ಕಂದಾಯ ಪಾವತಿಸಿ ಮಿತವಾಗಿ ನೀರು ಬಳಿಸಿ: ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ

ಜಿಲ್ಲಾ ಸುದ್ದಿ

ಚಿತ್ರದುರ್ಗ : ನಗರಸಭೆಗೆ ನೀರಿನ ಕಂದಾಯವನ್ನು ಪಾವತಿ ಮಾಡುವುದರ ಮೂಲಕ ನೀರನ್ನು ಉಪಯೋಗ ಮಾಡುವಂತೆ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ನಾಗರೀಕರಲ್ಲಿ ಮನವಿ ಮಾಡಿದರು.Chitradurga pay revenue and use water

 

ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯ ಮಹೇಶ್ವರಿ ಬಡಾವಣೆಯಲ್ಲಿ ಈ ಭಾಗದ ಜನತೆಗೆ ವಿವಿಸಾಗರದ ನೀರಿನ ಸೌಕರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗ ನಗರಸಭೆಗೆ ಸೇರ್ಪಡೆಯಾಗಿಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ ಆದರೂ ಸಹಾ ಮಾನವೀಯತೆಯ ದೃಷ್ಟಿಯಿಂದ ನೀರನ್ನು ನೀಡಲಾಗುತ್ತಿದೆ, ನಗರಸಭೆಗೆ ನೀರಿನ ಸಂಪರ್ಕವನ್ನು ಪಡೆದು ಕಂದಾಯವನ್ನು ನೀಡುವುದರ ಮೂಲಕ ನೀರನ್ನು ಉಪಯೋಗ ಮಾಡಿ, ವಿನಾಕಾರಣ ನೀರನ್ನು ಹಾಳು ಮಾಡಬೇಡಿ, ಗಾಡಿಗಳನ್ನು ತೊಳೆಯಬೇಡಿ, ನಿಮಗೆ ಸಾಕಾದರೆ ಬಂದ್ ಮಾಡಿ ಬೇರೆಯವರಿಗೆ ಹೋಗುತ್ತದೆ ಎಂದು ನಾಗರೀಕರಿಗೆ ಕಿವಿ ಮಾತು ಹೇಳಿದರು.

 

 

 

ಚಳ್ಳಕೆರೆ ಗೇಟ್ ಅಕ್ಕ-ಪಕ್ಕದಲ್ಲಿ ವಿವಿಧ ಹೆಸರಿನಲ್ಲಿ ಬಡಾವಣೆಗಳು ಇವೆ. ಇದರಿಂದ ಜನರಿಗೆ ತೊಂದರೆಯಾಗುತ್ತದೆ ಇದರ ಬದಲಾಗಿ ಈ ಭಾಗದಲ್ಲಿ ಹೆಸರು ಮಾಡಿರುವ ಕಣಿವೆ ಮಾರಮ್ಮನ ಹೆಸರಿನಲ್ಲಿ ಎಲ್ಲವನ್ನು ಸೇರಿ ಕಣಿವೆ ಮಾರಮ್ಮ ಬಡಾವಣೆ ಎಂದು ನಾಮಕರಣ ಮಾಡುವಂತೆ ಅ ಭಾಗವದ ಜನರಿಗೆ ಸಲಹೆ ನೀಡಿದ ಶಾಸಕರು, ಈ ಭಾಗದಲ್ಲಿ ಅರ್ಧಕ್ಕೆ ನಿಂತಿರುವ ಸಿ.ಸಿ.ರಸ್ತೆ ಕಾಮಗಾರಿಯನ್ನು ಪೂರ್ಣ ಮಾಡಲು ೧.೫೦ ಕೋಟಿ ರೂ.ಗಳನ್ನು ನೀಡಲಾಗಿದೆ ಮುಂದಿನ ದಿನದಲ್ಲಿ ರಸ್ತೆ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

ಚಳ್ಳಕೆರೆ ಗೇಟ್ ಬಳಿಯ ಅಕ್ಕ-ಪಕ್ಕದಲ್ಲಿ ರಸ್ತೆಯನ್ನು ಆಗಲ ಮಾಡುವುದರ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಗಾಡಿಗಳನ್ನು ಇಟ್ಟುಕೊಳ್ಳಲು ಆನುಕೂಲವಾಗುವಂತೆ ವಾತಾವರಣವನ್ನು ನಿರ್ಮಾಣ ಮಾಡಲಾಗುವುದು, ಈಗ ಯಾರು, ಎಷ್ಟು ಜನ ಇದ್ದಾರೆ ಎಂದು ಪಟ್ಟಿಯನ್ನು ತಯಾರು ಮಾಡಿ, ಕಡಿಮೆ ಇದ್ದರೆ ಕೂಡಲೇ ಮಂಜೂರು ಮಾಡಲಾಗುವುದು ಜಾಸ್ತಿಯಾದರೆ ಲಾಟರಿ ಮೂಲಕ ಜಾಗವನ್ನು ಹಂಚಿಕೆ ಮಾಡಲಾಗುವುದು ಎಲ್ಲರು ಸಹಾ ಬದುಕಲಿಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸ್ಥಳಕ್ಕೆ ಆಗಮಿಸಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀಮತಿ ತಾರಕೇಶ್ವರಿ, ಆಯುಕ್ತರಾದ ಹನುಮಂತರಾಜು, ಇಂಜಿನಿಯರ್ ಕಿರಣ್, ಮನೋಹರ್, ಬಡಾವಣೆಯ ಮುಖಂಡರಾದ ವೆಂಕಟಸ್ವಾಮಿ, ರಮೇಶ್ ರೆಡ್ಡಿ, ರಾಜೀವ್, ನಾಗಭೂಷಣ, ಪ್ರಭಾವತಿ, ಯಶೋಧಮ್ಮ, ಚಂದ್ರಕಲಾ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಡಿ.ಎಂ.ಎಫ್ ಆನುದಾನದ ೨೦ ಲಕ್ಷ ರೂ.ವೆಚ್ಚದಲ್ಲಿ ನಗರದ ರಾ.ಹೆ.೧೩ರ ಕನಕ ನಗರದಲ್ಲಿ ಸಿಸಿ.ರಸ್ತೆ ಕಾಮಗಾರಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು.

Leave a Reply

Your email address will not be published. Required fields are marked *