ಭಿನ್ನಮತ ಬದಿಗಿಟ್ಟು ಒಂದಾದ ಚಂದ್ರಪ್ಪ ಕಾರಜೋಳ

ರಾಜ್ಯ

ಟಿಕೆಟ್ ವೈಮನಸ್ಸು ಬಿಟ್ಟು ಒಂದಾದ ನಾಯಕರು, ಚಂದ್ರಪ್ಪ ನಿವಾಸಕ್ಕೆ ಕಾರಜೋಳ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದೇ ಪಕ್ಷೇತರರಾಗಿ ಕಣಕ್ಕಿಳಿಯುವ ಸುಳಿವು ನೀಡಿದ್ದ ಶಾಸಕ ಎಂ ಚಂದ್ರಪ್ಪ ಹಾಗೂ ಪುತ್ರ ರವಿಚಂದ್ರನ್ ಇದೀಗ ವೈ ಮನಸು ಬಿಟ್ಟು ಪಕ್ಷದಲ್ಲಿ ಅಭ್ಯರ್ಥಿ ಗೆಲುವಿಗೆ ಕೈ ಜೋಡಿಸಿದ್ದಾರೆ. ಚಿತ್ರದುರ್ಗದಲ್ಲಿನ ಶಾಸಕ ಎಂ. ಚಂದ್ರಪ್ಪ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಇಂದು ಬೆಳಿಗ್ಗೆ ಭೇಟಿ ನೀಡಿದರು. ಉಪಹಾರ ಕೂಟದಲ್ಲಿ ಸೇರಿದ ಇಬ್ಬರು ಮುಖಂಡರು ಮುನಿಸು ಬಿಟ್ಟು ಇಬ್ಬರು ಒಂದಾಗಿದ್ದಾರೆ. ಶಾಸಕ ಎಂ ಚಂದ್ರಪ್ಪ ಮತ್ತು ಉತ್ತರ ರಘು ಚಂದನ್ ಇಬ್ಬರನ್ನೂ ಕುರಿಸಿಕೊಂಡು ಜೊತೆ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿದ್ದು, ಚುನಾವಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

 

 

 

ಕಳೆದ ಎರಡು ದಿನದ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಬೆಂಗಳೂರು ನಿವಾಸಕ್ಕೆ ಎಂ ಚಂದ್ರಪ್ಪ ಹಾಗೂ ಪುತ್ರ ರಘುಚಂದ್ರನ್ ಕರೆಸಿಕೊಂಡು ಮಾತಾಡಿ ಬಂಡಾಯ ಶಮನಕ್ಕೆ ಕೊನೆ ಹಾಡಿದ್ದರು.
ಇದಾದ ನಂತರ ಮನೆಗೆ ಬಿಜೆಪಿ ಅಭ್ಯರ್ಥಿ ಭೇಟಿ ನೀಡುವ ಮೂಲಕ ಒಟ್ಟಾಗಿ ಚುನಾವಣೆ ಎದುರಿಸಲಿದ್ದಾರೆ.
ಚಂದ್ರಪ್ಪ ನಿವಾಸ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಯುವಕ ರಘುಚಂದನ್‌ ಆಶಾವಾದಿ, ಈ ಕಾರಣಕ್ಕೆ ಅವರು ಪಕ್ಷ ಸಂಘಟನೆ, ಹೋರಾಟ ಮಾಡಿಕೊಂಡು ಟಿಕೆಟ್ ನಿರೀಕ್ಷೆ ಯಲ್ಲಿದ್ದರು. ಆದ್ರೆ ಕೇಂದ್ರ ಹಾಗೂ ರಾಜ್ಯ ನಾಯಕರು ಇದೊಂದು ಬಾರಿ ನೀವೇ ನಿಲ್ಲಿ ಎಂದು‌ ಹೇಳಿದ್ದು,, ರಾಷ್ಟ್ರೀಯ ನಾಯಕರ ಒತ್ತಾಯದ ಮೇರೆಗೆ ನಾನು ಒಪ್ಪಿಕೊಂಡೆ, ನಾನು ಯಾರ ಮಾತನ್ನು ಮೀರುವುದಿಲ್ಲವೋ ಅವರಿಂದ‌ ಹೇಳಿಸಿದ್ರು, ಅದಕ್ಕೆ ನಾನು ಆಯಿತು ಸ್ವಾಮಿ ಅಂದೆ, ಚಂದ್ರಪ್ಪ ನಾನು ಒಂದೇ ತೆಟ್ಟೆಯಲ್ಲಿ ಉಂಡ ಅಣ್ಣ ತಮ್ಮಂದಿರು. ಆವೇಶದಲ್ಲಿ ಮಾತುಗಳು ಹೆಚ್ವು ಕಡಿಮೆ‌ ಆಗಿರುತ್ತವೆ. ಈಗ ಚಂದ್ರಪ್ಪ ಹಾಗೂ ರಘುಚಂದನ್‌ ನಿಮ್ಮ ಚುನಾವಣೆ ನಮ್ಮದೇ ಜವಾಬ್ದಾರಿ ಅಂದಿದ್ದಾರೆ. ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ‌ ಮಾಡಲು ಸಂಪೂರ್ಣ ಬೆಂಬಲ ಕೊಡ್ತೀನಿ ಎಂದು ಹೇಳಿದರು.ಇದಕ್ಕೂ ಮುನ್ನ ಮಾತಾಡಿದ ಶಾಸಕ ಚಂದ್ರಪ್ಪ, ನಾವೂ ಕೂಡ 2019ರಲ್ಲಿ ಟಿಕೆಟ್ ಕೇಳಿದ್ದು, ಕೊಡುವ ಭರವಸೆ ನೀಡಿದ್ದರು, ಆ ಹಿನ್ನೆಲೆಯಲ್ಲಿ ಕ್ಷೇತ್ರದ ತುಂಬಾ ಪುತ್ರ ರಘು ಚಂದನ್ ಸುತ್ತಾಡಿ ಪಕ್ಷ ಸಂಘಟನೆ ಮಾಡಿದ್ದರು, ಆದರೆ ಅನಿವಾರ್ಯ ಕಾರಣಕ್ಕಾಗಿ ಈಗ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗಿದೆ. ಹಿರಿಯರ ಆದೇಶದಂತೆ ಎಲ್ಲವನ್ನು ಮರೆತು ನಾವು ಕಾರಜೋಳ ಗೆಲುವಿಗೆ ಶ್ರಮಿಸುತ್ತೇವೆ. ಹೊಳಲ್ಕೆರೆಯಲ್ಲಿ ಮತ ಹಾಕಿಸುವ ಕೆಲಸ ಮಾಡುತ್ತೇವೆ. ಕೊಟ್ಟ ಮಾತಿಗೆ ನಾವು ಬದ್ದರಾಗಿದ್ದೇವೆ. ಎಂದೂ ಕೂಡ ನಾವು ಹಿಂದೆ ಸರಿಯುವುದಿಲ್ಲ ಎಂದು.
ಟಿಕೆಟ್ ವಂಚಿತ ರಘುಚಂದನ್ ಮಾತಾಡಿ, ಪಕ್ಷದ ಹೈ ಕಮಾಂಡ್ ಗೋವಿಂದ ಕಾರಜೋಳ‌ ಅವರಿಗೆ ಟಿಕೆಟ್ ನೀಡಿದೆ. ಅವರು ನಮ್ಮನ್ನು ಹೇಗೆ ಬಳಿಸಿಕೊಳ್ಳುತ್ತಾರೋ ಅದರಂತೆ ಎಲೆಕ್ಷನ್ ಮಾಡುತ್ತೇವೆ. ನಮಗೆ ಮತ್ತೊಮ್ಮೆ ಮೋದಿ ಪ್ರಧಾಬಿಯಾಗಬೇಕಿದೆ. ನಮ್ಮನ್ನು ಕ್ಷೇತ್ರಕ್ಕೆ ಸೀಮಿತವಾಗಿ ಬಳಿಸಿಕೊಂಡರೂ ಸರಿ‌ಅಥವ ಜಿಲ್ಲೆಯ ತುಂಬೆಲ್ಲಾ ಓಡಾಡಿಕೊಂಡು ಕೆಲಸ ಮಾಡು ಅಂದರೂ‌ ಮಾಡುತ್ತೇವೆ ಎಂದರು.‌ಒಟ್ಟಿನಲ್ಲಿ ಈ ಒಂದು‌ ಭೇಟಿಯಿಂದ ಗೋವಿಂದ ಕಾರಜೋಳ ನಿರಾಳರಾಗಿದ್ದಾರೆ.

 

ಮೊಳಕಾಲ್ಮೂರಲ್ಲಿ ಬಿಜೆಪಿಯಿಂದ ಮತದಾರರಿಗೆ ಹಣ ನೀಡುವ ಕುರಿತು ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಭ್ಯರ್ಥಿ
ಅದೆಲ್ಲ ಸತ್ಯಕ್ಕೆ ದೂರವಾದ ಮಾತು, ಚುನಾವಣೆಯಲ್ಲಿ ಅಪಪ್ರಚಾರಗಳು ನಡೆಯುತ್ತೆವೆ. ಅದಕ್ಕೆ ನಾವು ಬೆಲೆ‌ ಕೊಡಬಾರದು. ನಮ್ಮ ಕಡೆ ಆ ಪದ್ಧತಿಯೇ ಇಲ್ಲ ಎಂದು ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.

Leave a Reply

Your email address will not be published. Required fields are marked *