ಕುಡಿಯುವ ನೀರಿಗೆ 276 ಕೋಟಿ ಮಂಜೂರು : ಶಾಸಕ ಎಂ. ಚಂದ್ರಪ್ಪ

ಜಿಲ್ಲಾ ಸುದ್ದಿ

ಚಿತ್ರದುರ್ಗ,ಮೇ28(ಹಿಸ)- ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಹೊಳಲ್ಕೆರೆ ಕ್ಷೇತ್ರಕ್ಕೆ 276 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಒಂದು ವರ್ಷದೊಳಗೆ ಮುಗಿಸಿ ಜನರಿಗೆ ನೀರು ಕೊಡಲಾಗುತ್ತದೆ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹೇಳಿದರು.

Chitradurga govt sanction for drinking water

 

 

 

ಅವರು ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.

ಹಿರಿಯೂರಿನ ವಾಣಿ ವಿಲಾಸ ಸಾಗರದಿಂದ ನೀರು ತಂದು ಹೊಳಲ್ಕೆರೆ ಜನತೆಗೆ ಕುಡಿಯುವ ನೀರು ಕೊಡಲಾಗುತ್ತದೆ. ಇದಕ್ಕಾಗಿ ಸರ್ಕಾರ 276 ಕೋಟಿ ಹಣ ಬಿಡಗಡೆ ಮಾಡಿದೆ. ಹೊಳಲ್ಕೆರೆಯ ಸುಮಾರು ಮುನ್ನೂರು ಗ್ರಾಮಗಳಿಗೆ ಇದರ ಪ್ರಯೋಜನವಾಗಲಿದೆ. ವಾಣಿ‌ವಿಲಾಸ ಜಲಾಶಯ ಗುಡ್ಡದಲ್ಲಿ ಒಂದು ಟ್ಯಾಂಕ್ ನ್ನು ನಿರ್ಮಿಸಿ ಅಲ್ಲಿಯೇ ಫಿಲ್ಟರ್ ಅಳವಡಿಸಲಾಗುತ್ತದೆ. ಅಲ್ಲಿಂದಲೇ ನೀರು ಫಿಲ್ಟರ್ ಆಗಿ ಶುದ್ದ ಕುಡಿಯುವ ನೀರನ್ನು ಹೊಳಲ್ಕೆರೆ ಜನತೆಗೆ ಪೂರೈಸಲಾಗುತ್ತದೆ. ಈಗ ಯೋಜನೆಯೂ 276 ಕೋಟಿ ಇದ್ದು ಮುಂದೆ ಅದು 300 ಕೋಟಿಯಾಗಬಹುದು ಎಂದು ಹೇಳಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *