾಮ ನಿರ್ದೇಶಿತ ಸದಸ್ಯರಾದ ಕೆ ಆರ್ ರಾಜಪ್ಪ, ಹೆಚ್ ಮಹೇಶ್, ಅಲ್ತಾಫ್‌ ಹುಸೇನ್, ಶೀಲ ಎಸ್ ವಿ, ಕವಿತ ಆರ್, ಮುಖ್ಯಾಧಿಕಾರಿ ಎ ವಾಸಿಂ ಹಾಗೂ ಹೊಳಲ್ಕೆರೆ ಪುರಸಭೆಯ ಎಲ್ಲಾ ಪೌರಕಾರ್ಮಿಕರು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಮುಖ್ಯಾಧಿಕಾರಿ ಎ ವಾಸಿಂ ಮಾತನಾಡಿ ಹೊಳಲ್ಕೆರೆ ಪುರಸಭೆಯ ಸದಸ್ಯರುಗಳು, ಪೌರಕಾರ್ಮಿಕರ ಜೊತೆ ಯಾವುದೇ ಮುಜುಗರ ಇಲ್ಲದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವುದು ಪೌರಕಾರ್ಮಿಕರಲ್ಲಿ ಉತ್ಸಾಹ ಹಾಗೂ ಸಂತಸ ಮೂಡಿಸಿದೆ. ಯಾವ ಹುದ್ದೆಯೂ ಕೀಳಲ್ಲ, ಯಾವ ಹುದ್ದೆಯೂ ಮೇಲಲ್ಲ. ಪ್ರತಿ ಕೆಲಸಕ್ಕೂ ತನ್ನದೇ ಆದ ಮಹತ್ವ ಇರುತ್ತದೆ. ಹೊಳಲ್ಕೆರೆ ಪುರಸಭೆಯ ಸದಸ್ಯರು ಪೌರಾಕಾರ್ಮಿಕರೊಟ್ಟಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪೌರಕಾರ್ಮಿಕರಲ್ಲಿ ನಾವು ಕಸ ಗುಡಿಸುವವರು ಅಷ್ಟೇ ಎಂದು ಇದ್ದ ಕೀಳರಿಮೆಯನ್ನು ತೆಗೆದುಹಾಕುವ ಕೆಲಸ ಮಾಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಹೊಳಲ್ಕೆರೆ ಪುರಸಭೆಯ ಪೌರಕಾರ್ಮಿಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

Leave a Reply

Your email address will not be published. Required fields are marked *