Chitradurga can lock down continue in chitradurga

ಕೋಟೆ ನಾಡಲ್ಲಿ ಲಾಕ್ ಡೌನ್ ಸಡಲಿಕೆ ಏನಿರುತ್ತೇ ಏನಿಲ್ಲ ಇಲ್ಲಿದೆ ಮಾಹಿತಿ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಸರ್ಕಾರದಿಂದ ಬಿಡುಗಡೆಯಾಗಿರುವ ಕೋವಿಡ್ ಗೈಡ್ ಲೈನ್ ನಲ್ಲಿ ಚಿತ್ರದುರ್ಗದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಬಿಟ್ಟರೆ ಮತ್ಯಾವುದೇ ಬದಲಾವಣೆ ಇಲ್ಲ ಮುಂದಿನ ಎರಡು ವಾರಗಳು ಹಿಂದಿನ ಗೈಡ್ ಲೇನ್ ನಂತೆಯೇ ಮುಂದುವರೆಯಲಿದೆ ಎಂದು ಎಸ್ಪಿ ರಾಧಿಕಾ ಹೇಳಿದರು.

 

 

 

Chitradurga no changes in lockdown

ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ಕೋವಿಡ್ ಗೆ ಸಂಬಂಧಿಸಿದಂತೆ ಹೊಸದಾಗಿ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದ್ದಾರೆ. ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಇನ್ನು ಎರಡು ವಾರಗಳು ಕೂಡ ಬೆಳಗ್ಗೆ ಆರರಿಂದ ಮಧ್ಯಾಹ್ನ ಎರಡವರೆಗು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ, ಹೊಟೇಲ್ ಗಳಲ್ಲಿ ಪಾರ್ಸಲ್ , ಹಾಲು ಹಣ್ಣು ತರಕಾರಿ ಖರೀದಿಗೆ ಅವಕಾಶ ನೀಡಲಾಗಿದೆ.‌ ಆಸ್ಪತ್ರೆ ಹಾಗೂ ಅರೋಗ್ಯಕ್ಕೆ ಸಂಬಂಧಿಸಿದಂತೆ ಔಷಧಿ ಅಂಗಡಿಗಳು 24*7 ಕೆಲಸ ಮಾಡಲಿವೆ. ಕೋವಿಡ್ ಗೆ ಸಂಬಂಧಿಸಿದಂತ ಕಚೇರಿಗಳಲ್ಲಿ, ಬಟ್ಟೆ ತಯಾರಿಕಾ ಕಾರ್ಖಾನೆಗಳಿಗೆ ಶೇಕಡ 30 ರಷ್ಟು ಜನರನ್ನು ಬಳಸಿಕೊಂಡು ಕೆಲಸ ಆರಂಭಿಸಬಹುದಾಗಿದೆ. ಬಟ್ಟೆ ಅಂಗಡಿಗಳು, ಬಂಗಾರದ ಅಂಗಡಿಗಳು ಮತ್ತು ಚಪ್ಪಲಿ ಅಂಗಡಿಗಳು ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ.ವೀಕೇಂಡ್ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಗಳು ಜಾರಿಯಲ್ಲಿರುತ್ತದೆ.ವಿಕೇಂಡ್ ಕರ್ಫ್ಯೂ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗಿನ 5 ಗಂಟೆವೆರೆಗೆ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಆರೋಗ್ಯ ಔಷಧಿ ಸಂಬಂಧಿಸಿದ ವ್ಯಕ್ತಿಗಳಾಗಲಿ, ವಾಹನಗಳಾಗಲಿ ಬಿಟ್ಟು ಬೇರೆ ಯಾರೂ ಯಾವುದೇ ಕಾರಣಕ್ಕು ಓಡಾಡುವಂತಿಲ್ಲ. ಅನಗತ್ಯವಾಗಿ ಓಡಾಡುವವರು ಕಂಡು ಬಂದರೆ ಅಂತವರ ಮೇಲೆ ಕಠಿಣ ಕ್ರಮ‌ಜರುಗಿಸಲಾಗುತ್ತದೆ ಎಂದು‌ ಎಸ್ಪಿ ರಾಧಿಕಾ ತಿಳಿಸಿದರು
ಸಂಯುಕ್ತವಾಣಿ

Leave a Reply

Your email address will not be published. Required fields are marked *