ಜಿಲ್ಲಾ ಸುದ್ದಿ

ತಂದೆಯ ಶವಕ್ಕೆ ಹೆಗಲು ಕೊಟ್ಟ ಮಗಳು

 

ಚಿತ್ರದುರ್ಗ:ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಸಮೀಪದ ಕಳವಿಭಾಗಿ ಗ್ರಾಮದ ಹಾಲುಮತ ಕುರುಬರ ಸಮುದಾಯದ ಹಿರಿಯ ಮುಖಂಡರೂ

ಹರ್ತಿಕೋಟೆ ಗ್ರಾಮದ ಓರುಗಲ್ಲಮ್ಮ ದೇಗುಲದ ಗುಡಿಗೌಡರಾಗಿದ್ದ ಎಂ. ಜೂಲಪ್ಪನವರು (86) ಇವರು ವಯೋಸಹಜವಾಗಿ ನಿಧನರಾದರು.

 

 

 

Chitradurga tandeya shavakke hegalu kotta magalu
ತಾಲೂಕು ಕುರುಬರ ಸಂಘದ ನಿರ್ದೇಶಕರೂ, ಯುವ ಮುಖಂಡರಾದ ಜೆ. ರಂಗನಾಥ್ ಸೇರಿದಂತೆ ಪತ್ನಿ ಗೌರಮ್ಮ ಹಾಗೂ ಐವರು ಪುತ್ರಿಯರನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅಂತ್ಯಸಂಸ್ಕಾರ ಕಳವಿಭಾಗಿ ಜಮೀನಿನಲ್ಲಿ ಹಾಲುಮತ ಸಂಸ್ಕೃತಿ, ಸಂಪ್ರದಾಯದಂತೆ ನೆರವೇರಿತು.
ಜೂಲಪ್ಪನವರು ಕಳವಿಭಾಗಿ ಗ್ರಾಮದಲ್ಲಿ ತಮ್ಮದೇ ಆದ ಛಾಫು ಮೂಡಿಸಿದ್ದರು. ಸಮುದಾಯದ ಹಿರಿಯ ಮುಖಂಡರಾಗಿ ಮಾರ್ಗದರ್ಶನ ನೀಡುತ್ತಿದ್ದರು. ಶ್ರೀ ಓರುಗಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ.

*ಹೆಗಲು ಕೊಟ್ಟ ಮಗಳು*:
ರಂಗಮ್ಮ, ಗುಂಡಮ್ಮ, ಶಾಂತಮ್ಮ, ಜ್ಯೋತಿ, ‌ಕವಿತಾ ಐವರು ಪುತ್ರಿಯರನ್ನು ಪಡೆದ ಜೂಲಪ್ಪ ಅವರು ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಂತೆ ಪ್ರೀತಿ ತೋರಿ ಬೆಳೆಸಿದ್ದರು. ಅಂತ್ಯ ಸಂಸ್ಕಾರದ ವೇಳೆ ಮಗಳು ಶಾಂತಮ್ಮ ಅವರು ಸ್ವತಃ ತಂದೆಯ ಶವಕ್ಕೆ ಹೆಗಲು ಹೊತ್ತು ಸಾಗಿದ್ದು ತಂದೆಯ ಮೇಲಿನ ಪ್ರೀತಿಗೆ ಸಾಕ್ಷಿಯಾಯಿತು ಮತ್ತು ಎಲ್ಲರ ಮನದಲ್ಲಿ ಕೊಟ್ಟು ಮಾದರಿ ಎನಿಸಿದರು.

ಸಂತಾಪ: ಜೂಲಪ್ಪ ಅವರ ನಿಧನಕ್ಕೆ ತಾಲ್ಲೂಕು ಕುರುಬರ ಸಂಘದ ಪದಾಧಿಕಾರಿಗಳು, ಸದಸ್ಯರು ಸಂತಾಪ ಸೂಚಿಸಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *