ಬಿಬಿಎಂಪಿ ವ್ಯಾಪ್ತಿ ಮತ್ತೆ ವಿಸ್ತರಣೆ:ಹೆಚ್ಚುವರಿಯಾಗಿ 60 ಹಳ್ಳಿಗಳ ಸೇರ್ಪಡೆಗೆ ಸಿದ್ಧತೆ

ರಾಜ್ಯ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬೆಂಪಿ) ವ್ಯಾಪ್ತಿಗೆ ಮತ್ತೆ 60 ಹಳ್ಳಿಗಳನ್ನು ಸೇರಿಸಲು ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಮಸೂದೆ ಸಿದ್ಧಪಡಿಸಲಾಗುತ್ತಿದೆ. ಮುಂದಿನ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ಪಡೆದು ವಿಸ್ತರಣೆ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. 2010ರಲ್ಲಿ 110 ಹಳ್ಳಿಗಳು, 7 ನಗರಸಭೆ, 1 ಪುರಸಭೆಯನ್ನು ಬಿಎಂಪಿಗೆ ಸೇರಿಸಿ ಬಿಬಿಎಂಪಿಯನ್ನಾಗಿ ಪರಿವರ್ತಿಸಲಾಯಿತು. 225 ಚದರ ಕಿ.ಮೀ. ವ್ಯಾಪ್ತಿಯ ಪಾಲಿಕೆ ಆಡಳಿತವನ್ನು 820 ಚದರ ಕಿ.ಮೀ.ಗೆ ವಿಸ್ತರಿಸಲಾಗಿತ್ತು. 100 ವಾರ್ಡ್​ಗಳನ್ನು 198 ವಾರ್ಡ್​ಗೆ ಹೆಚ್ಚಿಸಲಾಯಿತು. ಈ ವಾರ್ಡ್​ಗಳನ್ನು 8 ವಲಯಗಳಿಗೆ ಹಂಚಿಕೆ ಮಾಡಿ ಆಡಳಿತ ವಿಕೇಂದ್ರೀಕರಿಸಲಾಗಿದೆ.ಅದರೆ, ವಲಯ ರಚನೆಯಲ್ಲಿ ಅಸಮಾನತೆಯಿದ್ದು, ಕೆಲ ವಲಯಗಳಿಗೆ ಕೇವಲ 8 ವಾರ್ಡ್​ಗಳನ್ನು ನೀಡಿದರೆ ಇನ್ನು ಕೆಲ ವಲಯಕ್ಕೆ 30ಕ್ಕೂ ಹೆಚ್ಚಿನ ವಾರ್ಡ್​ಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಆಡಳಿತ ಸಮರ್ಪಕವಾಗಿ ನಡೆಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಹೊಸದಾಗಿ 60 ಹಳ್ಳಿಗಳನ್ನು ಸೇರ್ಪಡೆ ಮಾಡಿ ವಾರ್ಡ್​ಗಳ ಸಂಖ್ಯೆಯನ್ನು 224ಕ್ಕೆ ಹೆಚ್ಚಿಸುವುದು ಹಾಗೂ ಅವುಗಳನ್ನು ಸಮಾನವಾಗಿ 6 ವಲಯಗಳಿಗೆ ಹಂಚುವ ಕುರಿತು ರ್ಚಚಿಸಲಾಗಿದೆ.

 

 

 

Leave a Reply

Your email address will not be published. Required fields are marked *