Chitradurga matadhisharu samajamukhiyagi kelasa madbekuu

ನಮ್ಮ ಮಂತ್ರಿ ಮಂಡಲದಲ್ಲಿ ವಿಶ್ವಾಸವಿಲ್ಲದವರು ಹೊರಗೆ ಹೋಗಬಹುದು : ಸಂಸದ ನಾರಾಯಣಸ್ವಾಮಿ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಯಾವುದೇ ಶಾಸಕ, ಸಚಿವರಾಗಲಿ ನಮ್ಮ ಮಂತ್ರಿ ಮಂಡಲದಲ್ಲಿ ವಿಶ್ವಾಸವಿಲ್ಲದೆ ಹೋಗಿದ್ದಲ್ಲಿ ಅಂತವರು ಹೊರಗೆ ಹೋಗಬಹುದು ಎಂದು ಸಂಸದ ಎ.‌ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

 

 

 

Chitradurga if not believe in our cabinet just go out
ಅವರು ಹಿರಿಯೂರಿನಲ್ಲಿ
ಕೋವಿಡ್ ನಿಂದನೆ ಗುಣಮುಖರಾಗಿ ಹೊರಗೆ ಬಂದಂತಹವರಿಗೆ ಆಹಾರಧಾನ್ಯಗಳ ಕಿಟ್ ವಿತರಿಸಿ ಮಾತನಾಡುತ್ತಾ, ಕೋವಿಡ್ ಸಂಕಷ್ಟ ಕಾಲದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಗಳು ಶೋಚನೀಯ, ಬಿಜೆಪಿ ಪಕ್ಷ ಹಾಗೂ ನಮ್ಮ ಸರ್ಕಾರದಲ್ಲಿ ಇದು ನಡಿಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿಪಿ ಯೋಗೀಶ್ವರ್ ತನ್ನ ಸಮಸ್ಯೆ ಇದ್ದರೆ ಅದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಪಕ್ಷದ ಒಳಗೆ ಕುಳಿತು ಚರ್ಚಿಸಬೇಕಾಗಿತ್ತು. ಆದರೆ ಅವರು ದೆಹಲಿಗೆ ಹೋಗಿ ಸಿಎಂ ಕಾರ್ಯವೈಖರಿ ಹಾಗೂ ಅವರ ಬದಲಾವಣೆ ಬಗ್ಗೆ ಮಾತನಾಡಿರುವುದು ಅಪರಾಧ. ಶಾಸಕರು, ಸಚಿವರು ಯಾರೇ ಆಗಲಿ ಪಕ್ಷದ ಆಂತರಿಕ ವಿಚಾರವನ್ನು ಆಂತರಿಕವಾಗಿ ಚರ್ಚಿಸಬೇಕೇ ಹೊರೆತು ಹೊರಗೆ ಮಾತನಾಡಬಾರದು. ಕೋವಿಡ್ ನಂತಹ ಸಂಕಷ್ಟದ ಕಾಲದಲ್ಲಿ ಸಿಎಂ ಅವರು ಬಹಳ ಉತ್ಸುಕರಾಗಿ, ಅತ್ಯಂತ ಕಾಳಜಿಯಿಂದ. ಕೆಲಸ ಮಾಡುತ್ತಿದ್ದಾರೆ. ಮೊದಲನೆ ಅಲೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು, ಅದೇ ರೀತಿ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಎಲ್ಲಿಂದಲೋ‌ ಬಂದವರಲ್ಲ ಸುಮಾರು 40 ವರ್ಷಗಳ ಕಾಲದಲ್ಲಿ ಪುರಸಭಾ, ನಗರಸಭಾ ವಿಧಾನ ಸಭಾ ಹೀಗೆ ಹಂತ ಹಂತವಾಗಿ ಮೇಲೆ ಬಂದವರು, ಇಂತಹವರ ಬಗ್ಗೆ ಯೋಗಿಶ್ವರ್ ಮಾತನಾಡಿರುವುದು ಶೋಚನೀಯ ಎಂದು ಸಂಸದ ನಾರಾಯಣಸ್ವಾಮಿ ಕಿಡಿ‌ಕಾರಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *