ಕೋಟೆ ನಾಡಿನಲ್ಲಿ ಶಿಕ್ಷಕರಲ್ಲಿ ಕೋರೋನಾ ಸೋಂಕು ಮನೆ ಮಾಡಿದ ಆತಂಕ

ಆರೋಗ್ಯ ಜಿಲ್ಲಾ ಸುದ್ದಿ

ಚಿತ್ರದುರ್ಗ:  ಕೋಟೆ ನಾಡಿನಲ್ಲಿ ಮೂವರು ಶಿಕ್ಷಕರು,  ಗುಮಾಸ್ತ ಸೇರಿ ದಂತೆ  ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಆರು ಜನರಿಗೆ ಸೋಂಕು ತಗುಲಿದ್ದು, ಹೊಸದುರ್ಗದಲ್ಲಿ ಆತಂಕ ಮನೆ ಮಾಡಿದೆ.

Chitradurga 3 teachers and other 3 people has covid positive

 

 

 

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಶ್ರೀರಾಂಪುರದ ಮುರಾರ್ಜಿ  ದೇಸಾಯಿ ವಸತಿ ಶಾಲೆಯ  ಗುಮಾಸ್ತ, ಅದೇ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ  ಶಿಕ್ಷಕಿ, ಗರಗ ಅನುದಾನಿತ   ಶಾಲೆಯ ಶಿಕ್ಷಕ ಹಾಗೂ ಅರೇ ಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹಾಗೂ   ಬೆಲವೆತ್ತ ಗ್ರಾಮದ ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಶಾಲೆ ಆರಂಭವಾಗುವ ಮುನ್ನ ಕೋವಿಡ್ ಟೆಸ್ಟ್ ನ್ನು ಶಿಕ್ಷಕರು ಹಾಗೂ ಸಿಬ್ಬಂದಿ ಮಾಡಿಸಿದ್ದು, ಇದೀಗ ವರದಿ ಬಂದಿದೆ. ಶಾಲೆಗೆ ಹಾಜರಾಗಿದ್ದ ಇಬ್ಬರು  ವಿದ್ಯಾರ್ಥಿಗಳಿಗೆ ಕೋವಿಡ್ ಲಕ್ಷಣ ಕಂಡು ಬಂದಿದ್ದು, ಒಟ್ಟು ಆರು ಮಂದಿ ಸೋಂಕಿತರು ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಾರದ ಹಿನ್ನೆಲೆಯಲ್ಲಿ  ಭಾರಿ ಅನಾಹುತ ತಪ್ಪಿದೆ. ಹಾಜರಾತಿ ಕಡ್ಡಾಯ ಎಂಬ ಕಾರಣಕ್ಕೆ ಶಿಕ್ಷಕರು ಶಾಲೆಗೆ ಅಗಮಿಸಿದ್ದು, ಈಗ ಶಿಕ್ಷಕರನ್ನು ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಕೋವಿಡ್ ತಪಾಸಣೆಗೆ  ಕ್ರಮ ವಹಿಸಲಾಗಿದೆ ಎಂದು ಡಿಡಿಪಿಐ  ರವಿಶಂಕರ್ ರೆಡ್ಡಿ ಹೇಳಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *